Bengaluru Power Cut: ಬೆಂಗಳೂರಿನಲ್ಲಿ 17 ದಿನ ವಿದ್ಯುತ್ ವ್ಯತ್ಯಯ; ಯಾವಾಗ ಮತ್ತು ಎಲ್ಲೆಲ್ಲಿ?

Bengaluru Power Cut: ಬೆಂಗಳೂರಿನಲ್ಲಿ 17 ದಿನ ವಿದ್ಯುತ್ ವ್ಯತ್ಯಯ; ಯಾವಾಗ ಮತ್ತು ಎಲ್ಲೆಲ್ಲಿ?


ಬೆಂಗಳೂರು, ಜನವರಿ 02: 220/66/11 ಕೆ.ವಿ ಐಪಿಐಪಿ ಸ್ಟೇಷನ್‌ನಲ್ಲಿ 31.5 ಎಂವಿಎ ಶಕ್ತಿ ಪರಿವರ್ತಕ 3ರ ರಿಟ್ರೋಫಿಲಿಂಗ್ ನಿರ್ವಹಣಾ ಕೆಲಸ ಬೆಂಗಳೂರಿನ ಹಿನ್ನೆಲೆ ಹಲವು ಪ್ರದೇಶಗಳಲ್ಲಿ 17 ದಿನ ವಿದ್ಯುತ್ ವ್ಯತ್ಯಯ (ವಿದ್ಯುತ್ ಕಡಿತ) ಉಂಟಾಗಲಿದೆ. ಜನವರಿ 03 ರಿಂದ ಜನವರಿ 19 ರ ವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ರ ವರೆಗೆ ವಿದ್ಯುತ್ ವ್ಯತ್ಯಯ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಹೆಚ್ಚಿನ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಎಲ್ ಆ್ಯಂಡ್ ಟಿ, ಆರ್ ಎಂಸೆಡ್ ನೆಕ್ಸ್ಟ್, ರಾಗಿಹಳ್ಳಿ, ಸಿದ್ದಾಪುರ ಗೇಟ್, ಐಪಿಐಪಿ ಲೇಔಟ್, ಟಿಎಸ್‌ಎಸ್ ಸಾಫ್ಟ್‌ವೇರ್, ಎಸ್‌ಜೆಆರ್ ಟೆಕ್ಪಾರ್ಕ್, ಎಂ.ಎಸ್.ವಿಎಸ್‌ಎನ್‌ಎಲ್ ಫೀಡರ್, ರಿಲಯನ್ಸ್ (ಬಿಗ್ ಬಜಾರ್), ಒರಿಯಂಟಲ್ ಗೋಸ್ಟಾರ್, ಏರ್‌ಪಾಟ್ ಎಂಟರ್‌ಟೆಲ್, ಬುಷ್‌ಬಜಾರ್ ಟೆಕ್ಪಾರ್ಕ್, ಕ್ವಾಲ್ಕಾಮ್, ಕ್ವಾಲ್ಕಾಮ್-2, ಜಿಐ ಬಿಐ ಕಂಪನಿ, ಬಾಗ್ಮನೆ ನೀಯಾನ್ ಬ್ಲಾಕ್, ಇಪಿಐಪಿ ಇಂಡಸ್ಟ್ರಿಯಲ್ ಏರಿಯಾ ಸುತ್ತಮುತ್ತಲಿನ ವಿದ್ಯುತ್ ವ್ಯತ್ಯಯ ಉಂಟಾಗಿದೆ ಎಂದು ಬೆಸ್ಕಾಂ ವರದಿಯಲ್ಲಿದೆ.

ಇದನ್ನೂ ಓದಿ: ವೈರಲ್: ಪವರ್ ಕಟ್ ನೆಪ ಹೇಳಿ ಕಚೇರಿ ಕೆಲಸದಿಂದ ತಪ್ಪಿಸಿಕೊಂಡ ಉದ್ಯೋಗಿಯನ್ನು ತರಾಟೆಗೆ ತೆಗೆದುಕೊಂಡ ಮ್ಯಾನೇಜರ್

ಸುಮಾರು 17 ದಿನ ವಿದ್ಯುತ್ ವ್ಯತ್ಯಯ ವಿದ್ಯುತ್ ಬಾಧಿತ ಪ್ರದೇಶದ ನಿವಾಸಿಗಳು, ಕಚೇರಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಜೊತೆಗೆ ವರ್ಕ್ ಫ್ರಮ್ ಹೋಮ್ ಮಾಡುವವರು, ಸಣ್ಣ ವ್ಯವಹಾರ ಸೇರಿದಂತೆ ವಿದ್ಯುತ್ ಉಪಕರಣಗಳನ್ನು ಅವಲಂಬಿಸಿರುವ ಜನರು ಮುಂಜಾಗ್ರತವಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಅಥವಾ ಅವರ ದಿನವನ್ನು ಅದಕ್ಕೆ ಅನುಗುಣವಾಗಿ ಯೋಜಿಸಲು ಬಯಸುತ್ತಾರೆ.

ಬೆಂಗಳೂರಿನಲ್ಲಿ ಇಂದು ವಿದ್ಯುತ್ ಕಡಿತ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನಿರ್ವಹಣೆ ಮತ್ತು ನವೀಕರಣ ಕಾರ್ಯಗಳನ್ನು ನಿರ್ವಹಿಸುತ್ತದೆ ಇಂದು ಅಂದರೆ 2 ರಂದು ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಎಂದು ಬೆಸ್ಕಾಂ ಜನವರಿ.

ಕೋಡಿಹಳ್ಳಿ, ಮಂಜುನಾಥ ನಗರ, ಕಲ್ಕೆರೆ, ಇರಲಗೆರೆ, ಶಾಂತನಹಳ್ಳಿ, ಕೋಟನಾಯಕನಹಳ್ಳಿ, ವಾಟರ್ಸಪ್ಪೆ, ರಾಮೇನಹಳ್ಳಿ, ಆಚಾರ್ಪಾಳ್ಯ, ಬಂಡಿಹಳ್ಳಿ, ಗಾಂಧಿನಗರ, ಆದಿನಾಯಕನಹಳ್ಳಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

ಇದನ್ನೂ ಓದಿ: ಫುಟ್ಪಾತ್ ಮೇಲೆಯೇ ಟ್ರಾನ್ಸ್ಫಾರ್ಮರ್ಗಳ ಸ್ಥಾಪನೆ; ಜನರ ಜೀವದ ಜೊತೆ ಆಟ ಆಡುತ್ತಿದೆಯಾ ಬೆಸ್ಕಾಂ?

ತುರ್ತು ನಿರ್ವಹಣಾ ಕಾರ್ಯ ಪೂರ್ಣಗೊಳ್ಳುವವರೆಗೆ ಅಂದರೆ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ಕಡಿತ. ಒಂದೇ ವೇಳೆ ಕೆಲಸವು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಮುಗಿದರೆ ವಿದ್ಯುತ್ ಸರಬರಾಜು ಮೊದಲೇ ಮುಂಚಿತವಾಗಿ ಸ್ಥಾಪನೆಯಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *