‘ಬಿಗ್ ಬಾಸ್ ಕನ್ನಡ ಸೀಸನ್ 12’ (ಬಿಗ್ ಬಾಸ್ ಕನ್ನಡ ಸೀಸನ್ 12) ಆಟದಲ್ಲಿ ಸ್ಪಂದನಾ ಸೋಮಣ್ಣ ಅವರು 14ನೇ ವಾರದ ತನಕ ಪೈಪೋಟಿ ನೀಡುತ್ತಾ ಬಂದಿದ್ದಾರೆ. ಆದರೆ ಅವರು ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಅನೇಕರಿಗೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ಚರ್ಚೆ ನಡೆಸಿದ್ದಾರೆ. ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದಾರೆ. ಈ ವಾರ ಸ್ಪಂದನಾ ಸೋಮಣ್ಣ (ಸ್ಪಂದನಾ ಸೋಮಣ್ಣ) ನಾಮಿನೇಟ್ ಆಗಿದ್ದಾರೆ. ಈ ಬಾರಿಯಾದರೂ ಅವರು ಎಲಿಮಿನೇಟ್ ಆಗುತ್ತಾರಾ ಅಥವಾ ಫಿನಾಲೆಗೆ ಎಂಟ್ರಿ ನೀಡುತ್ತಾರಾ ಎಂದು ತಿಳಿಯುವ ಕೌತುಕ ಮೂಡಿದೆ.
ಬೇರೆ ಸ್ಪರ್ಧಿಗಳಿಗೆ ಸ್ಪಂದನಾ ಸೋಮಣ್ಣ ಅವರು ಹೆಚ್ಚು ಆ್ಯಕ್ಟೀವ್ ಆಗಿಲ್ಲ. ಮೊದಲ ವಾರದಿಂದ 14ನೇ ವಾರದ ತನಕ ಅವರ ಆಟದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುವುದಿಲ್ಲ. ಆ ಕಾರಣದಿಂದ ಸಾಮಾನ್ಯವಾಗಿ ಅವರನ್ನು ನಾಮಿನೇಟ್ ಮಾಡಲಾಗಿದೆ. ಆದರೂ ಕೂಡ ಅವರು ಪ್ರತಿ ವಾರ ಸೇಫ್ ಆಗಿದ್ದು ಕಂಡು ಅಚ್ಚರಿ ಆಗಿದ್ದುಂಟು.
ಈ ವಾರ 5 ಜನರು ನಾಮಿನೇಟ್ ಆಗಿದ್ದಾರೆ. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇಷ್ಟು ಜನರ ಮೇಲಿಂದ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅನಿಸಿಕೆ. ಆದ್ದರಿಂದ ಅವರು ಎಲಿಮಿನೇಟ್ ಆಗಬಹುದು ಎಂಬ ನಿರೀಕ್ಷೆ ಇದೆ. ಏನಾಗುತ್ತದೆ ಎಂದು ತಿಳಿಯಲು ವೀಕೆಂಡ್ ಸಂಚಿಕೆಗಾಗಿ ಕಾಯಬೇಕು.
ಕ್ಯಾಪ್ಟನ್ ಆಗಿರುವ ಗಿಲ್ಲಿ ನಟ ಅವರು ಈ ವಾರ ಸೇಫ್ ಆಗಿದ್ದು ಮುಂದಿನ ವಾರದ ಕ್ಯಾಪ್ಟೆನ್ಸಿ ಓಟಕ್ಕೆ ಅರ್ಹತೆ ಕೂಡ ಪಡೆದಿದ್ದಾರೆ. ಅವರ ಜೊತೆ ಅಶ್ವಿನಿ ಗೌಡ ಅವರಿಗೂ ಅರ್ಹತೆ ಸಿಕ್ಕಿತು. ಇನ್ನುಳಿದವರು ಅರ್ಹತೆ ಪಡೆಯಲು ಸೆಣೆಸಾಡುತ್ತಿದ್ದಾರೆ. ಮುಂದಿನ ವಾರ ಕ್ಯಾಪ್ಟನ್ ಆಗುವವರು ನೇರವಾಗಿ ಫಿನಾಲೆ ವಾರಕ್ಕೆ ಎಂಟ್ರಿ ಪಡೆಯಲಿದ್ದಾರೆ.
ಇದನ್ನೂ ಓದಿ: ಸ್ಪಂದನಾ ಸೇವ್ ಆಗಿದ್ದು ಸರಿಯಲ್ಲ; ನೇರವಾಗಿ ಆರೋಪಿಸಿದ ಮಾಳು
ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ಯಾರು ಫಿನಾಲೆಗೆ ಹೋಗುತ್ತಾರೆ? ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಂದ ಕೇಳಿಬರುತ್ತಿದೆ. ಯೋಜನೆಗೆ ಗಿಲ್ಲಿ ಫೇವರಿಟ್ ಸ್ಪರ್ಧಿ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.