ಹೊಸ ವರ್ಷದ ಆಚರಣೆ ಆರಂಭವಾಗಿದೆ. ಹೊಸ ವರ್ಷದ ಆಚರಣೆಗಳು, ಮುಂಬರುವ ರಜಾದಿನಗಳ ಬಗ್ಗೆಯೂ ಉತ್ಸಾಹ ಹೆಚ್ಚುತ್ತಿದೆ. ಏಕೆಂದರೆ ಜನವರಿ ಮೊದಲ ತಿಂಗಳ ವಾರದಿಂದ ಅನೇಕ ಸರ್ಕಾರಿ ರಜಾದಿನಗಳು, ಹಬ್ಬಗಳು ಮತ್ತು ರಾಷ್ಟ್ರೀಯ ದಿನಗಳು ಇರುತ್ತವೆ. ಇದು ಉದ್ಯೋಗಿಗಳು ಮತ್ತು ತುಂಬಾ ಖುಷಿಯ ವಿಚಾರ. 2026 ಹೊಸ ವರ್ಷದೊಂದಿಗೆ ಸ್ವಾಗತಿಸುವುದರಿಂದ ಡಿಸೆಂಬರ್ ತಿಂಗಳನ್ನು ಕೊನೆಗೊಳಿಸುವವರೆಗೆ.. ಪ್ರತೀ ತಿಂಗಳು ವಿರಾಮವು ಪ್ರೀತಿಪಾತ್ರಗಳೊಂದಿಗೆ ಸಮಯವನ್ನು ಕಳೆಯಲು ಈ ವರ್ಷ ಎಷ್ಟು ರಜೆಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಪ್ರತೀ ತಿಂಗಳು ಲಾಂಗ್ ವೀಕೆಂಡ್ ಪಡೆಯಲು ಈ ರೀತಿ ಯೋಜನೆ ಮಾಡಿ:
ಜನವರಿ 01 ಹೊಸ ವರ್ಷದ ಆಗದ ಕಛೇರಿಯಲ್ಲಿ ರಜೆ ಇದ್ದರೆ ಮರುದಿನ ಶುಕ್ರವಾರ ರಜೆ ತಗೆದುಕೊಳ್ಳಿ. ಜೊತೆಗೆ ಶನಿವಾರ, ಆದಿತ್ಯವಾರ ರಜೆಗಾಗಿ ನೀವು ಒಟ್ಟಾಗಿ 4 ರಜೆಗಳು ನಿಮ್ಮ ಕೈಯಲ್ಲಿರುತ್ತವೆ. ಆದ್ದರಿಂದ ಈ 4 ದಿನದಲ್ಲಿ ನೀವು ನಿಮ್ಮ ಪ್ರೀತಿಪಾತ್ರಗಳೊಂದಿಗೆ ಲಾಂಗ್ ವೀಕೆಂಡ್ ಅನ್ನು ಬಿಡುವುದಿಲ್ಲ. ಇದೇ ತಿಂಗಳಿನಲ್ಲಿ ಸಂಕ್ರಾಂತಿ ಹಬ್ಬವು (ಜನವರಿ 14) ಬುಧವಾರ ಬರುವುದರಿಂದ 15 ಮತ್ತು 16ರಂದು ರಜೆ ಪಡೆದು ಐದು ದಿನ ಲಾಂಗ್ ಬ್ರೇಕ್ ಪಡೆಯಬಹುದು. ಅದೇ ರೀತಿ ಗಣರಾಜ್ಯೋತ್ಸವ (ಜನವರಿ 26) ಇರುವಾಗಲೂ ಕೂಡ ನೀವು ಮೂರು ದಿನಗಳ ರಜೆ ಪಡೆಯಬಹುದು.
ಮಾರ್ಚ್ ತಿಂಗಳಿನಲ್ಲಿಯೂ ಕೂಡ ನೀವು ದೀರ್ಘ ರಜೆಯೊಂದಿಗೆ ನಿಮ್ಮ ಪ್ರೀತಿ ಪಾತ್ರಗಳೊಂದಿಗೆ ಸಮಯವನ್ನು ಕಳೆಯಬೇಡಿ. ಮಾರ್ಚ್ 4 ರಂದು ಹೋಳಿ ಹಬ್ಬ ಅಂದರೆ ಬುಧವಾರ ಬಂದಿರುವ ನೀವು 5 ಮತ್ತು 6 ರಂದು ರಜೆ ತೆಗೆದುಕೊಂಡರೆ ವಾರಾಂತ್ಯ ಸೇರಿ ಐದು ದಿನಗಳ ರಜೆ ಸಿಗುತ್ತದೆ. ಅದರಂತೆ ಯುಗಾದಿ ಹಬ್ಬವೂ ಮತ್ತೊಂದು ಉತ್ತಮ ಅವಕಾಶವನ್ನು ನೀಡಿದೆ.
ಏಪ್ರಿಲ್ ತಿಂಗಳಿನಲ್ಲಿಯೂ ಕೂಡ ನೀವೂ ಕೆಲಸದ ಸಮಯದಲ್ಲಿ ಲಾಂಗ್ ಬ್ರೇಕ್ ಪಡೆಯಬಹುದು. ಏಪ್ರಿಲ್ ತಿಂಗಳ ಮೂರನೇ ತಾರೀಕಿನಂದು ಅಂದರೆ ಶುಕ್ರವಾರ ಗುಡ್ ಫ್ರೈಡೇ ಬರುವುದರಿಂದ ನೀವು ಶುಕ್ರವಾರ, ಶನಿವಾರ–ಭಾನುವಾರದೊಂದಿಗೆ ಮೂರು ದಿನಗಳ ದೀರ್ಘ ರಜೆ ಪಡೆಯಬಹುದು. ಈ ಮೂರು ದಿನದಲ್ಲಿ ನೀವು ಸುಂದರ ವೀಕೆಂಡ್ ಟ್ರಿಪ್ ಯೋಜಿಸಬಹುದು.
ಇದನ್ನೂ ಓದಿ: ಹೊಸ ವರ್ಷ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ
ಮೇ ತಿಂಗಳಲ್ಲಿ ಕಾರ್ಮಿಕ ದಿನ (ಮೇ 1) ಶುಕ್ರವಾರದಂದು, ಮೂರು ದಿನಗಳ ಬ್ರೇಕ್ ಸಿಗುತ್ತದೆ. ಅದರಂತೆ ಜೂನ್ನಲ್ಲಿ ಮೊಹರಂ (ಜೂನ್ 26) ಶುಕ್ರವಾರ ಬಂದು ವಾರಾಂತ್ಯ ಸೇರಿ ಲಾಂಗ್ಗೆ ರಜೆ ನೀಡಲಾಗಿದೆ. ಆದ್ದರಿಂದ ಮೇ ಮತ್ತು ಜೂನ್ ಎರಡು ತಿಂಗಳಿನಲ್ಲಿ ಸಿಗುವ ಈ ದೀರ್ಘ ರಜೆಯನ್ನು ಮಿಸ್ ಮಾಡಲೇ ಬೇಡಿ.
ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ ಚತುರ್ಥಿ 14 ಅಂದರೆ ಸೋಮವಾರದಂದು ಬಂದಿರುವ ಕುಟುಂಬದೊಂದಿಗೆ ಹಬ್ಬವನ್ನು ಆಚರಿಸಲು ಸೂಕ್ತ ಸಮಯ. ನೀವು ಈ ತಿಂಗಳ ಶನಿವಾರ ಮತ್ತು ಆದಿತ್ಯವಾರ ಜೊತೆಗೆ ಸೋಮವಾರದ ಲಾಂಗ್ ಬ್ರೇಕ್ ತೆಗೆದುಕೊಂಡರೆ ನಿಮ್ಮ ಪ್ರೀತಿ ಪಾತ್ರಗಳೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು.
ಅಕ್ಟೋಬರ್ನಲ್ಲಿ ಗಾಂಧಿ ಜಯಂತಿ ಮತ್ತು ದಸರಾ ಹಬ್ಬಗಳು ಲಾಂಗ್ ಹಾಲಿಡೇಗೆ ಉತ್ತಮ ಅವಕಾಶ ಕೊಡುತ್ತವೆ. ಡಿಸೆಂಬರ್ನಲ್ಲಿ ಕ್ರಿಸ್ಮಸ್ (ಡಿಸೆಂಬರ್ 25) ಶುಕ್ರವಾರ ಬರುವುದರಿಂದ ವರ್ಷಾಂತ್ಯವನ್ನು ಪ್ರವಾಸದೊಂದಿಗೆ ಸ್ಮರಣೀಯವಾಗಿಸಬಹುದು. ಈ ಮೂಲಕ ನಿಮ್ಮ ಪೂರ್ತಿ ವರ್ಷವನ್ನು ಸುಂದರವಾಗಿ ಕಳೆಯಬಹುದು. ಇನ್ನೇಕೆ ತಡ ಕೆಲಸದ ಜಂಜಾಟ ಬಿಟ್ಟು ಆರಾಮವಾಗಿ ಪ್ರವಾಸದ ಯೋಜನೆ ಮಾಡಿ, ನಿಮ್ಮ ಪ್ರೀತಿ ಪಾತ್ರಗಳೊಂದಿಗೆ ಸುಂದರ ಸಮಯವನ್ನು ಕಳೆಯಿರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 2:53 pm, ಗುರುವಾರ, 1 ಜನವರಿ 26