ಮದುವೆ ಗುಸುಗುಸು ನಡುವೆಯೇ Karna Serial ನಿಧಿ ಸೂಪರ್​ ವಿಡಿಯೋ ಶೂಟ್​: ಭವ್ಯಾ ಗೌಡ ಚೆಲುವಿಗೆ ಫ್ಯಾನ್ಸ್ ಫಿದಾ

ಮದುವೆ ಗುಸುಗುಸು ನಡುವೆಯೇ  Karna Serial ನಿಧಿ ಸೂಪರ್​ ವಿಡಿಯೋ ಶೂಟ್​:  ಭವ್ಯಾ ಗೌಡ ಚೆಲುವಿಗೆ ಫ್ಯಾನ್ಸ್ ಫಿದಾ

ಮದುವೆ ಗುಸುಗುಸು ನಡುವೆಯೇ  Karna Serial ನಿಧಿ ಸೂಪರ್​ ವಿಡಿಯೋ ಶೂಟ್​:  ಭವ್ಯಾ ಗೌಡ ಚೆಲುವಿಗೆ ಫ್ಯಾನ್ಸ್ ಫಿದಾ
‘ಕರ್ಣ’ ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ತಮ್ಮ ಪ್ರೇಮಕಥೆಯ ಸುಳಿವು ನೀಡಿದ್ದು, ಹೊಸ ಹೂವಿನ ಬ್ಯುಸಿನೆಸ್ ಆರಂಭಿಸಿದ್ದಾರೆ. ಬಿಗ್‌ಬಾಸ್ ಮೂಲಕ ಜನಪ್ರಿಯರಾದ ಅವರು, ‘ಲ್ಯಾಂಡ್‌ಲಾರ್ಡ್’ ಚಿತ್ರದ ಮೂಲಕ ಬೆಳ್ಳಿತೆರೆಗೂ ಪಾದಾರ್ಪಣೆ ಮಾಡುತ್ತಿದ್ದಾರೆ.
ಕರ್ಣ ಸೀರಿಯಲ್​ (Karna Serial) ನಿಧಿ ಪಾತ್ರದಲ್ಲಿ ಮಿಂಚುತ್ತಿರೋ ಭವ್ಯಾ ಗೌಡ ಅವರ ಲವ್​ಸ್ಟೋರಿ ಬಗ್ಗೆ ಇದಾಗಲೇ ರಿವೀಲ್​ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್‌ ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದ ಭವ್ಯಾ ಅವರು ಫೋಟೋ ಒಂದನ್ನು ಶೇರ್​ ಮಾಡಿ ಅಭಿಮಾನಿಗಳ ತಲೆಗೆ ಹುಳು ಬಿಟ್ಟಿದ್ದಾರೆ.

ಇದರ ನಡುವೆಯೇ, ಹೂವಿನ ಬಿಜಿನೆಸ್​ ಕೂಡ ಶುರು ಮಾಡಿದ್ದಾರೆ ಭವ್ಯಾ ಗೌಡ. ಅವರೇ ಮೇಳದಲ್ಲಿ ಇದರ ಉದ್ಘಾಟನೆಯನ್ನು ಮಾಡುವ ಮೂಲಕ ಎಲ್ಲರ ಆಶೀರ್ವಾದವನ್ನೂ ಕೋರಿದ್ದಾರೆ.

ಇವೆಲ್ಲವುಗಳ ನಡುವೆಯೇ ಇದೀಗ ನಟಿ ಅದ್ಧೂರಿ ವಿಡಿಯೋ ಶೂಟ್​ ಮಾಡಿಕೊಂಡಿದ್ದಾರೆ. ತಾರಕ್ಕ ಬಿಂದಿಗೆ ಹಾಡಿನ ಹಿನ್ನೆಲೆಯಲ್ಲಿ, ವ್ಹಾವ್ಹ್​ ಎನ್ನುವ ರೀತಿಯಲ್ಲಿ ವಿಡಿಯೋಶೂಟ್​ ಮಾಡಿಸಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನು ನಟಿ ಭವ್ಯಾ ಗೌಡ (Bhavya Gowda) ಕುರಿತು ಹೇಳುವುದಾದರೆ, ಅವರು ಇದೀಗ ಕರ್ಣ ಸೀರಿಯಲ್​ ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಅವರು ‘ಗೀತಾ’ ಸೀರಿಯಲ್​ನಲ್ಲಿ ನಟಿಸಿದ್ದರು. ‘ಬಿಗ್‌ಬಾಸ್ ಕನ್ನಡ ಸೀಸನ್ 11’ ನ ಸ್ಪರ್ಧಿಯಾಗಿ ಮನೆಮಾತಾಗಿದ್ದಾರೆ.

29 ವರ್ಷದ ಚೆಲುವೆ ಭವ್ಯಾ, ಇದಾಗಲೇ ನಟಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. ‘ಲ್ಯಾಂಡ್‌ಲಾರ್ಡ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರವಿದು. ಬರುವ ಜನವರಿಯಲ್ಲಿ ರಿಲೀಸ್​ ಆಗಲಿದೆ. ಗಗನಸಖಿಯಾಗುವ ಹಂಬಲವಿದ್ದ ನಟಿ, ನಟನಾ ವೃತ್ತಿಗೆ ಕಾಲಿಟ್ಟು ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಿದ್ದಾರೆ.

Source link

Leave a Reply

Your email address will not be published. Required fields are marked *