ಜುಲೈ, ಡಿಸೆಂಬರ್ 30: ಮಿಲಿಟರಿ ನೆಲೆಗಳು, ಸಂಸತ್ ಭವನ, ರಾಷ್ಟ್ರಪತಿ ಭವನ ಇತ್ಯಾದಿಗಳು ಬಹಳ ಸೂಕ್ಷ್ಮವೆಂದು ಪರಿಗಣಿಸಲ್ಪಟ್ಟಿರುವ ಹಾಗೂ ಆಯೋಜಿತವಾಗಿರುವ ಹಾರಾಟ ನಿಷೇಧದ ಸ್ಥಳಗಳ ರಕ್ಷಣೆಗಾಗಿ ಭಾರತ ಸರ್ಕಾರ ‘ಸುದರ್ಶನ ಚಕ್ರ’ವನ್ನು ಅಳವಡಿಸಲಾಗಿದೆ. ಡಿಆರ್ಡಿಒ ಸ್ಥಾಪಿಸಿರುವ ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆ (ಐಎಡಿಡಬ್ಯುಎಸ್) 5,181 ಕೋಟಿ ರೂ ಖರೀದಿಸಲು ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಈ ಮಲ್ಟಿಯರ್ ವೆಪನ್ ಸಿಸ್ಟಂ ಅನ್ನು ದೆಹಲಿ ಎನ್ಸಿಆರ್ ಪ್ರದೇಶದಲ್ಲಿರುವ ವಿಐಪಿ-89 ವಲಯದ ಭದ್ರತೆಯನ್ನು ಆಯ್ಕೆ ಮಾಡಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಮಾಡಿದೆ.
ಏಕೀಕೃತ ವಾಯು ರಕ್ಷಣಾ ಶಸ್ತ್ರ ವ್ಯವಸ್ಥೆ ಡಿಆರ್ಡಿಯೊ ಸ್ಥಾಪಿಸಿದೆ. ಏರ್ ಫೋರ್ಸ್ ಕೇಂದ್ರಿತ ಸಿಸ್ಟಂ ಇದಾಗಿದ್ದರೆ, ಒಂದು ಸ್ಥಳಕ್ಕೆ ಬಹು ಎಳೆಗಳಲ್ಲಿ ರಕ್ಷಣೆ ಕೊಡಬಲ್ಲದು. ದೆಹಲಿಯ ವಿಐಪಿ-89 ಝೋನ್ ರಕ್ಷಣೆಗೆಂದು ಸದ್ಯ ಒಂದು ಸಿಸ್ಟಂ ಅನ್ನು ತರಿಸಲಾಗುತ್ತಿದೆ. ಇದು ದೆಹಲಿಯ ಸುತ್ತಮುತ್ತಲ 30 ಕಿಮೀ ಶ್ರೇಣಿಯ ಪ್ರದೇಶಕ್ಕೆ ರಕ್ಷಣೆ ನೀಡುತ್ತದೆ. ಆಕಾಶದಿಂದ ಡ್ರೋನ್ ಆಗಲೀ, ಮಿಸೈಲ್ ಆಗಲಿ ಯಾವುದೇ ದಾಳಿಯಾದರೂ ಇದನ್ನು ತಡೆಯಬಹುದು. ಒಂದು ರೀತಿಯಲ್ಲಿ ಸುದರ್ಶನ ಚಕ್ರದ ರೀತಿಯಲ್ಲಿ ರಕ್ಷಣೆ ನೀಡುತ್ತದೆ.
ಇದನ್ನೂ ಓದಿ: ಬದಲಾಗುತ್ತಿದೆ ಭಾರತ; 2025ರಲ್ಲಿ ಮಹಾಪರಿವರ್ತನೆ; ಜಿಎಸ್ಟಿಯಿಂದ ಹಿಡಿದು ಜಿ ರಾಮ್ ಜಿವರೆಗೆ ಹಲವು ಆರ್ಥಿಕ ಸುಧಾರಣೆಗಳು
ಈ ವರ್ಷದ ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ (2025ರ ಆಗಸ್ಟ್ 15) ಪ್ರಧಾನಿ ನರೇಂದ್ರ ಮೋದಿ ಅವರು ಮಿಷನ್ ಸುದರ್ಶನ ಚಕ್ರವನ್ನು ಘೋಷಿಸಿದ್ದರು. 2035 ರ ವೇಳೆಗೆ ದೇಶದ ಪ್ರಮುಖ ಸ್ಥಳಗಳು ಮತ್ತು ನಗರಗಳಿಗೆ ಸಮಗ್ರ ಭದ್ರತಾ ವ್ಯವಸ್ಥೆ ನಿರ್ಮಿಸುವುದು ಈ ಮಿಷನ್ ಗುರಿ. ಇದರ ಭಾಗವಾಗಿ ಈಗ ಒಂದು ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಂ ಅನ್ನು ಖರೀದಿಸಿ ದೆಹಲಿಯ ರಕ್ಷಣೆಗೆ ನಿಯೋಜಿಸಲಾಗಿದೆ.
ಆಪರೇಷನ್ ಸಿಂದೂರ್ ವೇಳೆ ಪಾಕಿಸ್ತಾನ ಭಾರತದ ಮಿಲಿಟರಿ ನೆಲೆಗಳು ಮತ್ತು ಮಂದಿರದ ಸ್ಥಳಗಳನ್ನು ಗುರಿಯಾಗಿಸಿ ಕ್ಷಿಪಣಿ, ಡ್ರೋನ್ಗಳಿಂದ ದಾಳಿ ಮಾಡಿತ್ತು. ಆಗ ಈ ಸ್ಥಳಗಳ ರಕ್ಷಣೆಗೆ ನೆರವಾಗಿದ್ದೇ ಭಾರತದ ಏರ್ ಡಿಫೆನ್ಸ್ ಸಿಸ್ಟಂಗಳು.
ಇದನ್ನೂ ಓದಿ: ಭಾರತದ ತಂತ್ರಜ್ಞಾನ 2025: AI, ಸೆಮಿಕಂಡಕ್ಟರ್, ಸ್ವಾವಲಂಬನೆ & ಜಾಗತಿಕ ನಾಯಕತ್ವ
ಪಾಕಿಸ್ತಾನದಿಂದ ಹಾರಿಬಂದ ಹೆಚ್ಚಿನ ಡ್ರೋನ್ ಮತ್ತು ಕ್ಷಿಪಣಿಗಳನ್ನು ಈ ಡಿಫೆನ್ಸ್ ಸಿಸ್ಟಂಗಳನ್ನು ಯಶಸ್ವಿಯಾಗಿ ಹೊಡೆದುರುಳಿಸಿದೆ. ಈಗ ಭಾರತ ಸಂಪೂರ್ಣ ಸ್ವಂತವಾಗಿ ಬಹು ಎಳೆಗಳ ಡಿಫೆನ್ಸ್ ಸಿಸ್ಟಂ ಅನ್ನು ಸ್ಥಾಪಿಸಿದೆ.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ