ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ

ಪೋಸ್ಟ್ ಆಫೀಸ್ ಸ್ಮಾಲ್ ಸೇವಿಂಗ್ ಸ್ಕೀಮ್​ಗಳ ಬಡ್ಡಿದರದಲ್ಲಿ ಇಳಿಕೆ ಇಲ್ಲ; ಇಲ್ಲಿದೆ ಜನವರಿ-ಮಾರ್ಚ್ ಕ್ವಾರ್ಟರ್​ನ ಬಡ್ಡಿದರಗಳ ಪಟ್ಟಿ


ಜನವರಿ 1: ಸಾಮಾನ್ಯ ಜನರು ಅತಿಹೆಚ್ಚಾಗಿ ಬಳಸುವ ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳು (ಸಣ್ಣ ಉಳಿತಾಯ ಯೋಜನೆಗಳು) ಬಡ್ಡಿದರ ಪರಿಷ್ಕರಣೆ ಮಾಡಲಾಗಿದೆ. ಈ ಹಣಕಾಸು ವರ್ಷದ ಕೊನೆಯ ಕ್ವಾರ್ಟರ್‌ ಆಗಿರುವ 2026ರ ಜನವರಿಯಿಂದ ಮಾರ್ಚ್‌ವರೆಗಿನ ಅವಧಿಯ ಪರಿಷ್ಕೃತ ಬಡ್ಡಿದರವನ್ನು ಪ್ರಕಟಿಸಲಾಗಿದೆ. ಹಣಕಾಸು ಸಚಿವಾಲಯದ ಅಡಿಗೆ ಬರುವ ಆರ್ಥಿಕ ವ್ಯವಹಾರಗಳ ಇಲಾಖೆ ಹೊರಡಿಸಿದ ಪ್ರಕಟಣೆ ಪ್ರಕಾರ, ಕ್ವಾರ್ಟರ್‌ನಲ್ಲಿ ಈ ಸ್ಮಾಲ್ ಸೇವಿಂಗ್ಸ್ ಸ್ಕೀಮ್‌ಗಳಿಗೆ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿಲ್ಲ. ಹಿಂದೆ ಇದ್ದ ದರಗಳೇ ಮುಂದುವರಿಯಲಿವೆ.

ಆರ್ಬಿಐನ ರಿಪೋ ದರಗಳು ಇಳಿಕೆಯಾದ ನಂತರ ಅನೇಕ ಬ್ಯಾಂಕುಗಳು ತಮ್ಮ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಿಗೆ ಬಡ್ಡಿದರವನ್ನು ತಗ್ಗಿಸಿವೆ. ಆದರೆ, ಅಂಚೆ ಕಚೇರಿಯ ವಿವಿಧ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ತಗ್ಗಿಲ್ಲ ಎಂಬುದು ಗಮನಾರ್ಹ.

ಇದನ್ನೂ ಓದಿ: LPG ಬೆಲೆ: ಕಮರ್ಷಿಯಲ್ ಗ್ಯಾಸ್ ಬೆಲೆ ಭರ್ಜರಿ; 19 ಕಿಲೋ ಸಿಲಿಂಡರ್ ದರ 110.50 ರೂ ಏರಿಕೆ

2026ರ ಜನವರಿಯಿಂದ ಮಾರ್ಚ್‌ನ ಕ್ವಾರ್ಟರ್‌ನಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ

  1. ಸುಕನ್ಯ ಸಮೃದ್ಧಿ ಸ್ಕೀಮ್: ಬಡ್ಡಿದರ ಶೇ. 8.2
  2. ಪಬ್ಲಿಕ್ ಪ್ರಾವಿಡೆಂಟ್ ಫಂಡ್: ಬಡ್ಡಿದರ ಶೇ. 7.1
  3. ಕಿಸಾನ್ ವಿಕಾಸ್ ಪತ್ರ: ಬಡ್ಡಿದರ ಶೇ. 7.5
  4. ರಾಷ್ಟ್ರೀಯ ಉಳಿತಾಯ ಪತ್ರ (ಎನ್‌ಎಸ್‌ಸಿ): ಶೇ. 7.7 ಬಡ್ಡಿ
  5. ಮಾಸಿಕ ಆದಾಯ ಯೋಜನೆ (ಎಂಐಎಸ್): ಶೇ. 7.4 ಬಡ್ಡಿ
  6. ಪೋಸ್ಟ್ ಆಫೀಸ್ ಆವರ್ತನ ಠೇವಣಿ (ಆರ್‌ಡಿ): ಬಡ್ಡಿದರ ಶೇ. 6.7
  7. ಟೈಮ್ ಡೆಪಾಸಿಟ್: ಬಡ್ಡಿದರ ಶೇ. 6.9 ರಿಂದ ಶೇ. 7.5
  8. ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್: ಬಡ್ಡಿದರ ಶೇ. 4
  9. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್ಸಿಎಸ್): ಶೇ. 8.2 ಬಡ್ಡಿ
  10. ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್: ಶೇ. 7.5 ಬಡ್ಡಿ

ಸರ್ಕಾರವು ಪ್ರತೀ ಕ್ವಾರ್ಟರ್‌ಗೂ ಬಡ್ಡಿದರ ಪರಿಷ್ಕರಿಸುತ್ತದೆ. 2023-24ರ ಕೊನೆಯ ಕ್ವಾರ್ಟರ್‌ನಲ್ಲಿ ಬಡ್ಡಿದರದಲ್ಲಿ ಬದಲಾವಣೆ ಮಾಡಲಾಗಿದೆ. ಅದಾದ ಬಳಿಕ ಎರಡು ವರ್ಷದಿಂದ ಬದಲಾವಣೆ ಆಗಿಲ್ಲ.

ಇದನ್ನೂ ಓದಿ: ಸಿಮ್ ಪರಿಶೀಲನೆಯಿಂದ ಹಿಡಿದು ಕ್ರೆಡಿಟ್ ಸ್ಕೋರ್‌ವರೆಗೆ ಜನವರಿ 1 ರಿಂದ ಆಗಲಿರುವ ಪ್ರಮುಖ ಹಣಕಾಸು ನಿಯಮ ಬದಲಾವಣೆಗಳು

ಬಡ್ಡಿದರ ಪರಿಷ್ಕರಣೆಗೆಂದೇ ಒಂದು ಸಮಿತಿ

ಪೋಸ್ಟ್ ಆಫೀಸ್ ಸ್ಕೀಮ್ ಅಥವಾ ಸಣ್ಣ ಉಳಿತಾಯ ಯೋಜನೆಗಳಿಗೆ ಬಡ್ಡಿದರ ಎಷ್ಟು ನಿಗದಿಪಡಿಸಬೇಕೆಂದು ನಿರ್ಧರಿಸಲು ಸರ್ಕಾರ ಒಂದು ಸಮಿತಿಯನ್ನೇ ರಚಿಸಿದೆ. ಶ್ಯಾಮಲಾ ಗೋಪಿನಾಥ್ ನೇತೃತ್ವದ ಸಮಿತಿ ಸಲಹೆ ನೀಡುವ ವಿಧಾನದ ಆಧಾರದ ಮೇಲೆ ಬಡ್ಡಿದರ ಪರಿಷ್ಕರಣೆ ಮಾಡಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *