ಕೆಲವರಿಗೆ ಏನೇ ತಿಂದರೂ ಹೊಟ್ಟೆ ಉಬ್ಬರಿಸಿದಂತೆ ಆಗುತ್ತದೆ ಮತ್ತು ಅಸಿಡಿಟಿ ಸಮಸ್ಯೆ ಉಂಟಾಗುತ್ತದೆ. ಆದರೆ ಆಹಾರ ಕ್ರಮದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಇದನ್ನು ತಡೆಯಬಹುದು. ಮುಖ್ಯವಾಗಿ ಗಮನಿಸಬೇಕಾದ ವಿಷಯಗಳು ಇಲ್ಲಿವೆ.

ಆಹಾರವನ್ನು ಸರಿಯಾದ ರೀತಿಯಲ್ಲಿ ಚೆನ್ನಾಗಿ ಜಗಿದು ತಿನ್ನಲು ಗಮನ ಕೊಡಿ. ಬೇಗನೆ ತಿಂದು ಮುಗಿಸಲು ಪ್ರಯತ್ನಿಸಬೇಡಿ. ಇದು ಆಹಾರ ಸರಿಯಾಗಿ ಜೀರ್ಣವಾಗಲು ಸಮಸ್ಯೆಯಾಗುತ್ತದೆ.

ತೀವ್ರ ಮಾನಸಿಕ ಒತ್ತಡ, ಕೋಪ ಇರುವ ಸಮಯದಲ್ಲಿ ಆಹಾರ ಸೇವಿಸುವುದನ್ನು ತಪ್ಪಿಸಿ. ಇದು ಉತ್ತಮ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದೆ.

ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಲು ಗಮನ ಕೊಡಿ. ಪದೇ ಪದೇ ತಿನ್ನುವುದನ್ನು ತಪ್ಪಿಸಿ. ಇದು ಜೀರ್ಣಕ್ರಿಯೆಗೆ ಅಡ್ಡಿಪಡಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆ ಉಂಟುಮಾಡುತ್ತದೆ. ಕನಿಷ್ಠ ಒಂದು ಗಂಟೆ ಅಂತರವಿರಲಿ.

ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವಾಗಲೂ ವಿಶೇಷ ಗಮನ ಬೇಕು. ಇವುಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಳ್ಳದಿದ್ದರೆ ಉತ್ತಮ ಜೀರ್ಣಕ್ರಿಯೆ ಸಾಧ್ಯವಾಗುವುದಿಲ್ಲ.

ಹೊರಗಿನಿಂದ ಆಹಾರವನ್ನು ತಿನ್ನುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಬದಲಿಗೆ, ಮನೆಯಲ್ಲಿಯೇ ತಯಾರಿಸಿದ ತಾಜಾ ಆಹಾರ ಪದಾರ್ಥಗಳನ್ನು ತಿನ್ನಲು ಗಮನ ಕೊಡಿ.

Source link
ಸಿಲಿಂಡರ್ ಗ್ಯಾಸ್ ಬೆಲೆ ಜಾಸ್ತಿ, ಆದ್ರೆ ಹೊಟ್ಟೆ ಗ್ಯಾಸ್ ಫ್ರೀ! ಅಸಿಡಿಟಿ ತಡೆಯಲು ಇಷ್ಟು ಮಾಡಿ ಸಾಕು!