ಬೆಂಗಳೂರು, ಡಿ.31: ಪ್ರಯಾಣಿಕರು ಇನ್ಮುಂದೆ ಮೆಟ್ರೋದಲ್ಲಿ (ಬೆಂಗಳೂರು ಮೆಟ್ರೋ ನಿಯಮಗಳು) ಈ ಕೆಲಸಗಳನ್ನು ಮಾಡಿದ್ರೆ, ಒಂದು ವೇಳೆ ಮಾಡಿದ್ರೆ ಕೇಸ್ ದಾಖಲು ಮಾಡಿದೆ. ಮೆಟ್ರೋದಲ್ಲಿ ರೀಲ್ಸ್ ನೋಡುವುದು, ಫೋನ್‌ನಲ್ಲಿ ಜೋರಾಗಿ ಮಾತನಾಡುವುದು, ತಿಂಡಿ ಊಟ ಮಾಡಿದ್ರೆ ದಂಡದ ಜೊತೆಗೆ ಪ್ರಕರಣ ಕೂಡ ದಾಖಲು ಮಾಡಿದೆ. ಕಳೆದ 20 ರಂದು ಮೆಟ್ರೋ ಪ್ರಯಾಣಿಕರ ವಿರುದ್ಧ 7,429 ಪ್ರಕರಣ ದಾಖಲಾಗಿದೆ. ಈ ಕ್ರಮವನ್ನು ತರಲು ಒಂದು ಕಾರಣವಿದೆ. ಹೌದು ಮೆಟ್ರೋದಲ್ಲಿ ಇತ್ತೀಚೆಗೆ ಜೋರಾಗಿ ಸೌಂಡ್ ಇರುವುದನ್ನು ತಡೆಯಲು ಮತ್ತು ಇತರ ಸಹ ಪ್ರಯಾಣಿಕರಿಗೆ ತೊಂದರೆ ಆಗುವುದನ್ನು ತಡೆಯಲು ವಿಭಿನ್ನ ಕ್ರಮವನ್ನು ತರಲಾಗಿದೆ. ಒಂದು ವೇಳೆ ಈ ನಿಮಯವನ್ನು ಮೀರಿದ್ರೆ ದಂಡಾಸ್ತ್ರ ಪ್ರಯೋಗ ಮಾಡಬಾರದು.
ಮೆಟ್ರೋವನ್ನು ಹಲವಾರು ಜನ ಗುರುತಿಸುತ್ತಾರೆ. ಒಂದು ಕಡೆಯಿಂದ ಇನ್ನೊಂದು ಕಡೆ ವೇಗವಾಗಿ ಹೋಗಲು ಮೆಟ್ರೋವನ್ನು ಬಳಸುತ್ತಾರೆ. ಈ ಹೊತ್ತಿನಲ್ಲಿ ಸುಮ್ಮನೆ ಕೂರುವ ಬದಲು ಟೈಮ್ ಪಾಸ್ ಮಾಡಲು ಜನ ಮೊಬೈಲ್ ಬಳಸುತ್ತಾರೆ. ಹರ್ ಪೋನ್ ಹಾಕಿಕೊಳ್ಳದೇ ರಿಲ್ಸ್ ಯೂಟ್ಯೂಬ್ ನೋಡುತ್ತಾರೆ. ಈ ಹಿಂದೆಯೇ ಮೆಟ್ರೋ ಈ ರೀತಿ ಮಾಡಬಾರದು ಎಂಬ ರೂಲ್ ಮಾಡಿತ್ತು. ಆದರೆ ಇದನ್ನು ಮೀರಿ ಅನೇಕರ ಈ ತಪ್ಪುಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ದಂಡಾಸ್ತ್ರ ಪ್ರಯೋಗ ಚಿಂತನೆ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಕೌಂಟ್ ಡೌನ್: ಖಾಕಿ ಎಚ್ಚರಿಕೆ; ಎಣ್ಣೆ ಏಟಲ್ಲಿ ಎಲ್ಲಾದ್ರೂ ಮಲಗಿದ್ರೆ ಪೊಲೀಸರೇ ಮನೆಗೆ ಬಿಡ್ತಾರೆ!
ಮೊಬೈಲ್ ಅಲ್ಲಿ ಗಟ್ಟಿಯಾಗಿ ವಾಲ್ಯೂಮ್ ಜಾಸ್ತಿ ಕೊಡುವುದು, ಬ್ಲೂ ಟೂತ್ ಬಳಸಿ ಗಟ್ಟಿಯಾಗಿ ಮಾತನಾಡಿ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುವುದು , ಅಲ್ಲಲ್ಲಿ ಊಟ-ತಿಂಡಿ ಮಾಡುವುದು, ತುಂಬಾ ಸೇವಿಸುವ ದೂರುಗಳು ಬರುತ್ತಿವೆ. ಡಿಸೆಂಬರ್ 5 ರಿಂದ 25 ರ ದಿನಾಂಕದಂದು ಡಾಟಾ ಪ್ರಕಾರ 6 ಸಾವಿರದ 520 ಮಂದಿ ವಿರುದ್ಧ ಸೌಂಡ್ ಕೇಸ್ ದಾಖಲಾಗಿದೆ. ಮೆಟ್ರೋದಲ್ಲಿ ತಿಂಡಿ ತಿಂದವರ ವಿರುದ್ಧ 268 ಪ್ರಕರಣ ದಾಖಲಾಗಿದ್ದು, ತುಂಬಾ ಸೇವನೆ ಅಡಿ 641 ದೂರು ರಿಜಿಸ್ಟರ್ ಆಗಿದೆ. 20 ದಿನದಲ್ಲಿ ಒಟ್ಟು 7,429 ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಮೆಟ್ರೋ ಪ್ರಯಾಣಿಕರು ಅಧಿಕಾರಿಗಳ ನಿರ್ಧಾರಕ್ಕೆ ಸ್ವಾಗತ ಕೋರಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ