Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 31ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 31ರ ದಿನಭವಿಷ್ಯ


Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 31ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಇತರರಿಗೆ ನಿಮ್ಮ ಸಹಾಯದ ಅಗತ್ಯವಿದೆ. ನಿಮ್ಮ ಜೊತೆ ವ್ಯಾಜ್ಯ- ಜಗಳ ಇರುವವರು ರಾಜೀ- ಸಂಧಾನಕ್ಕೆ ಪ್ರಯತ್ನ ಮಾಡಲಿದ್ದಾರೆ. ಅವರ ಪ್ರಸ್ತಾವಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ನೀಡುವುದು ಮುಖ್ಯವಾಗುತ್ತದೆ. ನಿಮಗಿಂತ ಕಿರಿಯ ವಯಸ್ಸಿನವರಿಗೆ ಹೊಸ ಬಟ್ಟೆಗಳನ್ನು ಕೊಡಿಸಲಾಯಿತು. ನಿರ್ದಿಷ್ಟ ಸಮಯದೊಳಗೆ ಕೆಲವು ಕಾರ್ಯಗಳನ್ನು ಮುಗಿಸಿಕೊಡುವ ಮಾತು ನೀಡಿದ್ದವರು ಕೊನೆ ಕ್ಷಣದಲ್ಲಿ ತಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಹೇಳುವ ಸಾಧ್ಯತೆಯಿದೆ. ಒಂದೇ ಕೆಲಸಕ್ಕೆ ನಾಲ್ಕಾರು ಸಲ ಆಯ್ಕೆ ಆಗಲಿದೆ, ನೀವು ಯಾವ ಕಾರ್ಯಕ್ಕೆ ಪ್ರಯತ್ನ ಮಾಡುತ್ತೀರಿ ಅದರ ದಾಖಲೆ- ಪತ್ರಗಳು ಇವೆಯೇ ಖಾತ್ರಿ ಮಾಡಿಕೊಳ್ಳಿ. ನಿಮ್ಮಲ್ಲಿ ಕೆಲವರಿಗೆ ತೀವ್ರ ಬಗೆಯಲ್ಲಿ ಹಲ್ಲು ನೋವು ಕಾಡಬಹುದು. ಈ ಸಮಸ್ಯೆಗೆ ಮನೆ ಮದ್ದು ಮಾಡಚಾರ ವೈದ್ಯರು ಭೇಟಿ ಮಾಡಿ, ಔಷಧೋಪಚಾರ ಮಾಡಿಕೊಳ್ಳುವುದು ಕ್ಷೇಮ

ಜನ್ಮಸಂಖ್ಯೆ 2 (ಯಾವುದೇ ತಿಂಗಳ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ನಿಮ್ಮಲ್ಲಿ ಕೆಲವು ಮನೆಯಲ್ಲಿ ಸಮಾರಂಭ- ಕಾರ್ಯಕ್ರಮ ನಡೆಯುವಂಥ ಯೋಗ ಇದೆ. ನಿಮ್ಮ ಸಂಬಂಧಿಗಳ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಂದೆ ನಿಂತು ಕೆಲಸ- ಕಾರ್ಯಬೇಕಾದ ಜವಾಬ್ದಾರಿ ವಹಿಸುವ ಸಾಧ್ಯತೆಯಿದೆ. ಹಣಕಾಸು ವಿಚಾರದಲ್ಲಿ ವೇಗವಾಗಿ ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳಬಾರದು. ಷೇರು- ಮ್ಯೂಚುವಲ್ ಫಂಡ್ ಹೂಡಿಕೆಗೆ ಸಲಹೆ ನೀಡುವಂಥ ಫೈನಾನ್ಷಿಯಲ್ ಅಡ್ವೈಸರ್- ಕನ್ಸಲ್ಟಂಟ್ ಆಗಿ ಕಾರ್ಯ ನಿರ್ವಹಿಸುವವರಿಗೆ ಸ್ವಲ್ಪ ಮಟ್ಟಿಗೆ ಒತ್ತಡದ ದಿನ ಇರುತ್ತದೆ. ಕಣ್ತಪ್ಪಿನಿಂದ ಆದ ಸಮಸ್ಯೆ ಬಗೆಹರಿಸಲು ಕಲಿತ ವಿದ್ಯೆ- ಬುದ್ಧಿಯನ್ನೆಲ್ಲ ಖರ್ಚು ಮಾಡುವಂತೆ ಆಗಲಿದೆ. ನಿಮ್ಮ ಜವಾಬ್ದಾರಿಯನ್ನು ಇತರರಿಗೆ ವರ್ಗಾಯಿಸಬೇಡಿ. ಸಂಖ್ಯೆಗಳನ್ನು ಒಂದಕ್ಕೆ ನಾಲ್ಕು ಬಾರಿ ಪರೀಕ್ಷೆ ಮಾಡಿದ ನಂತರ ವ್ಯವಹಾರ ಮಾಡಿ. ಮೃದುವಾದ ಆಹಾರ ಪದಾರ್ಥಗಳ ಸೇವನೆಗೆ ಈ ದಿನ ಆದ್ಯತೆಯನ್ನು ನೀಡಿ. ಗಟ್ಟಿಯಾದ ಆಹಾರ ಪದಾರ್ಥಗಳಿಂದ ದೂರವಿರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಆದಾಯ ಜಾಸ್ತಿ ಮಾಡಿಕೊಳ್ಳಲು ಹಲವು ರೀತಿಯ ಪ್ರಯತ್ನಗಳನ್ನು ಮಾಡಲಾಗಿದೆ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರು, ಬರವಣಿಗೆ ಮೂಲಕ ಆದಾಯ ಪಡೆಯುವವರು ಇಂಥವರಿಗೆ ಹೊಸ ಅವಕಾಶಗಳು ಹುಡುಕಿ ಬರಲಿವೆ. ಮಕ್ಕಳ ಅನಾರೋಗ್ಯ ಸಮಸ್ಯೆ ತಂದೊಡ್ಡಲಿದೆ. ಶೀತ, ಕಫ, ಕೆಮ್ಮು ಈ ರೀತಿಯ ತೊಂದರೆಗಳು ಜಾಸ್ತಿ ಆಗುತ್ತವೆ, ವೈದ್ಯರಿಗೆ ತೋರಿಸಿದ ನಂತರವೂ ಹತೋಟಿಗೆ ಬಾರದೆ ಆತಂಕಕ್ಕೆ ಕಾರಣ ಆಗಲಿದೆ. ಹೆಣ್ಣುಮಕ್ಕಳ ಜೊತೆ ಮಾತನಾಡುವಾಗ, ಅದರಲ್ಲಿಯೂ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಮಾತನಾಡುವಾಗ ಬಳಕೆ ಮಾಡುವ ಪದಗಳ ಬಗ್ಗೆ ಜಾಗ್ರತೆಯಿಂದ ಇರಿ. ಅತ್ಯುತ್ಸಾಹದಲ್ಲೋ ಅಥವಾ ತಮಾಷೆ ಎಂದುಕೊಂಡು ನೀವಾಡಿದ ಮಾತುಗಳಿಂದ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ನೀಡುವ ತನಕ ಹೋಗಬಹುದು. ಯಾವ ಉದ್ದೇಶಕ್ಕೆ ಹಣವನ್ನು ಉಳಿತಾಯ ಅಥವಾ ಹೂಡಿಕೆ ಮಾಡಿದ್ದೀ ಆ ಮೊತ್ತವನ್ನು ಉದ್ದೇಶಿತ ಕಾರ್ಯಗಳಿಗಾಗಿ ಬಳಸಿಕೊಳ್ಳಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಮರಳು, ಇಟ್ಟಿಗೆ, ಸಿಮೆಂಟ್ ಮಾರಾಟದಲ್ಲಿ ತೊಡಗಿರುವವರಿಗೆ ಆದಾಯದಲ್ಲಿ ಏರಿಕೆ ಆಗಲಿದೆ. ಇನ್ನು ಯಾರ ಮನೆ ನಿರ್ಮಾಣದ ಕಾಂಟ್ರಾಕ್ಟ್ ಮಾಡಿ ಕೆಲಸ ಮಾಡಿಸುತ್ತೀರೋ ಅಂಥವರಿಗೆ ಹೊಸ ಕೆಲಸವೊಂದು ಸ್ನೇಹಿತರ ಮೂಲಕ ಬರಲಿದೆ. ಸಿವಿಲ್ ಸಂಸ್ಥೆಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಉದ್ಯೋಗದ ಆಫರ್ ಬರಲಿದೆ. ಅಥವಾ ಈ ಹಿಂದೆ ಇಂಟರ್ ವ್ಯೂ ತೆಗೆದುಕೊಂಡಿದ್ದಲ್ಲಿ ಅದು ಆಯ್ಕೆ ಆಗಿರುವ ಬಗ್ಗೆ ಮಾಹಿತಿ ಬರಲಿದೆ. ಹಳೇ ಸ್ನೇಹ- ಪರಿಚಯಗಳನ್ನು ಮತ್ತೊಮ್ಮೆ ಮುಂದುವರಿಸಲು ಬೇಕಾದ ವೇದಿಕೆಯೊಂದು ಈ ದಿನ ನಿಮಗೆ ಸಿಗಲಿದೆ. ಹಣದ ವಿಚಾರಕ್ಕೆ ಸೋದರ- ಸೋದರಿಯರ ಜೊತೆಗೆ ಇರುವ ಅಭಿಪ್ರಾಯ ಭೇದಗಳನ್ನು ಬಗೆಹರಿಸಿಕೊಳ್ಳಲು ತಂದೆ- ತಾಯಿ ಸಹಾಯ ಮಾಡಲಿದ್ದಾರೆ. ದೂರ ಪ್ರಯಾಣ ಮಾಡುವುದರಿಂದ ನಿಮ್ಮಲ್ಲಿ ಕೆಲವರಿಗೆ ದೈಹಿಕವಾಗಿ ಒತ್ತಡ ಏರ್ಪಡಲಿದೆ. ಇತರರ ವೈಯಕ್ತಿಕ ವಿಷಯಗಳಿಗೆ ತಲೆ ಹಾಕಬೇಡಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ನಿಮಗೆ ಗೊತ್ತಿರುವುದು ಮಾತ್ರ ಹೇಳ್ತೀನಿ ಎಂಬ ಸ್ಥಿತಿಯಲ್ಲಿ ನೀವು ಇರುತ್ತೀರಿ. ಆದರೆ ನಮಗೆ ಏನು ಬೇಕೋ ಅದನ್ನು ತಿಳಿದುಕೊಂಡಿದ್ದೇನೆ, ಆ ನಂತರ ಹೇಳಬೇಕು ಎಂದು ನೀವು ಕೆಲಸ ಮಾಡುವ ಉದ್ಯೋಗದಾತರು, ನಿಮ್ಮ ಸೇವೆಯನ್ನು ಪಡೆಯುವ ಕ್ಲೈಂಟ್‌ಗಳು ಒತ್ತಡ ಹಾಕಲಿದ್ದಾರೆ. ಪೊಂಜಿ ಯೋಜನೆಗಳಿಂದ ದೂರ ಇರುವುದು ಬಹಳ ಮುಖ್ಯ. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ ಎಂಬ ಆಸೆ ತೋರಿಸಿ, ನಿಮ್ಮ ಸ್ನೇಹಿತರ ಸಂಬಂಧಿಗಳೋ ನಿಮಗಿಂತ ಮೇಲಿನ ಹುದ್ದೆಯಲ್ಲಿ ಕೆಲಸ ಮಾಡುವಂಥವರೋ ಒತ್ತಾಯ ಮಾಡಿದರೆ ಅಂಥವುಗಳಿಂದ ದೂರ ಉಳಿಯುವುದು ಸವಾಲಾಗಲಿದೆ. “ಇಲ್ಲ” ಎಂದು ಗಟ್ಟಿಯಾಗಿ ಹೇಳಿ. ಬಾಯಿ ರುಚಿಗೆ ಬಿದ್ದು, ನಿಮ್ಮ ದೇಹ ಪ್ರಕೃತಿಗೆ ಒಗ್ಗದ ಖಾದ್ಯ- ತಿನಿಸುಗಳನ್ನು ಸೇವಿಸಿ, ಕೆಲವು ದೈಹಿಕ ತೊಂದರೆ ಅನುಭವಿಸುವಂತೆ ಆಗಲಿದೆ. ಎಚ್ಚರಿಕೆ ವಹಿಸಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ನೀವು ಬಹಳ ಪ್ರೀತಿಸುವ ವ್ಯಕ್ತಿಗಳನ್ನು ಈ ದಿನ ತುಂಬ ನೆನಪು ಮಾಡಿಕೊಳ್ಳಲಿದ್ದೀರಿ. ಬಿಡುವೇ ಸಿಗದಷ್ಟು ಕೆಲಸಗಳಲ್ಲಿ ಮುಳುಗಿ ಹೋಗುವಂತೆ ಆಗಲಿದೆ, ಸಮಯಕ್ಕೆ ಸರಿಯಾಗಿ ಊಟ- ತಿಂಡಿ ಸಹ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ. ಮಾರ್ಕೆಟಿಂಗ್- ಮಾಹಿತಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಹುದ್ದೆಯಲ್ಲಿ ಬಡ್ತಿ ಸಿಗುವ ಬಗ್ಗೆ ಸಿಗಲಿದೆ. ರಾಜಕಾರಣಿಗಳಿಗೆ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮಹತ್ವಾಕಾಂಕ್ಷೆಯಿಂದ ನಡೆಸುವಂಥ ಸಮಾವೇಶದ ಮುಂದಾಳತ್ವವನ್ನು ನೀವೇ ವಹಿಸಬೇಕು, ಅದರ ಸಂಘಟನೆ, ಜನ ಸೇರಿಸುವುದು ಸೇರಿದಂತೆ ಇತರ ಕೆಲಸಗಳ ಹೊಣೆ ನೀವೇ ಹೊರಬೇಕು ಎಂದು ಸಹ ಸೂಚನೆ ಬರಲಿದೆ. ಸ್ಥೂಲಕಾಯದಿಂದ ಬಳಲುತ್ತಾ ಇರುವವರು ಸೂಕ್ತ ವೈದ್ಯೋಪಚಾರ ಪಡೆಯುವ ಕಡೆಗೆ ಗಮನ ನೀಡುತ್ತಿದ್ದಾರೆ. ಸರ್ಜರಿ ದೇಹದ ತೂಕ ಇಳಿಸುವುದಕ್ಕೆ ನಿಮ್ಮಲ್ಲಿ ಯಾರಾದರೂ ನಿರ್ಧಾರ ಮಾಡುತ್ತೀರಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಾ ನೀವು ಒಪ್ಪಿಸಿದ ಕೆಲಸಗಳನ್ನು ಆಗ- ಈಗ ಎಂದು ಮುಂದಕ್ಕೆ ಹಾಕುತ್ತಾ ಇರುವವರ ಬಳಿಗೆ ಕೊಯ್ದಂತೆ ಮಾತನಾಡಿದೆ. ಒಂದು ವೇಳೆ ಆ ಕೆಲಸದ ಸಲುವಾಗಿ ಅಡ್ವಾನ್ಸ್ ರೂಪದಲ್ಲಿ ಹಣವನ್ನು ನೀಡಿದರೆ ಅದನ್ನು ಹಿಂತಿರುಗಿಸುವಂತೆ ಕೇಳಲು ನಿಮ್ಮ ಸ್ನೇಹಿತರಲ್ಲಿ ಯಾರಾದರೂ ನಿಮಗೆ ಸಾಲದ ಅವಶ್ಯಕತೆ ಇದೆ, ಜಾಮೀನು ನೀವು ಕೇಳಲು ಬರಬಹುದು. ಆಟೋ ಚಾಲಕರು ಸಂಚಾರ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಹೆಚ್ಚಿನ ಮೊತ್ತದ ದಂಡವನ್ನು ಪಡೆಯುವಂಥ ಸನ್ನಿವೇಶ ಸೃಷ್ಟಿಯಾಗಲಿದೆ. ನಿಮ್ಮಲ್ಲಿ ಕೆಲವರಿಗೆ ಗಂಭೀರ ಸ್ವರೂಪದಲ್ಲಿ ಚರ್ಮಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಲಿದ್ದು, ಆಗ ಭೇಟಿ ಮಾಡಲೇಬೇಕು ಎಂಬ ಪರಿಸ್ಥಿತಿ ಎದುರಾಗಲಿದೆ. ವೈದ್ಯಕೀಯ ವೃತ್ತಿಯಲ್ಲಿ ಇರುವವರಿಗೆ ವಿವಿಧ ಅವಕಾಶಗಳು ದೊರೆಯಲಿವೆ.

ಜನ್ಮಸಂಖ್ಯೆ 8 (ಯಾವುದೇ ತಿಂಗಳ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಇತರರಿಗೆ ಹೊಳೆಯದ ಕೆಲವು ಸಂಗತಿಗಳು ನಿಮಗೆ ಸುಲಭವಾಗಿ ಮಾಡಿ ಮುಗಿಸುವುದಕ್ಕೆ ದಾರಿಗಳು ಗೋಚರವಾಗಲಿವೆ. ನಿಮ್ಮನ್ನು ಯಾವುದಾದರೂ ಹಗರಣದಲ್ಲಿ ಸಿಲುಕಿಸಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರು ತಾವೇ ತೊಂದರೆಗೆ ಸಿಲುಕಿಕೊಳ್ಳಲಿದ್ದಾರೆ. ನಿಮ್ಮ ವೃತ್ತಿ ಅಥವಾ ಉದ್ಯೋಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಸಹಾಯ ಆಗುವಂಥ ಮಾಹಿತಿಗಳು ದೊರೆಯಲಿವೆ. ನಿಮ್ಮಲ್ಲಿ ಯಾರ ಕಮಿಷನ್ ಆಧಾರದಲ್ಲಿ ಕೆಲಸ ಮಾಡುತ್ತಾ ಇದ್ದೀರಿ, ಅಂಥವರಿಗೆ ಪ್ರಭಾವಶಾಲಿ ಆದ ವ್ಯಕ್ತಿಯೊಬ್ಬರ ಮೂಲಕ ಹಲವು ಸಂಸ್ಥೆಗಳು ಸಂಪರ್ಕದಲ್ಲಿ ಇರುತ್ತವೆ, ಆದಾಯದ ಪ್ರಮಾಣ ಹೆಚ್ಚು ಮಾಡಿಕೊಳ್ಳಲು ಬಾಗಿಲು ತೆರೆದುಕೊಳ್ಳಲಿದೆ. ಇನ್ನು ನಿಮ್ಮಲ್ಲಿ ಕೆಲವರು ಸಂಗಾತಿಯ ಸಲುವಾಗಿ ಕೆಲವು ದುಬಾರಿ ವಸ್ತುಗಳನ್ನು ಖರೀದಿಸಿ. ಅಚಾನಕ್ಕಾಗಿ ದೂರ ಪ್ರಯಾಣ ಮಾಡಲೇ ಬೇಕಾದ ಸನ್ನಿವೇಶಗಳು ಸೃಷ್ಟಿಯಾಗಲಿದೆ, ಹೆಚ್ಚಿನ ಖರ್ಚು ಸಹ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಚಿಕ್ಕ- ಪುಟ್ಟ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಮಾಡಿಸುತ್ತಾ ಇರುವವರಿಗೆ ದೊಡ್ಡ ಕೆಲಸವೊಂದು ಈ ದಿನ ದೊರೆಯುವಂಥ ಯೋಗ ಇದೆ. ಈ ಹಿಂದೆ ನೀವು ಒಬ್ಬ ವ್ಯಕ್ತಿಗೆ ಮಾಡಿಕೊಟ್ಟ ಕೆಲಸ ಹಾಗೂ ಆ ಸಮಯದಲ್ಲಿ ನೀವು ಪಟ್ಟ ಶ್ರಮ, ತೋರಿಸಿದ ನಿಷ್ಠೆ- ಪ್ರಾಮಾಣಿಕತೆಗೆ ಫಲ ದೊರೆಯಲಿದೆ. ಯಾವುದೇ ವಿಚಾರದಲ್ಲೂ ಅತುರ ಮಾಡಬೇಡಿ. ನಿಮ್ಮ ಎದುರಿಗೆ ಇರುವವರು ಪೂರ್ಣವಾಗಿ ಮಾತು ಮುಗಿಸುವ ತನಕ ಕೇಳಿಸಿಕೊಳ್ಳಿ. ಹೇಳಿದ್ದನ್ನೇ ಹೇಳುತ್ತಾ ಇದ್ದಾರೆ ಎಂದೆನಿಸಿದರೂ ಮಧ್ಯೆ ಮಾತಾಡುವುದಕ್ಕೋ ಅಥವಾ ನಿಮಗೆ ಗೊತ್ತಿದೆ ಅಂತಲೋ ಹೇಳುವುದಕ್ಕೆ ಹೋಗಬೇಡಿ. ನರಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಬಳಲುತ್ತಾ ಇರುವವರಿಗೆ ಸಮಸ್ಯೆ ತೀವ್ರವಾಗಿದೆ. ಈಗ ತೆಗೆದುಕೊಳ್ಳುತ್ತಾ ಇದ್ದಲ್ಲಿ ಅಗತ್ಯ ಕಾರ್ಯ ನಿರ್ವಹಿಸುತ್ತಾ ಇಲ್ಲ ಎಂಬ ಕಾರಣಕ್ಕೆ ಬದಲಾವಣೆ ಮಾಡಬೇಕು ಎಂಬ ಸಲಹೆಯನ್ನು ವೈದ್ಯರು ನೀಡುವ ಸಾಧ್ಯತೆ ಇದೆ.

ಲೇಖನ- ಎನ್.ಕೆ.ಸ್ವಾತಿ



Source link

Leave a Reply

Your email address will not be published. Required fields are marked *