ರೇಡಿಯೋ ಹಿಡಿದು ರೆಟ್ರೋಸ್ಟೈಲ್​ನಲ್ಲಿ Bigg Boss ಜಾಹ್ನವಿ ಭರ್ಜರಿ ಫೋಟೋಶೂಟ್​

ರೇಡಿಯೋ ಹಿಡಿದು ರೆಟ್ರೋಸ್ಟೈಲ್​ನಲ್ಲಿ Bigg Boss ಜಾಹ್ನವಿ ಭರ್ಜರಿ ಫೋಟೋಶೂಟ್​

ರೇಡಿಯೋ ಹಿಡಿದು ರೆಟ್ರೋಸ್ಟೈಲ್​ನಲ್ಲಿ Bigg Boss ಜಾಹ್ನವಿ ಭರ್ಜರಿ ಫೋಟೋಶೂಟ್​

ಬಿಗ್​ಬಾಸ್​ ಖ್ಯಾತಿಯ ಜಾಹ್ನವಿ ಇದೀಗ  ರೆಟ್ರೋ ಶೈಲಿಯಲ್ಲಿ ರೇಡಿಯೋ ಜೊತೆ ಫೋಟೋಶೂಟ್​ ಮಾಡಿಸಿಕೊಂಡು ಗಮನ ಸೆಳೆದಿದ್ದಾರೆ. ಬಿಗ್​ಬಾಸ್​ ಮನೆಯೊಳಗಿನ ಜಗಳ ಹಾಗೂ ವೈಯಕ್ತಿಕ ಜೀವನದ ಚರ್ಚೆಗಳ ನಂತರ, ಇದೀಗ ತಮ್ಮ ಡ್ರೆಸ್​ ಸೆನ್ಸ್​ ಹಾಗೂ ಹೊಸ ಫೋಟೋಶೂಟ್​ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಖ್ಯಾತ ಆ್ಯಂಕರ್ ಆಗಿಯೂ ನಟಿಯಾಗಿಯೂ ಗುರುತಿಸಿಕೊಂಡಿರೋ ಜಾಹ್ನವಿ ಅವರು ಬಿಗ್​ಬಾಸ್​ 12ಕ್ಕೆ ಹೋಗಿ ಬಂದ ಮೇಲೆ ಬಿಗ್​ಬಾಸ್​ ಜಾಹ್ನವಿಯಾಗಿದ್ದಾರೆ. ಬಿಗ್​ಬಾಸ್​ನಿಂದ ಬಂದ ಮೇಲೆ ಸಹಜವಾಗಿ ಅವರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿರುವುದರ ಜೊತೆಜೊತೆಗೆನೇ ಒಳ್ಳೆಯ ಆಫರ್ಸ್​ಗಳೂ ಬರುತ್ತಿವೆ.

ಇದೀಗ ಜಾಹ್ನವಿ (Bigg Boss Jhanvi) ಅವರು 70-80ರ ದಶಕದ ಕಾಲದಲ್ಲಿ ಪ್ರತಿಯೊಂದು ಮನೆಯ ಧ್ವನಿಯಾಗಿದ್ದ ರೇಡಿಯೋ ಜೊತೆ ರೆಟ್ರೋಸ್ಟೈಲ್​ನಲ್ಲಿ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ನಗುವ ನಯನ… ಎನ್ನುವ ಹಾಡಿನ ಹಿನ್ನೆಲೆಯಲ್ಲಿ ಈ ಫೋಟೋಶೂಟ್​ ನಡೆದಿದೆ.

ರೇಡಿಯೋ ಹಿಡಿದುಕೊಂಡು ಈ ಫೋಟೋಶೂಟ್​ ಅವರು ಮಾಡಿಸಿಕೊಂಡಿದ್ದು, ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಂದಹಾಗೆ ಜಾಹ್ನವಿ ಅವರು ಬಿಗ್​ಬಾಸ್​ನಲ್ಲಿ ಇದ್ದ ಸಂದರ್ಭದಲ್ಲಿ ಜಗಳದಿಂದಲೇ ಫೇಮಸ್​ ಆಗಿದ್ದರು. ಅವರು ಮನೆಯೊಳಕ್ಕೆ ಇದ್ದಾಗ, ಹೊರಗಡೆಯಲ್ಲಿ ಅವರ ಮಾಜಿ ಪತಿ ನೀಡ್ತಿದ್ದ ಹೇಳಿಕೆಯಿಂದಾಗಿ ಇವರಿಬ್ಬರ ಡಿವೋರ್ಸ್​ ವಿಷ್ಯ ವಿವಿಧ ರೂಪಗಳನ್ನು ಪಡೆದಿತ್ತು. ಇದೀಗ ಜಾಹ್ನವಿ ಅವರು ತಮಗೆ 2ನೇ ಮದುವೆಯ ಯೋಚನೆಯೇ ಇಲ್ಲ, ಮಗನೇ ಎಲ್ಲಾ ಎಂದು ಹೇಳಿದ್ದಾರೆ.

ಇದರ ಹೊರತಾಗಿಯೂ ಅವರು ಡ್ರೆಸ್​​ ಸೆನ್ಸ್​ಗೆ ಸಕತ್​ ಫೇಮಸ್​ ಆಗಿದ್ದಾರೆ. ಮನೆಯಲ್ಲಿದ್ದ ಅವಧಿಯಲ್ಲಿ ತಮ್ಮ ಡ್ರೆಸ್ ಹಾಗೂ ಮೇಕಪ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಬಿಗ್ ಬಾಸ್ ಸಂಭಾವನೆಗಿಂತ ಬಟ್ಟೆಗೆ ಮಾಡಿರೋ ಖರ್ಚು ಹೆಚ್ಚಾಗಿದೆ ಎಂದು ಜಾನ್ವಿ ಅವರು ಹೇಳಿದ್ದಾರೆ.

Source link

Leave a Reply

Your email address will not be published. Required fields are marked *