Headlines

ಅದ್ದೂರಿ 'ಗೃಹ ಪ್ರವೇಶ' ಮಾಡಿಕೊಂಡ ತರುಣ್ -ಸೋನಲ್ ಜೋಡಿ; ಹಾಲ್‌ನಲ್ಲಿ 'ವಿಶೇಷ ವ್ಯಕ್ತಿ'ಯೊಬ್ಬರಿಗೆ ಪೂಜೆ!

ಅದ್ದೂರಿ 'ಗೃಹ ಪ್ರವೇಶ' ಮಾಡಿಕೊಂಡ ತರುಣ್ -ಸೋನಲ್ ಜೋಡಿ; ಹಾಲ್‌ನಲ್ಲಿ 'ವಿಶೇಷ ವ್ಯಕ್ತಿ'ಯೊಬ್ಬರಿಗೆ ಪೂಜೆ!

ಅದ್ದೂರಿ 'ಗೃಹ ಪ್ರವೇಶ' ಮಾಡಿಕೊಂಡ ತರುಣ್ -ಸೋನಲ್ ಜೋಡಿ; ಹಾಲ್‌ನಲ್ಲಿ 'ವಿಶೇಷ ವ್ಯಕ್ತಿ'ಯೊಬ್ಬರಿಗೆ ಪೂಜೆ!

ಇತ್ತೀಚೆಗೆ, ಸ್ಯಾಂಡಲ್‌ವುಡ್‌ನ ಆಕರ್ಷಕ ಜೋಡಿ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್‌ ಮೊಂಥೆರೋ ಜೋಡಿ ಅಪಾರ್ಟ್‌ಮೆಂಟ್‌ ಮನೆಯ ಗೃಹ ಪ್ರವೇಶವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಅಲ್ಲಿ ಏನೆಲ್ಲಾ ಇದೆ ನೋಡಿ..

ಸೋನಲ್ ಮೊಂತೆರೋ ಹಾಗೂ ತರುಣ್ ಸುಧೀರ್ ಅವರು ಹೊಸ ಮನೆಗೆ ಪ್ರವೇಶಿಸಿದ್ದಾರೆ. ಅಪಾರ್ಟ್‌ಮೆಂಟ್ ಒಂದರಲ್ಲಿ ಮನೆಯನ್ನು ಖರೀದಿಸಿದೆ ಸ್ಯಾಂಡಲ್‌ವುಡ್‌ನ ಈ ವೈರಲ್ ಜೋಡಿ.

ಸೋನಲ್ ಮಂಥೆರೋ ಹಾಗೂ ತರುಣ್ ಸುಧೀರ್ ಜೋಡಿಯ ನೂತನ ಗೃಹ ಪ್ರವೇಶದಲ್ಲಿ ತೆಗೆದ ಫೋಟೋಗಳು ಇದೀಗ ವೈರಲ್ ಆಗಿವೆ. ಇಡೀ ಮನೆಯೂ ತುಂಬಾನೇ ಸುಂದರವಾಗಿದೆ.

ತರುಣ್ ಸುಧಿರ್ ಹಾಗೂ ಸೋನಲ್ ಗೃಹ ಪ್ರವೇಶದ ಫೋಟೋಗಳು ಭಾರೀ ಗಮನ ಸೆಳೆಯುತ್ತಿವೆ. ಈ ಜೋಡಿ ಗ್ರಾಂಡ್‌ ಆಗಿ ಪೂಜೆ ಮಾಡುವ ಮೂಲಕ ತಮ್ಮ ಹೊಸ ಮನೆಯನ್ನು ಪ್ರವೇಶ ಮಾಡಿದ್ದಾರೆ.

ಸೋನಲ್-ತರುಣ್ ಇಡೀ ಮನೆಯಲ್ಲಿ ಒಬ್ಬರ ಫೋಟೋ ಹೈಲೈಟ್ ಆಗಿದೆ. ಅದುವೇ ತರುಣ್ ತಂದೆ ಸುಧೀರ್. ಅವರ ಫೋಟೋವನ್ನು ಮನೆಯ ಹಾಲ್‌ನಲ್ಲಿ ದೊಡ್ಡದಾಗಿ ಹಾಕಲಾಗಿದೆ. ಈ ಫೋಟೋಗೆ ದಂಪತಿ ಪೂಜೆ ಮಾಡಿದ್ದಾರೆ.

ಇದೀಗ ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ತರುಣ್ ಅವರಿಗೆ ತಂದೆಯ ಮೇಲೆ ಅಪಾರ ಪ್ರೀತಿ. ಸುಧೀರ್ ಅವರು ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ವಿಲನ್ ಆಗಿ ಮಿಂಚಿದ್ದರು.

ಇದೀಗ, ಸ್ಯಾಂಡಲ್‌ವುಡ್ ನಟ ಹಾಗೂ ತಮ್ಮ ತಂದೆ ಸುಧೀರ್ ಫೋಟೋವನ್ನು ಮಗ ತರುಣ್ ಅವರು ಮನೆಯಲ್ಲಿ ದೊಡ್ಡದಾಗಿ ಹಾಕಿಕೊಂಡಿದ್ದಾರೆ.

ಮನೆ ಪ್ರವೇಶದ ವೇಳೆ ಹಲವು ಪೂಜಾ ವಿಧಿ ವಿಧಾನಗಳನ್ನು ಸೋನಲ್ ಹಾಗೂ ತರುಣ್ ಅವರು ಮಾಡಿದ್ದಾರೆ.

ಈ ಸಂದರ್ಭದ ವಿಡಿಯೋವನ್ನು ಸೋನಲ್ ಹಂಚಿಕೊಂಡಿದ್ದಾರೆ. ಹಲವು ಸೆಲೆಬ್ರಿಟಿಗಳು ಸೋನಲ್-ತರುಣ್ ಗೃಹಪ್ರವೇಶಕ್ಕೆ ಆಗಮಿಸಿ ದಂಪತಿಗೆ ಶುಭಕೋರಿದ್ದಾರೆ.

ನಟಿ ಸೋನಲ್ ಮಂಥೆರೋ ಅವರು ಮೂಲತಃ ದಕ್ಷಿಣ ಕನ್ನ ಜಿಲ್ಲೆಯವರಾಗಿದ್ದು, ಹಲವು ಕನ್ನಡ ಸಿನಿಮಾಗಳಲ್ಲಿ ಮಿಂಚಿದ್ದಾರೆ.

ಇನ್ನು, ತರಣ್ ಸುಧೀರ್ ಅವರು ‘ಚೌಕ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಸ್ಯಾಂಡಲ್‌ವುಡ್ ಭರವಸೆಯ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ ಈ ತರುಣ್ ಸುಧೀರ್.

ತರುಣ್ ಸುಧೀರ್ ಅವರು ತಮ್ಮ ಹೊಸ ಮನೆಯಲ್ಲಿ ಪ್ರೀತಿಯ ತಂದೆ ಸುಧೀರ್ ಅವರಿಗೆ ಬಹುಮುಖ್ಯವಾದ ಸ್ಥಾನ ಕೊಟ್ಟು ಅದನ್ನು ಮನೆಯ ಹಾಲ್‌ನಲ್ಲಿ ಹಾಕಿಕೊಂಡಿದ್ದಾರೆ. ಈ ಮೂಲಕ ಅವರು  ನಿಮ್ಮ ಮನೆಯ ಸದಸ್ಯರಿಗೆ, ಇದ್ದವರಿಗೂ ನಿಧನರಾದವರಿಗೂ ಗೌರವ ಕೊಡಿ ಎಂಬ ಸಂದೇಶ ನೀಡಿದ್ದಾರೆ ಎನ್ನಬಹುದು.

ತರುಣ್ ಸುಧೀರ್ ಹಾಗೂ ಸೋನಲ್ ಜೋಡಿ ಬಿಳಿ ಹಾಗೂ ಕೆನೆ ಬಣ್ಣದ ಮಿಕ್ಸ್ಡ್‌ ಕಲರ್ ಡ್ರೆಸ್ ಹಾಕಿಕೊಂಡು ತಮ್ಮ ಮನೆಯ ಗೃಹಪ್ರವೇಶದ ವೇಳೆ ಸಖತ್ತಾಗಿ ಮಿಂಚಿದ್ದಾರೆ.

ಮನೆಯ ಗೋಡೆಯ ಬಣ್ಣಕ್ಕೆ ಮ್ಯಾಚ್ ಆಗುವಂತೆ ಸೋನಲ್-ತರುಣ್ ಜೊಡಿ ತಮ್ಮ ಡ್ರೆಸ್ ಕೂಡ ಮ್ಯಾಚ್ ಮಾಡಿಕೊಂಡಿದ್ದಾರೆ ಎಂದು ಹಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ.

Source link

Leave a Reply

Your email address will not be published. Required fields are marked *