ಬೆಂಗಳೂರು, (ಡಿಸೆಂಬರ್ 29): ಕರ್ನಾಟಕವನ್ನ ಡ್ರಗ್ಸ್ ಮುಕ್ತ ರಾಜ್ಯ ಮಾಡಬೇಕು ಎನ್ನುವ ಪೋಲೀಸರ ಕನಸು,ಸರ್ಕಾರದ ಯೋಜನೆಗೆ ಜನ ಶಬ್ಬಾಶ್ ಅಂದಿದ್ರು. ಆದರೆ, ಸಿಲಿಕಾನ್ ಸಿಟಿಯಲ್ಲೇ ಡ್ರಗ್ಸ್ ಫ್ಯಾಕ್ಟರಿ (ಔಷಧ ತಯಾರಿಕಾ ಘಟಕಗಳು) ಇರೋದನ್ನ ಪತ್ತೆ ಮಾಡಿದ್ದಾರೆ. ಹೌದು…ಮಹಾರಾಷ್ಟ್ರದ ಪತ್ತೆ ಹಚ್ಚಿದ ಡ್ರಗ್ಸ್ ಫ್ಯಾಕ್ಟರಿಯನ್ನು ಪತ್ತೆ ಮಾಡಿದ್ದು, ಈ ಸಂಬಂಧ ಇದೀಗ ಮೂವರು ಇನ್ಸ್ ಪೆಕ್ಟರ್ ಸಸ್ಪೆಂಡ್ ಆಗಿದ್ದಾರೆ. ಬೆಂಗಳೂರು (ಬೆಂಗಳೂರು) ಕೊತ್ತನೂರು, ಆವಲಹಳ್ಳಿ ಮತ್ತು ಬಾಗಲೂರು ಠಾಣೆಯ ಇನ್ಸ್ ಪೆಕ್ಟರ್ ಗಳನ್ನು ಅಮಾನತು ಮಾಡಿ ಕಾಮಿನರ್ಸ್ ಆದೇಶ ಹೊರಡಿಸಿದ್ದಾರೆ.
ಮೂರು ಠಾಣೆಯ ಇನ್ಸ್ ಪೆಕ್ಟರ್ ಗಳ ಅಮಾನತು
ಬೆಂಗಳೂರಿನ ಕೊತ್ತನೂರು ಠಾಣೆ ಇನ್ಸ್ ಪೆಕ್ಟರ್ ಚೇತನ್ ಕುಮಾರ್, ಆವಲಹಳ್ಳಿ ಠಾಣೆಯ ಇನ್ಸ್ ಪೆಕ್ಟರ್ ರಾಮಕೃಷ್ಣ ರೆಡ್ಡಿ ಹಾಗೂ ಬಾಗಲೂರು ಠಾಣೆಯ ಇನ್ಸ್ ಪೆಕ್ಟರ್ ಶಬರೀಶ್ ಅವರನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಇನ್ಸ್ ಪೆಕ್ಟರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ನಲ್ಲಿ ಮಾಸ್ಟರ್ ಮೈಂಡ್?
ಪ್ರಭಾರಿ ಇನ್ಸ್ ಪೆಕ್ಟರ್ ಗಳ ನೇಮಕ
ಇನ್ನು ಅಮನತುಗೊಂಡಿರುವ ಮೂರು ಠಾಣೆಯ ಇನ್ಸ್ ಪೆಕ್ಟರ್ ಜಾಗಕ್ಕೆ ಹೊಸದಾಗಿ ಮೂವರು ಪ್ರಭಾರ ಇನ್ಸ್ ಪೆಕ್ಟರ್ ಗಳನ್ನು ನೇಮಿಕ ಮಾಡಲಾಗಿದೆ. ಶಾನ್ಯ ವಿಭಾಗ ಮಹಿಳಾ ಪೊಲೀಸ್ ಠಾಣೆ ಪಿಐ ವೆಂಕಟೇಶ್ ಅವರನ್ನು ಬಾಗಲೂರು ಠಾಣೆಗೆ ಪ್ರಭಾರ ಇನ್ಸ್ ಪೆಕ್ಟರ್ ಆಗಿ ನೇಮಿಸಲಾಗಿದೆ. ಸದ್ಯ ಕೆ.ಆರ್ ಪುರಂ ಠಾಣೆ ಇನ್ಸ್ ಪೆಕ್ಟರ್ ಆಗಿರುವ ರಾಮಮೂರ್ತಿ ಅವರನ್ನು ಆವಲಹಳ್ಳಿ ಠಾಣೆಗೆ ಪ್ರಭಾರಿಯಾಗಿ ನೇಮಿಸಲಾಗಿದೆ. ಇನ್ನು ಪ್ರಸ್ತುತ ಸಂಪಿಗೆಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಚಂದ್ರಶೇಖರ್ ಅವರನ್ನ ಕೊತ್ತನೂರು ಠಾಣೆಗೆ ಪ್ರಭಾರಿ ಇನ್ಸ್ ಪೆಕ್ಟರ್ ಆಗಿ ನೇಮಿಸಲಾಗಿದೆ.
ಕ್ರೆಡಿಟ್ ವಾರ್
ಇದೆಲ್ಲ ಒಂದು ಕಡೆಯಾದ್ರೆ ಬೆಂಗಳೂರು ಪೊಲೀಸರು ಕ್ರೆಡಿಟ್ ವಾರ್ ಗೆ ಇಳಿದಿದ್ದಾರೆ. ಡ್ರಗ್ಸ್ ಬೇಟೆಯಲ್ಲಿ ಮಹಾರಾಷ್ಟ್ರ ಪೊಲೀಸರ ಜೊತೆ ಬೆಂಗಳೂರು ಪೊಲೀಸರು, NCB ಅಧಿಕಾರಿಗಳು ಕೂಡ ಇದ್ರು. ಅಷ್ಟಲ್ಲದೇ, ದಾಳಿ ವೇಳೆ ಕಾರ್ಖಾನೆ ಇಲ್ಲ. MD ಡ್ರಗ್ಸ್‌ಗೆ ಸಂಬಂಧಿಸಿದ ವಿಶೇಷ ಪರೀಕ್ಷೆಗಳಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಆದರೆ ದಾಳಿ ವೇಳೆ 1.2 ಕೋಟಿ ರೂ. ಮೌಲ್ಯದ 4.2 ಕಿಲೋಗ್ರಾಂ MD ಮಾತ್ರ ವಶಕ್ಕೆ ಪಡೆಯಲಾಗಿದೆ. ಹಾಗೆ 17 ಕೆಜಿ ಕಚ್ಚಾ ವಸ್ತುವನ್ನು ವಶಕ್ಕೆ ಪಡೆಯಲಾಗಿದ್ರು, ಕಚ್ಚಾ ವಸ್ತುಗಳ ಒಟ್ಟು ಮೌಲ್ಯ ಇನ್ನೂ ಗೊತ್ತಾಗಿಲ್ವಂತೆ. ಆದರೆ ಪ್ರಸ್ತುತ ಸುಮಾರು 55 ಕೋಟಿ ರೂ. ಮೌಲ್ಯದ ಡ್ರಗ್ಸ್ ಎಂದಿರೋದರ ಬಗ್ಗೆ ಅಧಿಕೃತ ಸ್ಪಷ್ಟೀಕರಣ ಪಡೆಯಲಾಗಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಡ್ರಗ್ಸ ಪತ್ತೆ ಬಗ್ಗೆ ನಾವು ಕೂಡ ತನಿಖೆ ನಡೆಸುತ್ತೇವೆ. ಯಾವ ಅಧಿಕಾರಿಗಳು ಇದ್ದಾರೆಯೋ ಅಂತವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.