ವೃದ್ಧಾಶ್ರಮ ಸೇರಿದ್ದ ವ್ಯಕ್ತಿಯನ್ನ ಮರಳಿ ಕುಟುಂಬಕ್ಕೆ ಸೇರಿಸಿದ ಇನ್ಸ್ಟಾಗ್ರಾಮ್​​ ಪೋಸ್ಟ್​​!

ವೃದ್ಧಾಶ್ರಮ ಸೇರಿದ್ದ ವ್ಯಕ್ತಿಯನ್ನ ಮರಳಿ ಕುಟುಂಬಕ್ಕೆ ಸೇರಿಸಿದ ಇನ್ಸ್ಟಾಗ್ರಾಮ್​​ ಪೋಸ್ಟ್​​!


ಚಾಮರಾಜನಗರ, ಜನವರಿ 02: ಇತ್ತೀಚೆಗೆ ಸೈಬರ್ ಬೆದರಿಕೆ, ನಕಲಿ ಸುದ್ದಿ ಹರಡುವಿಕೆ ಪ್ರಕರಣಗಳಿಂದಲೇ ಸುದ್ದಿಯಾಗುತ್ತಿದೆ ಸಾಮಾಜಿಕ ಜಾಲತಾಣವೇ ವೃದ್ಧರೋರ್ವರ ಪಾಲಿಗೆ ಬದುಕಿನ ಆಶಾಕಿರಣವೆಂಬಂತೆ ಸಹಾಯ ಮಾಡಿದೆ. ದೂರದ ಮಧ್ಯಪ್ರದೇಶದಿಂದ ಕೆಲಸಕ್ಕಾಗಿ ಚಾಮರಾಜನಗರಕ್ಕೆ ಬಂದಿದ್ದ ವ್ಯಕ್ತಿ ಅಚಾನಕ್ಕಾಗಿ ಜೊತೆಗಾರರ ​​ಸಂಪರ್ಕ ಕಳೆದುಕೊಂಡಿದ್ದರು. ಭಾಷೆ ಬರದೆ, ವಿಳಾಸ ಗೊತ್ತಿರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಇವರನ್ನ ಇನ್ಸ್ಟಾಗ್ರಾಮ್ ನಒಂದೇ ಒಂದು ಪೋಸ್ಟ್ ಮರಳಿ ಮನೆಗೆ ಸೇರಿಸಿದೆ.

ಹೌದು, ಕೆಲಸ ಹುಡುಕಿಕೊಂಡು ಉತ್ತರ ಭಾರತದ ರಾಜ್ಯಗಳ ಜನರು ಕರ್ನಾಟಕಕ್ಕೆ ಬರೋದು ಇತ್ತೀಚೆಗೆ ಮಾಮೂಲು. ಅದರಂತೆಯೇ ಚಾಮರಾಜನಗರ ಜಿಲ್ಲೆಯ ಯಳಂದೂರಿಗೆ ಮಧ್ಯಪ್ರದೇಶದಿಂದ ಕೆಲ ಕುಟುಂಬಗಳು ಬಂದಿದ್ದವು. ಇವರ ಜೊತೆಗೆ ಪ್ರೀತಂ ಸಿಂಗ್ ಎಂಬ 60 ವರ್ಷದ ವೃದ್ಧ ವ್ಯಕ್ತಿ ಕೂಡ ಬಂದಿದ್ದರು. ಈ ನಡುವೆ ಅದೇಗೋ ಅಚಾನಕ್ಕಾಗಿ ಪ್ರೀತಂ ಅವರಿಗೆ ಗ್ರಾಮದವರ ಸಂಪರ್ಕ ಕಡಿತವಾಗಿದೆ. ಮನೆಯವರ ಫೋನ್ ನಂಬರ್ ಕೂಡ ಇಲ್ಲದೆ, ವಿಳಾಸ ತಿಳಿಯದೆ, ಕನಿಷ್ಠ ಸ್ಥಳೀಯ ಭಾಷೆಯೂ ಬರದೆ ಪ್ರೀತಂ ಸಿಂಗ್ ಪರದಾಟ ನಡೆಸುತ್ತಿದ್ದರು. ಹೀಗಾಗಿ ಇವರನ್ನು ಯಳಂದೂರು ಪೊಲೀಸರು ಸಂತೇಮರಹಳ್ಳಿಯ ಜ್ಞಾನ ಸಿಂಧು ವೃದ್ಧಾಶ್ರಮಕ್ಕೆ ಸೇರಿಸಿದ್ದರು.

ಇದನ್ನೂ ಓದಿ: ಕನ್ಯಾಕುಮಾರಿ ಟು ಕಾಶ್ಮೀರಕ್ಕೆ ಯುವತಿಯ ಬೈಕ್ ರೈಡ್! ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸದಿರಲು ಮನವಿ

ಆ ಬೆನ್ನಲ್ಲೇ ಪ್ರೀತಂ ಸಿಂಗ್ ಕುಟುಂಬದ ಪತ್ತೆಗೆ ಪ್ರಯತ್ನ ಆರಂಭಿಸಿದ್ದು, ವೃದ್ಧಾಶ್ರಮದ ಸಿಬ್ಬಂದಿ ಇನ್ಸ್ಟಾಗ್ರಾಮ್ನ ಹಲವು ಗ್ರೂಪ್ಗಳಿಗೆ ಇವರ ಬಗ್ಗೆ ವಿಡಿಯೋ ಹಾಕಿದ್ದರು. ಅದರಂತೆ ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯ ಗ್ರೂಪ್ ಒಂದಕ್ಕೂ ಅದನ್ನು ಶೇರ್ ಮಾಡಲಾಗಿತ್ತು. ಈ ವಿಡಿಯೋ ಪ್ರೀತಂ ಸಿಂಗ್ ಅವರ ಕುಟುಂಬಸ್ಥರಿಗೂ ತಲುಪಿದ್ದು, ವೃದ್ಧಾಶ್ರಮದಲ್ಲಿ ತಂದೆ ಇರುವಿಕೆ ಗೊತ್ತಾಗಿ ಅವರ ಪುತ್ರ ರಾಜೇಶ್ ಸಿಂಗ್ ಚಾಮರಾಜನಗರಕ್ಕೆ ಬಂದಿದ್ದಾರೆ. ಆ ಮೂಲಕ ಬರೋಬ್ಬರಿ ಒಂದೂವರೆ ತಿಂಗಳ ನಂತರ ವೃದ್ಧ ಮತ್ತೆ ಕುಟುಂಬ ಸೇರಲು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *