Headlines

ಫೆಬ್ರುವರಿ 1, ಭಾನುವಾರ; ಅಂದೇ ಕೇಂದ್ರ ಬಜೆಟ್ ಮಂಡನೆ ಆಗುತ್ತಾ?

ಫೆಬ್ರುವರಿ 1, ಭಾನುವಾರ; ಅಂದೇ ಕೇಂದ್ರ ಬಜೆಟ್ ಮಂಡನೆ ಆಗುತ್ತಾ?


ಜನವರಿ 2: ಕೇಂದ್ರ ಬಜೆಟ್ (ಕೇಂದ್ರ ಬಜೆಟ್) ಮಂಡನೆಯ ದಿನ ಸಮೀಪಿಸುತ್ತಿದೆ. ಕೆಲ ವರ್ಷಗಳಿಂದ ಫೆಬ್ರುವರಿ 1ರಂದು ಬಜೆಟ್ ಮಂಡಿಸುವ ಪರಿಪಾಟ ಬೆಳೆದಿದೆ. ಈ ಬಾರಿ ಫೆಬ್ರುವರಿ 1 ಭಾನುವಾರ ಇದೆ. ಹೀಗಾಗಿ, ಬಜೆಟ್ ಮಂಡನೆಯ ದಿನವನ್ನು ಒಂದು ದಿನ ಮುಂದೂಡುವುದೋ ಅಥವಾ ಹಿಂದೂಡುವುದೋ ಆಗಬಹುದಾ ಎಂಬ ಪ್ರಶ್ನೆ ಇದೆ. ಆದರೆ, ವರದಿ ಪ್ರಕಾರ, ಫೆಬ್ರವರಿ 1 ರಂದು ಬಜೆಟ್ ಮಂಡನೆ ಆಗುವ ಸಾಧ್ಯತೆ ಹೆಚ್ಚು.

ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್

ಫೆಬ್ರುವರಿ 1 ರಂದು ಮಂಡನೆ ಆಗಲಿರುವುದು 2026-27ರ ಸಾಲಿನ ಬಜೆಟ್. ಇದು ಸ್ವತಂತ್ರ ಭಾರತದ 80ನೇ ವಾರ್ಷಿಕ ಬಜೆಟ್ ಕೂಡ ಹೌದು. ನಿರ್ಮಲಾ ಸೀತಾರಾಮನ್ ಅವರಿಗೆ ಇದು 9ನೇ ಬಜೆಟ್ ಮಂಡನೆ. ಅದು ಸತತವಾದ ಬಜೆಟ್. ಸತತ ಎಂಟು ಬಜೆಟ್ ಮಂಡಿಸಿ ಬರೆದ ದಾಖಲೆಯನ್ನು ತಾವೇ ಅಳಿಸಿಹಾಕಲಿದ್ದಾರೆ. 2019ರಲ್ಲಿ ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನರಾದ ಬಳಿಕ ಆ ಸ್ಥಾನವನ್ನು ನಿರ್ಮಲಾ ಅವರು ಸತತವಾಗಿ ನಿಭಾಯಿಸಿದ್ದಾರೆ. ಪ್ರಧಾನಿ ಮೋದಿ ಅವರ ವಿಶ್ವಾಸ ಉಳಿಸಿಕೊಂಡು ಬರಲು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ​​ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದೇ?

ಮೊರಾರ್ಜಿ ದೇಸಾಯಿ 10 ಬಜೆಟ್ ಮಂಡನೆ

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಅತಿಹೆಚ್ಚು ಬಜೆಟ್ ಮಂಡಿಸಿದ ದಾಖಲೆ. ಅವರು 1959ರಿಂದ 1963ರವರೆಗೆ, ಹಾಗೂ 1967ರಿಂದ 1969ರವರೆಗೆ ಒಟ್ಟು ಹತ್ತು ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ. ಪಿ ಚಿದಂಬರಂ 9 ಬಜೆಟ್ ಮಂಡಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮುಂಬರುವ ಬಜೆಟ್ ಸಾಧನೆಯನ್ನು ಮಂಡಿಸಿದರೆ ಚಿದಂಬರಂ ಸರಿಗಟ್ಟಲಿದ್ದಾರೆ. ಆದರೆ, ಮೊರಾರ್ಜಿ, ಪಿ ಚಿದಂಬರಂ ಸೇರಿ ಯಾರೂ ಕೂಡ ಸತತ ಎಂಟು ಬಾರಿ ಬಜೆಟ್ ಮಂಡಿಸಿಲ್ಲ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:20 pm, ಶುಕ್ರ, 2 ಜನವರಿ 26



Source link

Leave a Reply

Your email address will not be published. Required fields are marked *