ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ

ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ


ನವೀನ್ ಚಂದ್ರ ಬಗ್ಗೆ ಅನೇಕರಿಗೆ. ಅವರು ತಮಿಳು ನಟ. ಅವರು ಕನ್ನಡ ಚಿತ್ರರಂಗಕ್ಕೂ ಪರಿಚಯ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಮಾರ್ಕ್’ ಸಿನಿಮಾ. ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಅವರು ಜನಪ್ರಿಯತೆ ಪಡೆದರು. ಅವರು ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ಅವರು ಈಗ ಒಂದು ವಿಷಯ ರಿವೀಲ್ ಮಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

‘ಮಾರ್ಕ್’ ಚಿತ್ರದ ಹುಬ್ಬಳ್ಳಿ ಈವೆಂಟ್‌ನಲ್ಲಿ ನವೀನ್ ಚಂದ್ರ ಮಾತನಾಡಿದ್ದರು. ಈ ವೇಳೆ ಅವರು ಒಂದು ವಿಷಯವನ್ನು ಹಂಚಿಕೊಂಡರು. ಅದು ಈಗ ವೈರಲ್ ಆಗಿದೆ ‘ಮಧ್ಯಾಹ್ನ 2 ಗಂಟೆವರೆಗೆ ಚೆನ್ನೈನಲ್ಲಿದ್ದೆ. ಹುಬ್ಬಳ್ಳಿಗೆ ಬರಬೇಕು, ಹೇಗೆ ಬರಬೇಕು ಎಂದು ಗೊತ್ತಾಗಲಿಲ್ಲ. ರಸ್ತೆ ಮೂಲಕವೂ ಬರೋಕೆ ಸಾಧ್ಯವೇ ಇಲ್ಲ. ಒಂದು ಕಾಲ್ ಬಂತು. ನೀವು ಇಲ್ಲಿ ಬರಬೇಕು ಎಂದ ಸುದೀಪ್. ಸುದೀಪ್ ಸರ್ ನಿಮ್ಮ ಮನಸ್ಸು ದೊಡ್ಡದು. ನಾಲ್ಕೂವರೆಗೆ ಚೆನ್ನೈ ಬಿಟ್ಟೆ. 8 ಗಂಟೆಗೆ ಇಲ್ಲ. ಇದಕ್ಕೆ ಸುದೀಪ್ ಕಾರಣ’ ಎಂದರು ನವೀನ್ ಚಂದ್ರ.

‘ನಮ್ಮ ಇಡೀ ಕುಟುಂಬ ಅವರಿಗೆ ದೊಡ್ಡ ಅಭಿಮಾನಿ. ಅವರಿಗೆ ಯಾರು ತಾನೇ ಅಭಿಮಾನಿ ಅಲ್ಲ ಹೇಳಿ. ಅವರದ್ದು ಏಂಜಲ್ ರೀತಿಯ ಮನಸ್ಸು. ಅವರು ನಮಗೆ ಸಿಕ್ಕಿದ್ದು, ಪರಿಚಯ ಆಗಿದ್ದಕ್ಕೆ ನಾನು ಲಕ್ಕಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ

ನವೀನ್ ಚಂದ್ರ ಅವರು ಗೌರವದಿಂದ ಕನ್ನಡ ಮಾತನಾಡಬಲ್ಲರು ಅವರು ಹುಟ್ಟಿ ಬೆಳೆದಿದ್ದು ಬಳ್ಳಾರಿಯಲ್ಲಿ. ಹೀಗಾಗಿ, ಕನ್ನಡದಲ್ಲೇ ಅವರು ಓದಿದ್ದು. ಆ ಬಳಿಕ ತೆಲುಗು, ತಮಿಳು ಸಿನಿಮಾಗಳಿಂದ ಆಫರ್ ಬಂದು ಆ ಕಡೆ ಹೆಚ್ಚು ಸೆಟಲ್ ಆದರು. ಇದರಿಂದ ಅವರಿಗೆ ಕನ್ನಡದ ಟಚ್ ಸ್ವಲ್ಪ ತಪ್ಪಿದೆ. ಆದರೂ ಅವರು ಭಾಷೆ ಮರೆತಿಲ್ಲ. ‘ಮಾರ್ಕ್’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ರಂದು ಪ್ರಕಟಿಸಲಾಗಿದೆ – 8:33 am, ಗುರು, 1 ಜನವರಿ 26



Source link

Leave a Reply

Your email address will not be published. Required fields are marked *