
ಬಿಗ್ಬಾಸ್ (Bigg Boss)ನಲ್ಲಿ ಗಲಾಟೆ, ಕಿತ್ತಾಟದ ರೀತಿಯಲ್ಲಿಯೇ ಒಂದಿಷ್ಟು ಮಂದಿ ಲವ್ ಮಾಡೋದು, ಕೆಲವೊಂದು ಷೋಗಳಲ್ಲಿ ಅದು ಗಡಿಯನ್ನು ಮೀರಿದ್ದರೂ, ಮಂಚದವರೆಗೂ ಈ ಲವ್ ಸ್ಟೋರಿ ಬಂದರೂ ಅದನ್ನು ಪ್ರಸಾರ ಮಾಡಿ ಟಿಆರ್ಪಿ ಏರಿಸಿಕೊಳ್ಳುವುದು, ವೀಕೆಂಡ್ನಲ್ಲಿ ಆ ಜೋಡಿಗೆ ಬೈದಂತೆ ಮಾಡುವುದು ಇದೆಲ್ಲವೂ ಮಾಮೂಲೇ. ಪ್ರತಿ ಸೀಸನ್ನಲ್ಲಿಯೂ ಒಂದೋ- ಎರಡೋ ಜೋಡಿ ಹೀಗೆ ಪ್ರೀತಿ, ಪ್ರೇಮದ ಹೆಸರಿನಲ್ಲಿ ಕಾಣಿಸಿಕೊಳ್ಳುವುದು ಬಿಗ್ಬಾಸ್ ಸ್ಪೆಷ್ಯಾಲಿಟಿ ಅನ್ನಿ.