‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ?

‘ಜನ ನಾಯಗನ್’ ಆಡಿಯೋ ಲಾಂಚ್ ಕಾರ್ಯಕ್ರಮ ಒಟಿಟಿಯಲ್ಲಿ: ಎಲ್ಲಿ? ಯಾವಾಗ?


ದಳಪತಿ ವಿಜಯ್ (ತಲಪತಿ ವಿಜಯ್) ನಟಿಸಿರುವ ‘ಜನ ನಾಯಕನ್’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದ ಪ್ರಚಾರ ಚಾಲ್ತಿಯಲ್ಲಿದೆ. ವಿಜಯ್ ಸಾಮಾನ್ಯವಾಗಿ ಯಾವುದೇ ಸಂದರ್ಶನ ನೀಡಿ ಸಿನಿಮಾ ಪ್ರಚಾರ ಬದಲಿಗೆ ಸಿನಿಮಾ ಬಿಡುಗಡೆಗೆ ಮುಂಚೆ ಒಂದು ಆಡಿಯೋ ಲಾಂಚ್ ಕಾರ್ಯಕ್ರಮ ನಡೆಯುತ್ತದೆ, ಅಲ್ಲಿಯೇ ಸಿನಿಮಾ ಬಗ್ಗೆ, ಸಹ ನಟರುಗಳ ಬಗ್ಗೆ ಮಾತನಾಡುತ್ತಾರೆ. ಈ ಬಾರಿಯೂ ಸಹ ‘ಜನ ನಾಯಕನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಬಲು ಅದ್ಧೂರಿಯಾಗಿ ಮಲೇಷಿಯಾನಲ್ಲಿ ನಡೆಸಲಾಯಿತು. ದೂರದ ಮಲೇಷಿಯಾನಲ್ಲಿ ನಡೆದ ಕಾರ್ಯಕ್ರಮವನ್ನು ಯೂಟ್ಯೂಬ್‌ನಲ್ಲಿ ಆದರೂ ನೋಡಲು ಅಭಿಮಾನಿಗಳು ಕಾತರ ಅಭಿಮಾನಿಗಳು, ಆದರೆ ಚಿತ್ರತಂಡಗಳಿಗೆ ಶಾಕ್ ನೀಡಿದೆ.

‘ಜನ ನಾಯಕನ್’ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗುತ್ತಿಲ್ಲ ಬದಲಿಗೆ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಈ ಹಿಂದೆ ವಿಜಯ್ ಅವರ ಯಾವುದೇ ಸಿನಿಮಾದ ಆಡಿಯೋ ಲಾಂಚ್ ಅಥವಾ ಪ್ರೀ ರಿಸ್ ಕಾರ್ಯಕ್ರಮ ಯೂಟ್ಯೂಬ್‌ನಲ್ಲಿ ಲೈವ್ ಮಾಡಲಾಗಿದ್ದು, ಅಥವಾ ಕಾರ್ಯಕ್ರಮ ನಡೆದ ದಿನಗಳ ಬಳಿಕ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಈ ಬಾರಿಯ ಕಾರ್ಯಕ್ರಮವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

‘ಜನ ನಾಯಕನ್’ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಕೆವಿಎನ್‌ನವರು ‘ಜನ ನಾಯಕನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದ ಪ್ರಸಾರ ಹಕ್ಕನ್ನು ಒಟಿಟಿಗೆ ಮಾರಾಟ ಮಾಡಿದೆ. ಅದೂ ದೊಡ್ಡಕ್ಕೆ ಈ ಡೀಲ್ ನಡೆದಿದೆ ಎನ್ನಲಾಗುತ್ತಿದೆ. ಇದೀಗ ‘ಜನ ನಾಯಕನ್’ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಲಿದೆ. ಜನವರಿ 4 ರಂದು ಜೀ5 ನಲ್ಲಿ ಅಭಿಮಾನಿಗಳು ‘ಜನ ನಾಯಕನ್’ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ವಿವರವಾಗಿ ನೋಡಲಾಗಿದೆ.

ಇದನ್ನೂ ಓದಿ:’ಜನ ನಾಯಕನ್ ಬಳಿಕ ಸಿನಿಮಾ ಮಾಡ್ತೀರಾ?’; ಉತ್ತರಿಸಿದ ದಳಪತಿ ವಿಜಯ್

ಮಲೇಶಿಯಾನಲ್ಲಿ ನಡೆದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ‘ಜನ ನಾಯಕನ್’ ಸಿನಿಮಾದ ಜೊತೆಗೆ ಅಭಿಮಾನಿಗಳ ಬಗ್ಗೆಯೂ ಭಾವುಕವಾಗಿ ಮಾತನಾಡಿದ್ದರು. ಮರಳಿನಲ್ಲಿ ಮನೆ ಕಟ್ಟಿಕೊಳ್ಳಲು ಬಂದ ನನಗೆ ದೊಡ್ಡ ಕೋಟೆಯನ್ನೇ ಅಭಿಮಾನಿಗಳು ಕಟ್ಟಿದ್ದಾರೆ, ಆದರೆ ಅವರಿಗಾಗಿ ನಾನು ಏನೂ ಕೊಟ್ಟಿಲ್ಲ, ಮೂವತ್ತು ವರ್ಷ ನಾನು ನನ್ನ ಅಭಿಮಾನಿಗಳಿಗಾಗಿ ದುಡಿಯುತ್ತಿದ್ದೇನೆ, ತಮ್ಮ ಎಲ್ಲವನ್ನೂ ನನಗೆ ಕೊಟ್ಟಿರುವ ಅಭಿಮಾನಿಗಳಿಗಾಗಿ ನಾನು ಸಿನಿಮಾವನ್ನೇ ಬಿಟ್ಟುಕೊಟ್ಟಿದ್ದೇನೆ’ ವಿಜಯ್. ವೇದಿಕೆ ಮೇಲೆ ಹಾಡು ಹಾಡಿ, ಡ್ಯಾನ್ಸ್ ಸಹ ಮಾಡಿದ್ದಾರೆ ವಿಜಯ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:02 pm, ಬುಧವಾರ, 31 ಡಿಸೆಂಬರ್ 25



Source link

Leave a Reply

Your email address will not be published. Required fields are marked *