ಬೆಂಗಳೂರು, ಜನವರಿ 2: ಕರ್ನಾಟಕದಲ್ಲಿ ಶೇಕಡ 83.61ರಷ್ಟು ಮತದಾರರು ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಬಗ್ಗೆ ವಿಶ್ವಾಸಾರ್ಹತೆ ಹೊಂದಿರುವುದನ್ನು ತಿಳಿಸಿರುವುದು ಸಮೀಕ್ಷೆಯಿಂದ ತಿಳಿದು ಬಂದಿದೆ. ವಿಶೇಷವೆಂದರೆ, ಇವಿಎಂ ಬಗ್ಗೆ ಸದಾ ತಕರಾರು ತೆಗೆಯುತ್ತಿರುವ ಕರ್ನಾಟಕದ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ (ಪ್ರಿಯಾಂಕ್ ಖರ್ಗೆ) ತವರು ಜಿಲ್ಲೆ ಕಲಬುರಗಿಯಲ್ಲಿ (ಕಲಬುರಗಿ) ಅತಿ ಹೆಚ್ಚು ಮತದಾರರು ಇವಿಎಂ ಬಗ್ಗೆ ವಿಶ್ವಾಸವಿದೆ. ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಅಧೀನದಲ್ಲಿ ಕರ್ನಾಟಕ ಮಾನಿಟರಿಂಗ್ ಆಯಂಡ್ ಎವ್ಯಾಲ್ಯೂಯೇಶನ್ ಅಥಾರಿಟಿ ವಿದ್ಯುನ್ಮಾನ ಮತ ಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ಸಮೀಕ್ಷೆ ನಡೆಸಿದೆ.
ಕರ್ನಾಟಕದಲ್ಲಿ ಒಟ್ಟು ಶೇಕಡ 83.61ರಷ್ಟು ಮತದಾರರು ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವುದು ಅಧ್ಯಯನದಿಂದ ಪ್ರದರ್ಶನಗೊಂಡಿದೆ. ಕಲಬುರಗಿಯಲ್ಲಿ ಶೇಕಡ 94.8ರಷ್ಟು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಶೇಕಡ 88.59ರಷ್ಟು ಮತದಾರರು ಇವಿಎಂ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮತಯಂತ್ರಗಳ ನಿಖರತೆಯ ಕುರಿತು ಧನಾತ್ಮಕ ಪ್ರತಿಕ್ರಿಯೆ. 2025ರ ಆಗಸ್ಟ್‌ನಲ್ಲಿ ಸಮೀಕ್ಷಾ ವರದಿಯನ್ನು ಸಲ್ಲಿಸಲಾಗಿದೆ.
ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ಏನು?
ಐವಿಎಂ ಕುರಿತು ನಡೆಸಿದ ಸಮೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆಯೇ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ. ಸಮೀಕ್ಷೆ ನಡೆಸಿದ ಏಜೆನ್ಸಿ ಬಗ್ಗೆ ಪ್ರಸ್ತಾಪ ಮಾಡಿರುವ ಅವರು, ರಾಜ್ಯ ಸರ್ಕಾರವು ಆ ಸಮೀಕ್ಷೆಯನ್ನು ಅನುಮೋದಿಸಿಲ್ಲ. ‘ಮೊದಲನೆಯದಾಗಿ ಅದು ರಾಜ್ಯ ಸರ್ಕಾರ ಮಾಡಿದ ಸಮೀಕ್ಷೆಯೇ ಅಲ್ಲ. ಚುನಾವಣಾ ಆಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು. ಸಮೀಕ್ಷೆಗಾಗಿ ಬಾಲಕೃಷ್ಣನ್ ಅಥವಾ ಬಾಲಸುಬ್ರಮಣಿಯನ್ ನಡೆಸುತ್ತಿರುವ ಎನ್ಜಿಒದ ಸಹಾಯವನ್ನು ಕೋರಲಾಗಿದೆ. ನನಗಿರುವ ಮಾಹಿತಿ ತಪ್ಪಲ್ಲವೆಂದಾದರೆ, ಬಾಲಕೃಷ್ಣನ್ ಅವರು ಪ್ರಧಾನ ಅವರಿಗಾಗಿ ಬರೆದ ಪುಸ್ತಕದ ಲೇಖಕರು ಮತ್ತು ಪ್ರಧಾನ ಮಂತ್ರಿ ಕಚೇರಿಯಲ್ಲಿ ಬಹಳ ನಿಕಟವಾಗಿ ಕೆಲಸ ಮಾಡುತ್ತಾರೆ. ಅಂಥವರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ’ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ
ವೋಟ್ ಚೋರಿ ಆರೋಪ ಮಾಡುತ್ತಿರುವ ಮತ್ತು ಸದಾ ಇವಿಎಂ ಬಗ್ಗೆ ಪ್ರಶ್ನಿಸುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಕರ್ನಾಟಕದಲ್ಲಿ ನಡೆಸಿದ ಸಮೀಕ್ಷಾ ವರದಿಯನ್ನು ಮುಂದಿಟ್ಟುಕೊಂಡು ಬಿಜೆಪಿ ತಿರುಗೇಟು ನೀಡಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಾಗ ಪ್ರತಿ ಬಾರಿ ರಾಹುಲ್ ಗಾಂಧಿ ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸುತ್ತಾರೆ. ಹಾಗೆ ಮಾಡಿದರೆ ಅವರ ಆರೋಪಗಳು ಸುಳ್ಳೆಂಬುದಕ್ಕೆ ಪುರಾವೆಗಳು ಸಿಗುತ್ತವೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಹೇಳಿದ್ದಾರೆ.
ಇದನ್ನೂ ಓದಿ: ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್: ಸರ್ಕಾರದ ನಡೆ ಬಗ್ಗೆ ರಾಜ್ಯ ಚುನಾವಣಾ ಆಯುಕ್ತರು ಹೇಳಿದ್ದೇನು?
ಕರ್ನಾಟಕದಲ್ಲಿ ಜನರು ಇವಿಎಂಗಳನ್ನು ಸುರಕ್ಷಿತವೆಂದು ಪರಿಗಣಿಸುತ್ತಾರೆ ಮತ್ತು ಅವರು ನಂಬುತ್ತಾರೆ ಎಂದು ಸಮೀಕ್ಷೆಯಿಂದ ಬಹಿರಂಗವಾಗಿದೆ. ರಾಹುಲ್ ಗಾಂಧಿ ಪ್ರತಿ ಬಾರಿ ಇವಿಎಂಗಳನ್ನು ಅಥವಾ ವ್ಯವಸ್ಥೆ ದೂಷಿಸಿದಾಗ ಅವರಿಗೆ ವಾಸ್ತವದ ಅರಿವು ಮೂಡಿಸುವಂಥ ವಿದ್ಯಮಾನಗಳು ನಡೆಯುತ್ತಿವೆ ಎಂದು ಶೆಹಜಾದ್ ಪೂನವಾಲ ಹೇಳಿದ್ದಾರೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ