ಸುನಿಲ್ ಶೆಟ್ಟಿ (ಸುನಿಲ್ ಶೆಟ್ಟಿ), ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಮಂಗಳೂರು ಮೂಲದವರಾದ ಸುನಿಲ್ ಶೆಟ್ಟಿ ಮೂಲದ ಬಾಲಿವುಡ್‌ನಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಅತ್ಯುತ್ತಮ ಚಿತ್ರಗಳಲ್ಲಿ ನಟಿಸಿರುವ ಸುನಿಲ್ ಶೆಟ್ಟಿ, ಬಾಲಿವುಡ್ ನಲ್ಲಿ ಬಾಡಿ ಬಿಲ್ಡಿಂಗ್ ಸಂಸ್ಕೃತಿ ಶುರುವಾಗಲು ಕಾರಣರಾದವರಲ್ಲಿ ಒಬ್ಬರು ಸಹ. ಸುನಿಲ್ ಶೆಟ್ಟಿ ಹಿಂದಿ ಸಿನಿಮಾಗಳಲ್ಲಿ ಮಾತ್ರ ಭಾರತದ ಜೊತೆಗೆ, ಕೆಲವಾರು ದಕ್ಷಿಣ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡಕ್ಕಂತೂ ಸುನಿಲ್ ಶೆಟ್ಟಿ ಹೊಸಬರೇನೂ ಅಲ್ಲ. ಸುದೀಪ್ ಜೊತೆಗೆ ‘ಪೈಲ್ವಾನ್’ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಅವರು ತಮ್ಮ ಮಾತೃಭಾಷೆಯಾದ ತುಳುವಿನಲ್ಲಿ ಸಿನಿಮಾ ಮಾಡಿದ್ದು, ವೇದಿಕೆಯೊಂದರಲ್ಲಿ ಈ ಬಗ್ಗೆ ಮಾತನಾಡಿದ್ದು, ಸಿನಿಮಾವನ್ನು ಕೊಂಡಾಡಿದ್ದಾರೆ.
ಹಲವು ಸೆಲೆಬ್ರಿಟಿಗಳು, ರಾಜಕಾರಣಿಗಳು, ತಜ್ಞರ ಸಂದರ್ಶನ ಮಾಡುವ, ಹಿಂದಿಯ ಸಂದರ್ಶನದ ಶೋ ಆಗಿರುವ ‘ಲಲ್ಲನ್ ಟಾಪ್’ನಲ್ಲಿ ಸುನಿಲ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಸುನಿಲ್ ಶೆಟ್ಟಿ, ತಾವು ನಟಿಸಿರುವ ತುಳು ಸಿನಿಮಾ ‘ಜೈ’ ಬಗ್ಗೆ ಹೆಮ್ಮೆಯಿಂದ ಮಾತನಾಡದೆ, ಸಿನಿಮಾ ಬಗ್ಗೆ ಕೊಂಡಾಡಿದ್ದಾರೆ.
‘ನಾನು ತುಳುನಾಡಿನವನು, ಮಂಗಳೂರು ನನ್ನ ಮೂಲವು. ನಾನು ಇತ್ತೀಚೆಗಷ್ಟೇ ಒಂದು ತುಳು ಸಿನಿಮಾದಲ್ಲಿ ನಟಿಸಿದೆ. ತುಳು ಸಿನಿಮಾಗಳಿಗೆ ಬಹಳ ಕಡಿಮೆ ವೀಕ್ಷಕರು ಇದ್ದಾರೆ. ಆ ಚಿತ್ರರಂಗಕ್ಕೆ ಬೆಂಬಲ ನೀಡಲೆಂದು ನಾನು ತುಳು ಸಿನಿಮಾದಲ್ಲಿ ನಟಿಸಿದೆ. ಸಿನಿಮಾದ ಹೆಸರು ‘ಜೈ’ ಎಂದು. ಸಿನಿಮಾ ಬಹಳ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ನನ್ನ ನಟನೆಗೆ ಬಹಳ ಪ್ರಶಂಸೆಗಳು ಕಂಡುಬರುತ್ತಿವೆ. ಬಹುಷ ನನ್ನ ಮೊದಲ ಸಿನಿಮಾ ‘ಬಲವಾನ್’ನಲ್ಲಿ ನನಗೆ ಸಿಕ್ಕಂಥ ಪ್ರಶಂಸೆ ಈಗ ‘ಜೈ’ ಸಿನಿಮಾಕ್ಕಾಗಿ ಸಿಗುತ್ತಿದೆ’ ಎಂದು ಸುನಿಲ್ ಶೆಟ್ಟಿ.
ಇದನ್ನೂ ಓದಿ:ಸುನಿಲ್ ಶೆಟ್ಟಿ ಮಗನ ಬಗ್ಗೆ ಇಲ್ಲ ಸಲ್ಲದ ಸುದ್ದಿ; ಸಿಟ್ಟಾದ ನಟ
‘ಈಗ ಭಾಷೆಯ ಗಡಿ ಇಲ್ಲ. ಅದು ಹೊರಟು ಹೋಗಿದೆ, ಈಗ ಇರುವುದು ಏನಿದ್ದರೂ ಕಂಟೆಂಟ್ ನ ಗಡಿ. ನಿಮ್ಮಲ್ಲಿ ಒಳ್ಳೆಯ ಕಂಟೆಂಟ್ ಇದ್ದರೆ ಅದಕ್ಕೆ ಅಡ್ಡಿಯಾಗುವುದಿಲ್ಲ, ಯಾವುದೇ ಭಾಷೆಯಾದರೂ ಕಾಂಟೆಂಟ್ ಚೆನ್ನಾಗಿದ್ದರೆ ಖಂಡಿತ ಅದನ್ನು ಜನ ಒಪ್ಪುತ್ತಾರೆ. ಎಲ್ಲ ರೀತಿಯ ಜನರಿಗೂ ಅದು ಇಷ್ಟವಾಗುತ್ತದೆ’ ಸುನಿಲ್ ಶೆಟ್ಟಿ.
ಅಂದಹಾಗೆ ಸುನಿಲ್ ಶೆಟ್ಟಿ ನಟಿಸಿರುವುದು, ಮಾಜಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನದಲ್ಲಿ ಸಹ ಮಾಡಿರುವ ‘ಜೈ’ ಸಿನಿಮಾ. ಈ ಸಿನಿಮಾ 50 ದಿನಗಳನ್ನು ಪೂರೈಸಿದೆ. ರೂಪೇಶ್ ಶೆಟ್ಟಿ ಒಂದರ ಹಿಂದೊಂದು ತುಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಿರ್ದೇಶನ, ನಿರ್ಮಾಣವನ್ನೂ ಮಾಡುತ್ತಿದ್ದಾರೆ. ಸಿನಿಮಾವನ್ನು ದುಬೈ, ಕತಾರ್, ಗೋವಾ, ಮುಂಬೈ, ತುಳುನಾಡು, ಕರಾವಳಿ ಭಾಗದಲ್ಲಿ ಬಿಡುಗಡೆ ಮಾಡಿದೆ. ‘ಜೈ’ ಸಿನಿಮಾ ಭರ್ಜರಿ ಗಳಿಕೆ ಮಾಡಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ