Shubhasya Shighram : ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ಶುಭಸ್ಯ ಶೀಘ್ರಂ ಧಾರಾವಾಹಿಯಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಸಿಕ್ಕಿದೆ. ಮದುವೆ ಅಂದ್ರೇನೆ ಉರಿದು ಬೀಳುತ್ತಿದ್ದ ಯುವರಾಜ್ ಇದೀಗ ಮದುವೆಯಾಗಿ, ಸೇರೊದ್ದು ಅತ್ತೆ ಮನೆಗೆ ಕಾಲಿಟ್ಟಿದ್ದಾನೆ. ಇನ್ನು ಮುಂದೆ ಹೆಂಡ್ತಿ ಪಾತ್ರ ಮಾಡ್ತಾನಂತೆ ಯುವ.

ಜೀ ಪವರ್ ನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಸೀರಿಯಲ್ ‘ಶುಭಸ್ಯ ಶೀಘ್ರಂ’ ನಲ್ಲಿ ಯಾರೂ ಊಹಿಸಿರದ ತಿರುವು ಸಿಕ್ಕಿದೆ. ಮದುವೆ ಅಂದ್ರೇನೆ ಉರಿದು ಬೀಳುತ್ತಿದ್ದ ಯುವರಾಜ್ ಅರಸ್ ಇದೀಗ ಮನೆ ಅಳಿಯನಾಗಿ ಸೇರೊದ್ದು ಶುಭ ಮನೆ ಸೇರುತ್ತಿದಾನೆ.

ಧಾರಾವಾಹಿಯಲ್ಲಿ ಶುಭನ ಅಕ್ಕ ಮತ್ತು ಯುವನ ತಮ್ಮನಿಗೆ ಇಬ್ಬರು ಸೇರಿ ಮದುವೆ ಮಾಡಿಸಿಯಾಗಿದೆ, ಶ್ರುತಿ ಈಗ ಯುವನ ಮನೆಗೆ ಸೊಸೆಯಾಗಿ ಎಂಟ್ರಿ ಕೊಟ್ಟಾಗಿದೆ. ಆದರೆ ಇಲ್ಲಿವರೆಗೆ ತುಂಬಾನೆ ಸೈಲೆಂಟ್ ಆಗಿದ್ದ ಶ್ರುತಿ ಮಾತ್ರ ಗಂಡನ ಮನೆ ಸೇರಿದ ಮೇಲೆ ಪೂರ್ತಿಯಾಗಿ ಬದಲಾಗಿದ್ದಾಳೆ.

ಯುವನ ಅತ್ತೆ ಮಾಡಿದ ಬ್ಲ್ಯಾಕ್ ಮೇಲ್ ನಿಂದಾಗಿ ಶ್ರುತಿ ಜೀನ ಟೀ ಶರ್ಟ್ ಹಾಕೊಂಡು, ಕುಡಿದು ತೂರಾಡುತ್ತಾ, ಮನೆಮಂದಿಗೆಲ್ಲಾಅವಮಾನ ಮಾಡುತ್ತಿದ್ದಾಳೆ. ಇದರಿಂದ ಯುವ ಸೇರಿ ಮನೆಮಂದಿಗೆ ಪೂರ್ತಿಯಾಗಿ ಗೊಂದಲ ಉಂಟಾಗಿದೆ.

ಇನ್ನೊಂದು ಕಡೆ ಶುಭ ಯುವ ಪ್ರೀತಿಯಲ್ಲಿ ಕಳೆದು ಹೋಗಿದ್ದಾಳೆ. ಯುವನಿಗೆ ಪ್ರಪೋಸ್ ಮಾಡಲೇಬೇಕು ಎಂದು ಯುವನನ್ನು ಕರೆಸಿ ನಾಚಿಗೆ ಬಿಟ್ಟು ಹೇಳ್ತೀದಿನಿ ಐ ಲವ್ ಯೂ ಎನ್ನುತ್ತಾಳೆ ಶುಭ. ಇದನ್ನ ಕೇಳಿ ಯುವನಿಗೆ ಶಾಕ್ ಆಗಿ ಆಕೆಯನ್ನು ದೂರ ತಳ್ಳುತ್ತಾನೆ.

ಅಕ್ಕ ಮತ್ತು ತಂಗಿ ಸೇರಿ ನಮ್ಮ ಸಂಸಾರನ ಹಾಳು ಮಾಡಬೇಕು ಅಂದುಕೊಂಡಿದ್ದೀರಾ? ಮದುವೆಯಾಗಿ ಬಂದು ನಿಮ್ಮ ಅಕ್ಕ ನಮ್ಮ ಸಂಸಾರವನ್ನು ಒಡೆದು ಚೂರು ಚೂರು ಮಾಡುತ್ತಿದ್ದಾಳೆ ಎನ್ನುತ್ತಾನೆ, ಇದನ್ನು ಕೇಳಿ ಸಿಟ್ಟಿಗೇಳುವ ಶುಭ ಯುವನಿಗೆ ಚಾಲೆಂಜ್ ಹಾಕುತ್ತಾಳೆ.

ಯುವನಿಗೆ ಚಾಲೆಂಜ್ ಹಾಕುವ ಶುಭ, ನೀವು ನಿಜವಾಗಿಯೂ ಯುವರಾಜ್ ಅರಸ್ ಆಗಿದ್ದರೆ, ಇನ್ನು ಆರು ತಿಂಗಳು ಹೆಂಡ್ತಿ ಪಾತ್ರ ನಿರ್ವಹಿಸಿ ನೋಡೋಣ ಎನ್ನುತ್ತಾಳೆ. ಈ ಸವಾಲನ್ನು ಒಪ್ಪಿ ಯುವ ಮತ್ತು ಶುಭ ದೇವಸ್ಥಾನಕ್ಕೆ ಹೋಗಿ ಮದುವೆಯಾಗುತ್ತಾರೆ. ಆರು ತಿಂಗಳ ಕಾಲ ಹೆಂಡತಿಯ ಪಾತ್ರವನ್ನು ಮಾಡುವುದಾಗಿ ಅಗ್ರಿಮೆಂಟ್ ಗೆ ಸಹಿ ಕೂಡ ಮಾಡ್ತಾನೆ ಯುವ.

ಮದುವೆಯಾಗಿ ನೇರವಾಗಿ ಶುಭ ಮನೆಗೆ ತೆರಳುವ ಯುವ ಅಲ್ಲಿ ಸೇರೊದ್ದು, ಬಲ ಕಾಲಿಟ್ಟು ಮನೆ ಅಳಿಯನಾಗಿ ಎಂಟ್ರಿ ಕೊಡುತ್ತಾನೆ. ಮುಂದೆ ಯುವ ಯಾವ ರೀತಿಯಾಗಿ ಹೆಂಡತಿಯ ಪಾತ್ರವನ್ನು ನಿರ್ವಹಿಸುತ್ತಾನೆ ಎಂದು ನೋಡುವುದೇ ಇನ್ನು ಮಜವಾಗಿರುತ್ತದೆ.

Source link
Shubhasya Shighram ನಲ್ಲಿ ಯಾರೂ ಊಹಿಸಿರದ ಟ್ವಿಸ್ಟ್, ಸೇರೊದ್ದು ಅತ್ತೆ ಮನೆಗೆ ಕಾಲಿಟ್ಟ ಯುವರಾಜ್!