ಬೆಂಗಳೂರು, ಜನವರಿ 1: 2025ಕ್ಕೆ ಗುಡ್ ಬೈ ಹೇಳಿ 2026ರಲ್ಲಿ ಜನರು ಅದ್ಧೂರಿಯಾಗಿ ವೆಲ್ ಕಂ ಮಾಡಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಜೋರಾಗಿತ್ತು. ಹೊಸ ವರ್ಷ (ಹೊಸ ವರ್ಷ) ಸಂಭ್ರಮಾಚರಣೆಗೆ ಅನುಕೂಲವಾಗುವಂತೆ ಬಿಎಂಟಿಸಿಯಿಂದ (ಬಿಎಂಟಿಸಿ) ಹೆಚ್ಚುವರಿ ಬಸ್ ಸೇವೆ ಒದಗಿಸಲಾಗಿದೆ. ಹೀಗಾಗಿ ಬಿಎಂಟಿಸಿ ಭಾರಿ ಆದಾಯ ಗಳಿಸಿದೆ. ನಿನ್ನೆ (ಬುಧವಾರ) ಒಂದೇ ದಿನ ಬಿಎಂಟಿಸಿಗೆ ಬರೋಬ್ಬರಿ 10 ಲಕ್ಷ ರೂ ಆದಾಯ ಹರಿದುಬಂದಿದೆ.
ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಹೇಳಿದ್ದಾರೆ
ಈ ಬಗ್ಗೆ ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾತನಾಡಿದ್ದು, ಹೊಸ ವರ್ಷಕ್ಕೆ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗಿದೆ. ಹೆಚ್ಚುವರಿ 200 ಟ್ರಿಪ್ ಮಾಡಲಾಗಿದೆ. 4400 ಕಿ.ಮೀ ಬಸ್ ದೂರಿವೆ. ರಾತ್ರಿ 11 ಗಂಟೆಯಿಂದ ಮಧ್ಯರಾತ್ರಿ 3 ಗಂಟೆ ತನಕ ಬಸ್ ಸೇವೆ ಒದಗಿಸಲಾಗಿದೆ. ಸರಿಸುಮಾರು ಒಂದು ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ನಿನ್ನೆ ಒಂದೇ ದಿನ ಬಿಎಂಟಿಸಿ 10 ಲಕ್ಷ ರೂ ಆದಾಯ ಗಳಿಸಿದೆ.
ಇದನ್ನೂ ಓದಿ: ಹೊಸ ವರ್ಷದ ದಿನ ನಮ್ಮ ಮೆಟ್ರೋಗೆ ಬಂಪರ್ ಆದಾಯ: ಆದ ಕಲೆಕ್ಷನ್ ಎಷ್ಟು?
ಕೋರಮಂಗಲ, ಇಂದಿರಾನಗರ, ಮಾಲ್ ಆಫ್ ಏಶಿಯಾ, ಎಂಜಿ ರಸ್ತೆ ಹೀಗೆ ನಾನಾ ಕಡೆಗಳಲ್ಲಿ ಸೇವೆಯನ್ನು ವಿಸ್ತರಿಸಲಾಗಿದೆ. ಡಿಸೆಂಬರ್ 20 ರಂದು 6 ಕೋಟಿ 75 ಲಕ್ಷ ರೂ ಆದಾಯವಿತ್ತು. ಐಟಿ ಬಿಟಿ ಜನರಿಗೆ ರಜೆ ಇರುವ ಕಾರಣ, ಡಿಸೆಂಬರ್ 24 ರಿಂದ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನ್ಯೂ ಇಯರ್ ಸಂಭ್ರಮ ಮಧ್ಯೆ ಕಿರಿಕ್: ಗೆಳೆಯನಿಗೆ ಹೊಡೆದ ಯುವತಿ, ನಡುರೋಡಲ್ಲೇ ಜೋಡಿ ಹೈಡ್ರಾಮಾ, ಲಾಠಿ ಚಾರ್ಜ್
ಡಿಸೆಂಬರ್ 25, 27, 28 ರಂದು ಕಡಿಮೆ ಪ್ರಯಾಣಿಕರು ಓಡಾಟ ಮಾಡಿದ್ದು, 60 ಲಕ್ಷ ರೂ ಆದಾಯ ಕಡಿಮೆಯಾಗಿದೆ. 6 ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಇಳಿಕೆಯಾಗಿದೆ. ಆದರೆ ಹೊಸ ವರ್ಷ ಹಿನ್ನೆಲೆ ಬುಧವಾರ ಒಂದೇ ದಿನ 1 ಲಕ್ಷ ಪ್ರಯಾಣಿಕರು ಹೆಚ್ಚಾಗಿದ್ದಾರೆ ಎಂದು ಬಿಎಂಟಿಸಿ ಚೀಫ್ ಟ್ರಾಫಿಕ್ ಮ್ಯಾನೇಜರ್ ಪ್ರಭಾಕರ್ ರೆಡ್ಡಿ ಮಾಹಿತಿ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.