ದುರಂತಗಳು ಸಂಭವಿಸಿದ್ರೂ ಎಚ್ಚೆತ್ತುಕೊಳ್ಳದ ಬಸ್​​ ಮಾಲೀಕರು: ಸ್ಲೀಪರ್ ಕೋಚ್​​​ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್

ದುರಂತಗಳು ಸಂಭವಿಸಿದ್ರೂ ಎಚ್ಚೆತ್ತುಕೊಳ್ಳದ ಬಸ್​​ ಮಾಲೀಕರು: ಸ್ಲೀಪರ್ ಕೋಚ್​​​ನಲ್ಲಿ ಗೂಡ್ಸ್ ಸಾಗಾಟ, ಬಸ್ ಸೀಜ್


ದೇವನಹಳ್ಳಿ, ಡಿಸೆಂಬರ್ 30: ಇತ್ತೀಚೆಗೆ ಹಿರಿಯೂರು ಬಳಿ ಬಸ್ ದುರಂತ ಸಂಭವಿಸಿ ಅಮಾಯಕರು ಜೀವ ಕಳೆದುಕೊಂಡಿದ್ದು, ಸಾರಿಗೆ ಇಲಾಖೆ ಬಸ್ (ಖಾಸಗಿ ಬಸ್ಸುಗಳು) ಗೂಡ್ಸ್ (ಸರಕು) ಹಾಕದಂತೆ ಎಚ್ಚರಿಕೆ ನೀಡಿತ್ತು. ಆದರೆ ಸಾರಿಗೆ ಇಲಾಖೆ ಎಚ್ಚರಿಕೆಯ ನಡುವೆಯೂ ಬಸ್ ಸಿಬ್ಬಂದಿ ಮತ್ತೆ ಅದೇ ಹಳೆ ಚಾಳಿ ಮುಂದುವರಿದಿದ್ದು, ಬಸ್ ನಲ್ಲಿನ ಲಗೇಜ್ ಕಂಡು ಅಧಿಕಾರಿಗಳು ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ.

ಟಾಪ್ ಟೂ ಬಾಟಂ ಗೂಡ್ಸ್ ತುಂಬಿಕೊಂಡು ಸಂಚಾರ: ಖಾಸಗಿ ಬಸ್ ಸೀಜ್

ರಾಜ್ಯ ಹಾಗೂ ಹೊರಭಾಗದಲ್ಲಿ ಸಾಲು ಸಾಲು ಬಸ್ ದುರಂತಗಳು ಸಂಭವಿಸುತ್ತಿವೆ, ಅಮಾಯಕರು ಸಜೀವ ದಹನವಾಗುತ್ತಿದ್ದಾರೆ. ಜೊತೆಗೆ ಬಸ್ ದುರಂತಗಳಿಂದ ಎಚ್ಚೆತ್ತ ಸಾರಿಗೆ ಇಲಾಖೆ ಬಸ್ಸುಗಳಲ್ಲಿ ಪ್ರಯಾಣಿಕರ ಲಗೇಜ್ಗಳು ಪಡಿಸಿ, ಗೂಡ್ಸ್ ತುಂಬದಂತೆ ಎಚ್ಚರಿಕೆ ನೀಡಲಾಯಿತು. ಆದರೆ ಇಷ್ಟೆಲ್ಲಾ ಅವಾಂತರಗಳನ್ನ ಕಣ್ತುಂಬ ನೋಡಿದರೂ ಇಲಾಖೆ ಅಧಿಕೃತ ಆದೇಶ ಬಂತು ನಮ್ಮನ್ಯಾರು ಕೇಳೋರು ಅನ್ನೋ ಧಿಮಾಕಿನಲ್ಲೇ ಇಂದು ಬೆಳಗ್ಗೆ ಹೈದರಾಬಾದ್ ನಿಂದ ಬೆಂಗಳೂರಿಗೆ ಬಂದ ಬಸ್ ಒಂದರಲ್ಲಿ ಕೆಳಗೆ ಎಲ್ಲೆಂದರಲ್ಲಿ ಲಗೇಜ್ ತುಂಬಿಕೊಂಡು ಬಂದಿತ್ತು. ಈ ರೀತಿ ಲಗೇಜ್ ಹಾಕುವವರಿಗೆ ಬುದ್ದಿ ಕಲಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿ ಫೀಲ್ಡಿಗಿಳಿದಿದ್ದ ಆರ್ ಟಿಓ ಸುದಂದ್ರ ಆಯಂಡ್ ಟೀಂ ಬಸ್ ಅನ್ನ ತಡೆದು ಪರಿಶೀಲನೆ ನಡೆಸಿದರು. ಮೇಲ್ನೋಟಕ್ಕೆ ಟಾಪ್ ನಲ್ಲಿ ಮಾತ್ರ ಲಗೇಜ್ ಹಾಕಿದ್ದಾರೆ ಅಂತ ಬಸ್ ತಡೆದ ಅಧಿಕಾರಿಗಳು ಬಸ್ ನ ಡಿಕ್ಕಿಯಲ್ಲಿ ಮೂಟೆಗಟ್ಟಲೇ ಲಗೇಜ್ ನನ್ನು ಕಂಡು ಒಂದು ಕ್ಷಣ ಶಾಕ್ ಆಗಿದ್ದಾರೆ.

ಇದನ್ನೂ ಓದಿ: ಮೆಟ್ರೋ ಹೊಸ ನಿಯಮಗಳು: ಪ್ರಯಾಣಿಕರೇ ಇನ್ಮುಂದೆ ರೀಲ್ಸ್ ನೋಡುವ ಮುನ್ನ ಎಚ್ಚರ

ಬಸ್‌ನ ಮೇಲೆ ಮತ್ತು ಡಿಕ್ಕಿಯಲ್ಲಿ ಬಟ್ಟೆ ಮೂಟೆಗಳು ಮತ್ತು ಪೈಂಟ್ ಬಾಕ್ಸ್‌ಗಳನ್ನು ತುಂಬಿಕೊಂಡು ಬಂದಿರುವುದು ಕಾಣಿಸದಂತೆ ಅಧಿಕಾರಿಗಳು ಬಸ್ ಅನ್ನ ಸೀಜ್ ಮಾಡಿದ್ದಾರೆ. ಜೊತೆಗೆ ಸ್ಲೀಪರ್ ಕೋಚ್ ಬಸ್‌ಗಳಿಗೆ ಟಾಪ್ ಇರಬಾರದು ಇನ್ನೂ ನಿಯಮವಿದ್ದರೂ ಟಾಪ್ ಮೇಲೆಯೇ ರಾಜಾರೋಷವಾಗಿ ಲಗೇಜ್‌ಗಳು ಬಂದಿದ್ದು, ಬಸ್ ಮಾಲೀಕರ ವಿರುದ್ಧ ಅಧಿಕಾರಿಗಳು ಕೇಸ್ ಜಡಿದಿದ್ದಾರೆ.

15ಕ್ಕೂ ಹೆಚ್ಚು ಬಸ್‌ಗಳಿಗೆ ದಂಡ

ಇನ್ನು ಇದೇ ರೀತಿ ಬೆಂಗಳೂರಿನಿಂದ ಆಂಧ್ರಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್ ಮೇಲೆ ಹೂಗಳನ್ನ ತುಂಬಿಕೊಂಡು ಹೋಗುತ್ತಿದ್ದುದು ಸಹ ಸೀಜ್ ಮಾಡಿದೆ. ಇದೇ ರೀತಿ ಸಣ್ಣಪುಟ್ಟ ಲಗೇಜ್ ಹಾಕಿದ್ದ 15ಕ್ಕೂ ಹೆಚ್ಚು ಬಸ್‌ಗಳಿಗೆ ಆರ್‌ಟಿ ಅಧಿಕಾರಿಗಳು ದಂಡ ಹಾಕುವ ಮೂಲಕ ಬೆಳ್ಳಂಬೆಳಗ್ಗೆ ಬಿಸಿ ಮುಟ್ಟಿಸಿದ್ದಾರೆ.

ಇದನ್ನೂ ಓದಿ: ಫ್ಲೈ ಓವರ್ ಮೇಲೆ ಖಾಸಗಿ ಬಸ್ಸುಗಳ ನಡುವೆ ರೇಸ್: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ

ದುರಂತಗಳು ಸಂಭವಿಸಿದ ಮೇಲೂ ಕೆಲ ಖಾಸಗಿ ಬಸ್ಸುಗಳು ಮತ್ತು ಸಿಬ್ಬಂದಿ ಎಚ್ಚತ್ತುಕೊಳ್ಳದೆ ಹಣದ ಆಸೆಗೆ ಹಳೆ ಚಾಳಿ ಮುಂದುವರಿದಿದೆ. ಈ ರೀತಿ ಜನರ ಜೀವದ ಜೊತೆ ಚೆಲ್ಲಾಟವಾಡುವವರಿಗೆ ಸಾರಿಗೆ ಇಲಾಖೆ ಕೇವಲ ದಂಡ ಹಾಕಿದರೆ ಸೂಕ್ತ ಕಾನೂನು ಕ್ರಮಕೈಗೊಳ್ಳುವ ಮೂಲಕ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:52 pm, ಮಂಗಳವಾರ, 30 ಡಿಸೆಂಬರ್ 25



Source link

Leave a Reply

Your email address will not be published. Required fields are marked *