ವಿಜಯಪುರ, ಡಿಸೆಂಬರ್ 30: ಪೊಲೀಸ್ ಠಾಣೆದೂರು ನೀಡಲು ಹೋಗಿದ್ದವಳ ಜೊತೆ ಪೊಲೀಸ್ ಅಧಿಕಾರಿ ಸಂಬಂಧ ಆರೋಪ ವಿಚಾರವಾಗಿ ಮಹಿಳೆಯೇ ಟವಿ9 ಕನ್ನಡದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಭೀಮಾಶಂಕರ ಪತ್ನಿ ಅನುರಾಧಾ ತನಗಾದ ಸಮಸ್ಯೆಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದು, ಗಂಡನ ಕಿರುಕುಳದಿಂದ ನಾನು ಆತನಿಂದ ದೂರವಾಗಿದ್ದೇನೆ. ಕುಡಿದು ಬಂದು ಹಲ್ಲೆ ಜೊತೆಗೆ ಕೊಲೆಗೂ ಆತ ಯತ್ನಿಸಿದ್ದ. ಹೀಗಾಗಿ ಗಂಡನಿಂದ ದೂರವಾಗಿ 4 ವರ್ಷಗಳು ಕಳೆದಿವೆ ಎಂದು.
ಇದ್ದ ಜಮೀನು ಮಾರಿ ಬೆಂಗಳೂರಿನಲ್ಲಿ ಮನೆ ಖರೀದಿ ಮಾಡಿದ್ದೆವು. ಆ ಜಾಗ ನನ್ನ ಹಾಗೂ ಪತಿ ಭೀಮಾಶಂಕರ ಹೆಸರಿನಲ್ಲಿದೆ. ಹೀಗಾಗಿ ಅದನ್ನೂ ತನಗೆ ನೀಡುವಂತೆ ಆತ ಪೀಡಿಸಿದ್ದ. ಈ ಬಗ್ಗೆ ಆಲಮೇಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಲ್ಲೇ ರಾಜಿ ಪಂಚಾಯಿತಿಯೂ ಆಗಿದೆ. ಆ ವೇಳೆ ನನಗೆ ಪೊಲೀಸ್ ಅಧಿಕಾರಿ ಮನೋಹರ್ ಕಂಚಗಾರ ಪರಿಚಯವಾಗಿದ್ದರು. ಬಳಿಕ ನಾನು ಒಬ್ಬಳೇ ಬೆಂಗಳೂರಿಗೆ ಬಂದು ನೆಲೆಸಿದ್ದರೂ ಗಂಡನ ಹಿಂಸೆ ತಪ್ಪಿರಲಿಲ್ಲ. ಹೀಗಾಗಿ 2022ರಲ್ಲಿ ರಕ್ಷಣೆಯಾಗಿ ಮನೋಹರ್ ಕಂಚಗಾರ ಸಹಾಯ ಪಡೆದಿದ್ದೆ. ಆ ಪರಿಚಯ, ಸ್ನೇಹದಿಂದ ನಾನು ಅವರ ಜೊತೆ ಚಾಟ್ ಮಾಡಿದ್ದೇನೆ. ಈಗ ಅವರ ಜೊತೆ ನನಗೆ ಸಂಪರ್ಕ ಇಲ್ಲ ಎಂದು ಅನುರಾಧಾ. ಜೊತೆಗೆ ಪತಿಯಿಂದ ಹಲ್ಲೆಗೊಳಗಾದ ಫೋಟೋಗಳನ್ನು ಕೂಡ ಬಿಡುಗಡೆ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.