ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಜಾಹ್ನವಿಗಾಗಿ ಜಯಂತ್, ಆಕೆಯ ಅಣ್ಣ ವೆಂಕಿ ಮತ್ತು ಅತ್ತಿಗೆಯನ್ನು ಇಟ್ಟುಕೊಂಡು ವಿಶ್ವನಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ ದೃಶ್ಯಕ್ಕೆ ವೀಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಕ್ಷ್ಮೀ ನಿವಾಸ (Lakshmi Nivasa Serial Update) ಸೀರಿಯಲ್ನಲ್ಲಿ ಸದ್ಯ ಜಾಹ್ನವಿಯನ್ನು ಹುಡುಕಲು ಜಯಂತ್ ಎಲ್ಲಾ ಪ್ರಯತ್ನ ಮಾಡಿ ಸೋತಿದ್ದಾನೆ. ಕೊನೆಯ ಪ್ರಯತ್ನವಾಗಿ ಜಾಹ್ನವಿಯ ಅಣ್ಣ ವೆಂಕಿ ಮತ್ತು ಅತ್ತಿಗೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾನೆ.

ವಿಶ್ವನ ಹತ್ತಿರವೇ ಜಾಹ್ನವಿ ಇರುವ ಬಗ್ಗೆ ಜಯಂತ್ಗೆ ತಿಳಿದ ಹಿನ್ನೆಲೆಯಲ್ಲಿ, ಇದೀಗ ವಿಶ್ವನ ಬ್ಲ್ಯಾಕ್ಮೇಲ್ ಮಾಡಿದ್ದಾನೆ. ವೆಂಕಿ ಮತ್ತು ಪತ್ನಿಯ ಬಳಿ ಗನ್ ಹಿಡಿದು ಅವರನ್ನು ಸಾಯಿಸುವ ಬೆದರಿಕೆ ಹಾಕಿರುವ ವಿಶ್ವ, ಇದನ್ನು ವಿಡಿಯೋ ಕಾಲ್ ಮಾಡಿ ವಿಶ್ವನಿಗೆ ತೋರಿಸಿದ್ದಾನೆ.

ವೆಂಕಿ ಮತ್ತು ಪತ್ನಿ ಕಣ್ಣಿಗೆ ಬಟ್ಟೆ ಕಟ್ಟಿರೋ ವಿಶ್ವ, ಜಾಹ್ನವಿಯನ್ನು ತಂದು ನಿಲ್ಲಿಸಿಲ್ಲ ಎಂದರೆ ಸಾಯಿಸುವ ಬೆದರಿಕೆ ಹಾಕಿದ್ದಾನೆ. ಇದನ್ನು ನೋಡಿ ವಿಶ್ವ ಶಾಕ್ ಆಗಿದ್ದರೂ ಜಾಹ್ನವಿಗೆ ವಿಷಯ ತಿಳಿಸುತ್ತಿಲ್ಲ.

ಆದರೆ ಈ ಸೀನ್ ನೋಡಿ ವೀಕ್ಷಕರು ರೊಚ್ಚಿಗೆದ್ದಿದ್ದಾರೆ. ಈ ರೀತಿ ಸಾಯಿಸೋ ಬೆದರಿಕೆ ಹಾಕಿದ್ರೆ ವಿಶ್ವನಿಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಬರಲ್ವಾ, ಎಂಥ ದೃಶ್ಯ ಎಂದು ತೋರಿಸ್ತೀರಾ? ಕಂಪ್ಲೇಂಟ್ ಕೊಟ್ಟರೆ ಅಲ್ಲಿಗೆ ಜಯಂತ್ ಕಥೆ ಮುಗಿಯತ್ತದೆ. ಅದನ್ನು ಬಿಟ್ಟು ಯಾಕೋ ಇದನ್ನು ಅತಿಯಾಗಿ ತೋರಿಸಲಾಗುತ್ತಿದೆ ಎಂದು ಬೈಯುತ್ತಿದ್ದಾರೆ.

ಒಂದು ವೇಳೆ ವಿಶ್ವ ಕಂಪ್ಲೇಂಟ್ ಕೊಟ್ಟಿಲ್ಲ ಎಂದರೆ ನಾವೇ ಪೊಲೀಸ್ ಕಂಪ್ಲೇಂಟ್ ಕೊಡ್ತೇವೆ. ಆವಾಗಲಾದರೂ ಈ ಸೀರಿಯಲ್ ಗೆ ಒಂದು ಗತಿ ಕಾಣಬಹುದು. ಇಲ್ಲದಿದ್ದರೆ ಜಾಹ್ನವಿ ಮತ್ತು ಜಯಂತ್ನ ಸ್ಟೋರಿ ನೋಡಿ ನೋಡಿ ಸಾಕಾಗಿ ಹೋಗಿದೆ ಎನ್ನುತ್ತಿದ್ದಾರೆ.

Source link
Lakshmi Nivasa Serial: ಪೊಲೀಸ್ ಕಂಪ್ಲೇಂಟ್ ಕೊಡಲು ಮುಂದಾದ ವೀಕ್ಷಕರು- ಆಗಿದ್ದೇನು?