ಮಂಗಳೂರು, ಡಿ.2: ಕರ್ನಾಟಕ ಎಲ್ಲದರಲ್ಲೂ ಶ್ರೀಮಂತಿಕೆಯನ್ನು ಹೊಂದಿದೆ. ಸಂಸ್ಕೃತಿ, ಪರಂಪರೆ, ಆದಾಯದಲ್ಲಿ ಕೂಡ ಶ್ರೀಮಂತ ರಾಜ್ಯ, (ಕರ್ನಾಟಕದ ಶ್ರೀಮಂತ ದೇವಾಲಯಗಳು) ಈಗ ಕೂಡ ಕರ್ನಾಟಕ ಶ್ರೀಮಂತಿಕೆಯನ್ನು ಹೊಂದಿದೆ. ಶ್ರೀಮಂತರ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನವನ್ನು ಹೊಂದಿದೆ. ಧಾರ್ಮಿಕ ದತ್ತಿ ಅಡಿಯಲ್ಲಿ ಬರುವ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯದ ಅತ್ಯಂತ ಶ್ರೀಮಂತ ದೇವಾಲಯವಾಗಿದೆ. ಹಣಕಾಸು ದತ್ತಾಂಶದ ಪ್ರಕಾರ ಈ ವರದಿಯನ್ನು ಒದಗಿಸಲಾಗಿದೆ.
ಇನ್ನು ಈ ವರದಿ ಪ್ರಕಾರ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ, 2024–25ರಲ್ಲಿ 155 ಕೋಟಿ ರೂ. ತಲುಪಿದೆ. 2023–24ರಲ್ಲಿ ದೇವಾಲಯದ ಆದಾಯ 146 ಕೋಟಿ ರೂ. ಮತ್ತು 2022–23ರಲ್ಲಿ 123 ಕೋಟಿ ರೂ. ಇತ್ತು. ಈ ಬೆಳವಣಿಗೆಗೆ ಕಾರಣ, ಹೆಚ್ಚು ಭಕ್ತ ಸಮೂಹ ಇಲ್ಲಿಗೆ ಬರುತ್ತಿರುತ್ತದೆ. ಜೊತೆಗೆ ವಿಶೇಷ ಪೂಜೆಗಳನ್ನು ಮಾಡಿಸಿಕೊಳ್ಳುವುದು, ಜೊತೆಗೆ ಧಾರ್ಮಿಕ ಪ್ರವಾಸೋದ್ಯಮವಾಗಿ ಹೊಂದಿಕೊಂಡಿರುವುದು ಎಂದು ಹೇಳಲಾಗಿದೆ. ಇದರ ನಂತರದ ಸಾಲಿನಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನ ಇದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೋಗುವವರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ, ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ಸಿದ್ಧ
ಒಟ್ಟಾರೆಯಾಗಿ ರಾಜ್ಯದಲ್ಲಿ ದೇವಾಲಯದ ಆದಾಯಗಳು ಗಣನೀಯವಾಗಿ ಏರಿಕೆ ಕಂಡಿದೆ. ದತ್ತಿ ಇಲಾಖೆಯ ಪ್ರಕಾರ, ಕರ್ನಾಟಕವು 34,000 ಕ್ಕೂ ಹೆಚ್ಚು ದೇವಾಲಯಗಳನ್ನು ಹೊಂದಿದ್ದು, ಈ ಮೂರು ದೇವಾಲಯಗಳು ಇತರ ದೇವಾಲಯಗಳಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿವೆ. ಈ ದೇವಾಲಯಗಳನ್ನು ಎ ವರ್ಗ ಮತ್ತು ಬಿ ವರ್ಗ ಎಂದು ವಿಭಾಗ ಮಾಡಲಾಗಿದೆ. ಎ ವರ್ಗದಲ್ಲಿ ಒಟ್ಟು 205 ದೇವಾಲಯಗಳು ಬರುತ್ತವೆ. ಹಾಗೂ ಬಿ ವರ್ಗದಲ್ಲಿ 193 ದೇವಾಲಯಗಳು ಬರುತ್ತವೆ. ಆದಾಯ ಮತ್ತು ಅಭಿವೃದ್ಧಿ ಆಧಾರದ ಮೇಲೆ ಇದನ್ನು ವರ್ಗೀಕರಿಸಲಾಗಿದೆ.
ಈ ಎ, ಬಿ ವರ್ಗೀಕರಣದಲ್ಲೂ 10 ಟಾಪ್ ದೇವಾಲಯಗಳನ್ನು ಗುರುತಿಸಲಾಗಿದೆ. ಈ ಹತ್ತು ಟಾಪ್ ದೇವಾಲಯಗಳನ್ನು ಆದಾಯದ ಆಧಾರದ ಮೇಲೆ ಮಾಡಲಾಗಿದೆ. ಅಧಿಕಾರಿಗಳ ಪ್ರಕಾರ, ಉತ್ತಮ ಆಡಳಿತ ವ್ಯವಸ್ಥೆ ಮತ್ತು ಯಾತ್ರಿಕರ ಸಂಖ್ಯೆ ಈ ಆದಾಯ ವೃದ್ಧಿಗೆ ಪ್ರಮುಖ ಕಾರಣವಾಗಿದೆ.ಮುಂದಿನ ದಿನಗಳಲ್ಲಿ ದೇವಾಲಯಗಳ ನಿರ್ವಹಣೆ, ಪಾರಂಪರಿಕ ಸಂರಕ್ಷಣೆ, ಯಾತ್ರಿಕರ ಸೌಲಭ್ಯಗಳ ಅಭಿವೃದ್ಧಿ ಮತ್ತು ಸಮುದಾಯಮುಖಿ ಯೋಜನೆಗಳಿಗೆ ಹೆಚ್ಚಿನ ಹೂಡಿಕೆ ಮಾಡಲು ಸಾಧ್ಯವಿದೆ ಎಂದು ಹೇಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 5:16 pm, ಶುಕ್ರ, 2 ಜನವರಿ 26