ಬೆಂಗಳೂರು, (ಡಿಸೆಂಬರ್ 29): ದೌರ್ಜನ್ಯ ಪ್ರಕರಣದಲ್ಲಿ (ಹಲ್ಲೆ ಪ್ರಕರಣ) ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣಗೆ (ಎಚ್.ಡಿ.ರೇವಣ್ಣ) ರಿಲೀಫ್ ಸಿಕ್ಕಿದೆ. ಎಚ್. ಡಿ. ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354ಎ ಅಡಿ ಪ್ರಕರಣವನ್ನು ಕೋರ್ಟ್ ಕೈ ಬಿಟ್ಟಿದೆ. ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕೆ ದೌರ್ಜನ್ಯ ಕೇಸ್ ನಲ್ಲಿ ಐಪಿಸಿ ಸೆಕ್ಷನ್ 354ಎ ಅಡಿಯ ಆರೋಪದ ಕೇಸ್ ಪರಿಗಣನೆಗೆ ಬೆಂಗಳೂರಿನ 42ನೇ ಇಸಿಜೆಎಂ ಜಡ್ಜ್ ಕೆ.ಎನ್.ಶಿವಕುಮಾರ್ ನಿರಾಕರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾದ ಹೆಚ್.ಡಿ.ರೇವಣ್ಣ ವಿರುದ್ಧ ಎರಡು ಸೆಕ್ಷನ್‌ಗಳಲ್ಲಿ ಹೈಕೋರ್ಟ್, ಸೆಕ್ಷನ್ 354 ರದ್ದಾಯಿತು. ಇದೀಗ ಮತ್ತೊಂದು ಸೆಕ್ಷನ್ ಕೋರ್ಟ್ ಕೈಬಿಟ್ಟಿದ್ದು, ರೇವಣ್ಣಗೆ ರಿಲೀಫ್ ಸಿಕ್ಕಂತಾಗಿದೆ.
ಈ ಹಿಂದೆಯೂ ಒಂದು ಸೆಕ್ಷನ್ ನಿಂದ ಬಚಾವ್
ಹೊಳೆನರಸಿಪುರದ ಮಹಿಳೆ ಹೆಚ್ ಡಿ ರೇವಣ್ಣ ವಿರುದ್ಧ ದೂರು ದಾಖಲಿಸಿದ್ದರು. ಈ ಹಿಂದೆ ಇದೇ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧಿತ. ಎರಡು ಸೆಕ್ಷನ್‌ಗಳಲ್ಲಿ ಒಂದು ಸೆಕ್ಷನ್ ರದ್ದುಪಡಿಸಿತ್ತು. 354 ಎಡಿಯ ಕೇಸ್ ಕಾಗ್ನಿಜೆನ್ಸ್ ಪಡೆಯಲು 42 ನೇ ಎಸಿಜೆಎಂ ಕೋರ್ಟ್ ನಿರಾಕರಿಸಿದೆ. ಹೀಗಾಗಿ ಐಪಿಸಿ ಸೆಕ್ಷನ್ 354ಎ ಅಡಿಯ ಕೇಸ್ ರದ್ದಾಗಿದೆ. ಮಹಿಳೆ ವಿಳಂಬವಾಗಿ ಕೇಸ್ ದಾಖಲಿಸಿದ ಕಾರಣಕ್ಕಾಗಿ ಐ ಸೆಕ್ಷನ್ 354ಎ ಅಡಿಯ ಆರೋಪದ ಪ್ರಕರಣವನ್ನು ಪರಿಗಣಿಸಲು ನಿರಾಕರಿಸಲಾಗಿದೆ.
ಏನು ಹೇಳುತ್ತೆ ಈ 354A ಸೆಕ್ಷನ್ ?
ಯಾವುದೇ ಪುರುಷ ಕೆಳಗಿನ ಕೃತ್ಯಗಳಲ್ಲಿ ತೊಡಗಿದರೆ, ಅವನು ಕಿರುಕುಳದ ಅಪರಾಧವನ್ನು ಮಾಡಿದ್ದಾನೆ. ಅಸಮ್ಮತಿ ಮತ್ತು ಸ್ಪಷ್ಟವಾಗಿ ಆಸಕ್ತಿಯನ್ನು ತೋರಿಸುವ ದೈಹಿಕ ಸ್ಪರ್ಶ, ಪರವಾಗಿ ಬೇಡಿಕೆ ಅಥವಾ ವಿನಂತಿ ಮಾಡುವುದು, ಮಹಿಳೆಯ ಇಚ್ಛೆಯಂತೆ ಅಶ್ಲೀಲಾ ಚಿತ್ರಗಳನ್ನು ತೋರಿಸುವುದು, ಪ್ರತಿಯಾಗಿ ಆಕ್ರಮಣಕಾರಿ ಟೀಕೆಗಳನ್ನು ಮಾಡುವುದು. ಈ ಮೇಲಿನ ಅಪರಾಧಗಳಿಗೆ ಗರಿಷ್ಠ ಮೂರು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ, ದಂಡ, ಅಥವಾ ಎರಡೂ.
ಸೆಕ್ಷನ್ 354 ಅಡಿಯ ಕೇಸ್ ಅನ್ನು ರದ್ದುಪಡಿಸಿತ್ತು. ಈಗ 354A ಅಡಿಯ ಕೇಸ್ ಅನ್ನು ಬೆಂಗಳೂರಿನ 42ನೇ ಎಸಿಜೆಎಂ ಕೋರ್ಟ್ ಕೈಬಿಟ್ಟಿದೆ. ಹೀಗಾಗಿ ಒಟ್ಟಾರೆ ಪ್ರಕರಣದಿಂದ ಹೆಚ್ ಡಿ ರೇವಣ್ಣಗೆ ರಿಲೀಫ್ ಸಿಕ್ಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 7:28 pm, ಸೋಮ, 29 ಡಿಸೆಂಬರ್ 25