kannada actress nandini cm death: ಸೀರಿಯಲ್ನಲ್ಲಿ ಸಾಯುವ ದೃಶ್ಯವಿತ್ತು, ರಿಯಲ್ ಆಗಿಯೂ ಕನ್ನಡ ನಟಿ ನಂದಿನಿ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕೊಟ್ಟೂರು ಮೂಲದ ನಟಿ ನಂದಿನಿ ಅವರು ಅಸು ನೀಗಿದ್ದಾರೆ.

ಜೀವ ಹೂವಾಗಿದೆ, ಸಂಘರ್ಷ, ನೀನಾದೆ ನಾ ಧಾರಾವಾಹಿ ಖ್ಯಾತಿಯ ನಟಿ ನಂದಿನಿ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಆರ್ ಆರ್ ನಗರದಲ್ಲಿ ಈ ಘಟನೆ ನಡೆದಿದೆ.

ಮೂಲತಃ ಕೊಟ್ಟೂರಿನವರಾದ ನಂದಿನಿ ಸಿ ಎಂ ಅವರು ಬೆಂಗಳೂರಿನಲ್ಲಿ ವಾಸವಿದ್ದರು. ಕನ್ನಡದ ಜೀವ ಹೂವಾಗಿದೆ, ಸಂಘರ್ಷ, ಮಧುಮಗಳು, ನೀನಾದೆ ನಾ ಧಾರಾವಾಹಿಗಳಲ್ಲಿ ಅವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ತಮಿಳು ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದರು. ತಮಿಳಿನ ಗೌರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಈ ಧಾರಾವಾಹಿಯಲ್ಲಿ ಕನಕ ಹಾಗೂ ದುರ್ಗಾ ಎನ್ನುವ ದ್ವಿಪಾತ್ರದಲ್ಲಿ ಅವರು ನಟಿಸುತ್ತಿದ್ದರು.

ಗೌರಿ ಧಾರಾವಾಹಿಯ ಅವರ ಪಾತ್ರದಲ್ಲಿ ಕೂಡ ವಿಷ ಕುಡಿಯುವ ದೃಶ್ಯವಿತ್ತು. ಈಗ ಅವರು ರಿಯಲ್ ಆಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ನಂದಿನಿ ಸಿಎಂ ಅವರು ಯಾವ ಕಾರಣಕ್ಕೆ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅಂದಹಾಗೆ ತಮಿಳಿನ ಕಲಾವಿದರು ಬೆಂಗಳೂರಿಗೆ ಬಂದು, ನಟಿಯ ಪಾರ್ಥಿವ ಶರೀರರದ ದರ್ಶನ ಪಡೆಯಲಿದ್ದಾರೆ ಎನ್ನಲಾಗಿದೆ.

Source link
ಸೀರಿಯಲ್ನಲ್ಲಿ ಸಾಯುವ ದೃಶ್ಯ ಮಾಡಿ, ರಿಯಲ್ ಆಗಿ ಆ*ತ್ಮಹತ್ಯೆ ಮಾಡ್ಕೊಂಡ ಕನ್ನಡ ನಟಿ ನಂದಿನಿ