ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ

ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ ಹೆಚ್ಚಳ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ


ಜನವರಿ 1: ಹೊಸ ವರ್ಷಕ್ಕೆ ಎಲ್ಪಿಜಿ ಸಿಲಿಂಡರ್ ಬೆಲೆ (ಎಲ್.ಪಿ.ಜಿ) ಏರಿಕೆಯ ಶಾಕ್ ಸಿಕ್ಕಿದೆ. 2025ರಲ್ಲಿ 200 ರೂಗೂ ಹೆಚ್ಚು ಇಳಿಕೆ ಕಂಡಿದ್ದ ಕಮರ್ಷಿಯಲ್ ಎಲ್ ಪಿಜಿ ಗ್ಯಾಸ್ ಬೆಲೆ ಏರಿಕೆಯಾಗಿದೆ. ಆದರೆ, ಗೃಹಬಳಕೆ ಗ್ಯಾಸ್ ಬೆಲೆಯಲ್ಲಿ ಏರಿಕೆ ಆಗಿಲ್ಲ. 19 ಕಿಲೋ ಮತ್ತು 47.50 ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್‌ಗಳು ದುಬಾರಿಯಾಗಿವೆ. 19 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 110 ರೂನಿಂದ 112 ರೂನಷ್ಟು ಏರಿದೆ. ಬೆಂಗಳೂರಿನಲ್ಲಿ 110.50 ರೂ ಬೆಲೆ ಹೆಚ್ಚಾಗಿದೆ. ಇನ್ನು, 47.50 ಕಿಲೋ ತೂಕದ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 274.50 ರೂ ಏರಿಕೆಯಾಗಿದೆ, 4,407 ರೂ ಗಡಿ ಮುಟ್ಟಿದೆ.

ಬೆಂಗಳೂರಿನಲ್ಲಿ 2026ರ ಜನವರಿಯಲ್ಲಿ ವಿವಿಧ ಎಲ್ಪಿಜಿ ದರ

  • 14.2 ಕಿಲೋ ಅಡುಗೆ ಅನಿಲ: 855.50 ರೂ
  • 5 ಕಿಲೋ ಅಡುಗೆ ಅನಿಲ: 318.50 ರೂ
  • 19 ಕಿಲೋ ವಾಣಿಜ್ಯ ಸಿಲಿಂಡರ್: 1,764.50 (110.50 ರೂ ಏರಿಕೆ)
  • 47.5 ಕಿಲೋ ವಾಣಿಜ್ಯ ಸಿಲಿಂಡರ್: 4,407 ರೂ (274.50 ರೂ ಏರಿಕೆ)

ಇದನ್ನೂ ಓದಿ: ಸಿಮ್ ಪರಿಶೀಲನೆಯಿಂದ ಹಿಡಿದು ಕ್ರೆಡಿಟ್ ಸ್ಕೋರ್‌ವರೆಗೆ ಜನವರಿ 1 ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

ಬಹಳ ತಿಂಗಳುಗಳಿಂದ ಗೃಹಬಳಕೆ ಎಲ್ಪಿಜಿ ಬೆಲೆ ಹೆಚ್ಚೇನೂ ಏರಿಕೆ ಆಗಿಲ್ಲ. 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಕಳೆದ 1-2 ವರ್ಷದಿಂದ ಸುಮಾರು 50 ರೂ ಮಾತ್ರ.

ದೇಶಾದ್ಯಂತ ವಿವಿಧ ನಗರಗಳಲ್ಲಿ 19 ಕಿಲೋ ಕಮರ್ಷಿಯಲ್ ಗ್ಯಾಸ್ ಬೆಲೆ (ಜ. 1ಕ್ಕೆ):

  • ದೆಹಲಿ: 1,691.50 ರೂ
  • ಕೋಲ್ಕತಾ: 1,684 ರೂ
  • ಮುಂಬೈ: 1,642.50 ರೂ
  • ಬೆಂಗಳೂರು: 1,764.60 ರೂ
  • ಪಾಟ್ನಾ: 1,953 ರೂ
  • ಲಕ್ನೋ: 1,814 ರೂ
  • ಗುರುಗ್ರಾಮ: 1,708.50 ರೂ
  • ಭೋಪಾಲ್; 1,696 ರೂ
  • ನೋಯ್ಡಾ: 1,691 ರೂ

ಇದನ್ನೂ ಓದಿ: ಭಾರತದ ಪ್ರಗತಿಯ ಸಂಕೇತಗಳು; 10 ವರ್ಷದ ಹೂಡಿಕೆ, ಎಲ್ ಪಿಜಿ ಅನುಭೋಗದಲ್ಲಿ ಸಖತ್ ವರ್ಷ

ಕಮರ್ಷಿಯಲ್ ಗ್ಯಾಸ್ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮದ ಮೇಲೆ ಪರಿಣಾಮ. ಅಡುಗೆ ಏರಿಕೆಯಾಗಿ, ಅಂತಿಮವಾಗಿ ಗ್ರಾಹಕರ ಊಟದ ವೆಚ್ಚದಲ್ಲಿ ಏರಿಕೆಯಾಗುತ್ತದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *