Savings Tips : ಪ್ರತಿ ಜೋಡಿಗಳ ಟೆನ್ಶನ್ ಅಂದ್ರೆ ಉಳಿತಾಯ ಹೇಗೆ ಮಾಡೋದು ಎಂದು. ಈ ವರ್ಷ ನೀವು ಸಂಗಾತಿ ಜೊತೆ ಸೇರಿ ಸರಿಯಾಗಿ ಹಣ ಉಳಿತಾಯ ಮಾಡಬೇಕು ಅಂದ್ರೆ ನೀವು ಇಲ್ಲಿ ಹೇಳಿರುವ ಟಿಪ್ಸ್ ಫಾಲೋ ಮಾಡಿದ್ರೆ ಸಾಕು. ವರ್ಷ ಪೂರ್ತಿ ನಿಮಗೆ ಬೇಕಾದ್ದನ್ನು ಮಾಡಿ ಆರಾಮವಾಗಿರಬಹುದು.

ನಿಮ್ಮಿಬ್ಬರ ಜಂಟಿ ಆದಾಯದಲ್ಲಿ ಸಾಧ್ಯವಾದಷ್ಟು 20% ಉಳಿತಾಯ ಮಾಡಲು ಪ್ರಯತ್ನಿಸಿ.

ನೀವಿಬ್ಬರು ತಿಂಗಳಿಗೆ ಜೊತೆಯಾಗಿ 1 ಲಕ್ಷ ದುಡಿಯುತ್ತಿದ್ದರೆ, 20 ಸಾವಿರ ರೂಪಾಯಿ ಉಳಿತಾಯ ಮಾಡಿ.

ನೀವಿಬ್ಬರು ತಿಂಗಳಿಗೆ ಜೊತೆಯಾಗಿ 50 ಸಾವಿರ ದುಡಿಯುತ್ತಿದ್ದರೆ, 10 ಸಾವಿರ ರೂಪಾಯಿ ಉಳಿತಾಯ ಮಾಡಿ.

ಇದು ಸಿಂಪಲ್ ಮತ್ತು ಕ್ಲಿಯರ್ ಆಗಿರುವ ಐಡಿಯಾ

ಪ್ರತಿಯೊಬ್ಬರೂ ಸಾಲದಲ್ಲೇ ಬದುಕುತ್ತಿದ್ದಾರೆ. ಹಾಗಾಗಿ ಪ್ರತಿತಿಂಗಳು EMI ಕಟ್ಟಬೇಕಾಗಿ ಬರುತ್ತದೆ. ಈ ಸಂದರ್ಭದಲ್ಲಿ ಏನು ಮಾಡೋದು?

ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಅಂದರೆ ಕಾರು, ಮನೆ, ಲೋನ್ ತೆಗೆದುಕೊಳ್ಳುವ ಮುನ್ನ ನಿಮ್ಮ EMIಯು ನಿಮ್ಮ ಜಂಟಿ ಆದಾಯದ 25% -30% ದಾಟದಂತೆ ನೋಡಿಕೊಳ್ಳಿ.

ಇದರಿಂದ ಹಣದ ಹರಿವು ಇರುತ್ತದೆ ಜೊತೆಗೆ ಒತ್ತಡ ರಹಿತ ಜೀವನ ನಿಮ್ಮದಾಗುತ್ತದೆ.

6 ತಿಂಗಳ ಒಟ್ಟು ಮನೆಯ ಖರ್ಚುಗಳು (ಬಾಡಿಗೆ + EMI + ಅಡುಗೆ ಸಾಮಾಗ್ರಿಗಳು+ಇತರ ವಸ್ತುಗಳು)

ನಿಮ್ಮ ಒಟ್ಟು ಖರ್ಚು = 60,000 ಆಗಿದ್ರೆ

ಎಮರ್ಜೆನ್ಸಿ ಫಂಡ್ ಟಾರ್ಗೆಟ್ = -3, 60,000 ಆಗಿರಬೇಕು.

ನಿಮ್ಮಿಬ್ಬರ ಜಂಟಿ ಆದಾಯ = 1,20,000

20% ಉಳಿತಾಯ = ತಿಂಗಳಿಗೆ 24, 000

ತಿಂಗಳ EMI =30,000 ರಿಂದ 35, 000 ದಾಟಬಾರದು

ಬೇಕಾಗಿರುವ ಎಮರ್ಜೆನ್ಸಿ ಫಂಡ್ = 3,60,000

ಸೇವಿಂಗ್ಸ್ ಈ ರೀತಿ ವಿಭಾಗಿಸಿ

SIP’s: 40%

ಎಮರ್ಜೆನ್ಸಿ ಫಂಡ್ : 30%

ಇನ್ಶುರೆನ್ಸ್ ಪ್ರೀಮಿಯಂ : 20%

ಟ್ರಾವೆಲ್/ಗುರಿ/ಫಂಡ್ : 10%

ಯಾವ ಜೋಡಿ ಜೊತೆಯಾಗಿ ಹಣದ ಪ್ಲ್ಯಾನ್ ಮಾಡುತ್ತಾರೆಯೋ? ಅವರ ಭವಿಷ್ಯ ಸ್ಟ್ರೆಸ್ ಫ್ರೀ ಆಗಿರುತ್ತದೆ. ನೀವು ಕೂಡ ಇದನ್ನು ಫಾಲೋ ಮಾಡಿದ್ರೆ, ಹಣದ ಸಮಸ್ಯೆ ಬರೋದಿಲ್ಲ.

Source link
Savings Tips : ಕಪಲ್ಸ್ ಪ್ರತಿ ತಿಂಗಳು ಈ ರೀತಿ ಉಳಿತಾಯ ಮಾಡಿದ್ರೆ… ತಲೆ ಬಿಸಿನೇ ಇರೋದಿಲ್ಲ