ಅಮ್ಮನಿಗೆ ಸರ್​ಪ್ರೈಸ್ ಕೊಟ್ಟ ಡ್ರೋನ್ ಪ್ರತಾಪ್… ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ!

ಅಮ್ಮನಿಗೆ ಸರ್​ಪ್ರೈಸ್ ಕೊಟ್ಟ ಡ್ರೋನ್ ಪ್ರತಾಪ್… ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ!

ಒಂದು ಕಾಲದಲ್ಲಿ ಮನೆಯಿಂದ ದೂರವಿದ್ದ ಪ್ರತಾಪ್, ಬಿಗ್ ಬಾಸ್‌ ಶೋಗೆ ಬಂದಮೇಲೆ ಈಗ ಕುಟುಂಬದ ಜೊತೆಗೆ ಸಖತ್ ಖುಷಿಯಾಗಿದ್ದು, ತನ್ನ ತಂದೆ ತಾಯಿಗೆ ದೊಡ್ಡ ಸರ್​ಪ್ರೈಸ್‌ವೊಂದನ್ನು ಕೊಟ್ಟಿದ್ದಾರೆ.

ಬಿಗ್ ​ಬಾಸ್ ಕನ್ನಡ​ ಸೀಸನ್​ 10ರ ರನ್ನರ್​ ಅಪ್​ ಡ್ರೋನ್​ ಪ್ರತಾಪ್ ಸದಾ ಒಂದಲ್ಲ ಒಂದು ವಿಚಾರಕ್ಕೆ ಯಾವಾಗಲೂ ​ಸುದ್ದಿಯಲ್ಲಿರುತ್ತಾರೆ. ಇದೀಗ ಡ್ರೋನ್ ಪ್ರತಾಪ್​ ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ.

ಹೌದು! ಒಂದು ಕಾಲದಲ್ಲಿ ಮನೆಯಿಂದ ದೂರವಿದ್ದ ಪ್ರತಾಪ್, ಬಿಗ್ ಬಾಸ್‌ ಶೋಗೆ ಬಂದಮೇಲೆ ಈಗ ಕುಟುಂಬದ ಜೊತೆಗೆ ಸಖತ್ ಖುಷಿಯಾಗಿದ್ದಾರೆ. ಅಲ್ಲದೇ ಬಿಗ್ ಬಾಸ್​ನಲ್ಲಿ ತಮಗೆ ಬಂದಿದ್ದ ಬೈಕ್ ಅನ್ನು ಅವರು ದಾನ ಮಾಡಿದ್ದರು.

ಇದೀಗ ಡ್ರೋನ್​ ಪ್ರತಾಪ್​ ತನ್ನ ತಂದೆ ತಾಯಿಗೆ ದೊಡ್ಡ ಸರ್​ಪ್ರೈಸ್‌ವೊಂದನ್ನು ಕೊಟ್ಟಿದ್ದಾರೆ. ಬಹಳ ದಿನಗಳಿಂದ ತನ್ನ ತಂದೆ ತಾಯಿಗೆ ಏನಾದ್ರೂ ಗಿಫ್ಟ್​ ಕೊಡಬೇಕು ಅಂತ ಅಂದುಕೊಂಡಿದ್ದೆ. ಹಾಗಾಗಿ ಉಟ್ಟ ಬಟ್ಟೆಯಲ್ಲೇ ತಾಯಿ ಸವಿತಾ ಅವರನ್ನು ಊರಿಂದ ಕರೆಸಿದ್ದೇನೆ ಅಂತ ಹೇಳಿ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಡ್ರೋನ್ ಪ್ರತಾಪ್ ಅವರು ತಮ್ಮ ತಾಯಿಗೆ ಹುಂಡೈ ಕ್ರೆಟಾ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ಈ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಈ ವೇಳೆ ಅವರ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಪ್ಪ – ಅಮ್ಮ ಊರಲ್ಲಿ ಓಡಾಡಲು ಅನುಕೂಲವಾಗಲಿ ಎಂದು ಹೊಸ ಕಾರೊಂದನ್ನು ಪ್ರತಾಪ್ ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ 20 ಲಕ್ಷ ರೂಪಾಯಿಗಳಿಗೂ ಅಧಿಕ ಎನ್ನಲಾಗಿದೆ. ಕಾರಿನ ಕೀ ಪಡೆಯುವ ವೇಳೆ ಪ್ರತಾಪ್ ತಾಯಿ ಭಾವುಕರಾಗಿದ್ದರು.

ನಮ್ಮ ತಂದೆ ತಾಯಿಗೆ ಏನಾದರೂ ಸಪ್ರೈಸ್‌ ಆಗಿ ಏನಾದರು ಕೊಡಬೇಕು ಎಂದು ಆಸೆ ಇತ್ತು. ಅದಕ್ಕೆ ನಮ್ಮ ತಾಯಿಯನ್ನು ಬೆಂಗಳೂರಿಗೆ ಕರೆದುಕೊಂಡು ಬನ್ನಿ ಎಂದು ಹೇಳಿದ್ದೆ.

ನಮ್ಮ ತಂದೆಗೆ ಹೊಲದಲ್ಲಿ ಏನೋ ಕೆಲಸ ಇತ್ತು ಅಂತ ಅವರು ಬಂದಿಲ್ಲ. ನಮ್ಮ ಹೆತ್ತವರ ಮುಖದಲ್ಲಿ ಖುಷಿ ನೋಡಬೇಕು ಎಂಬುದು ನನ್ನ ಆಸೆ ಆಗಿದೆ ಎಂದು ಡ್ರೋನ್ ಪ್ರತಾಪ್ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇನ್ನು ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಡ್ರೋನ್ ಪ್ರತಾಪ್ ಸಖತ್ ಬ್ಯುಸಿಯಾಗಿದ್ದಾರೆ. ಸದ್ಯ ಝೀ ಕನ್ನಡದಲ್ಲಿ ನಡೆಯುತ್ತಿರುವ ಭರ್ಜರಿ ಬ್ಯಾಚುಲರ್ಸ್​ ಸೀಸನ್ 2ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದು ಕಮಾಲ್ ಮಾಡುತ್ತಿದ್ದಾರೆ.

Source link

Leave a Reply

Your email address will not be published. Required fields are marked *