2026ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಪ್ರಾಯೋಜಕತ್ವ ನೀಡಲು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಆಸಕ್ತಿ ತೋರಿದೆ. ಈ ಮೂಲಕ ಅಮುಲ್ಗೆ ಪೈಪೋಟಿ ನೀಡಲು ಸಜ್ಜಾಗಿದ್ದು, ವಿರಾಟ್ ಕೊಹ್ಲಿ ಬಳಸಿ ನಂದಿನಿ ಉತ್ಪನ್ನಗಳನ್ನು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡಲು ಯೋಜಿಸಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ ನಿಯಮಿತ (ಕೆಎಂಎಫ್), 2026ರ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಜೊತೆ ಪ್ರಾಯೋಜಕತ್ವ ಒಪ್ಪಂದ ಮಾಡಿಕೊಳ್ಳಲು ಆಸಕ್ತಿ ತೋರಿದೆ. ಕಳೆದ ಆವೃತ್ತಿಯಲ್ಲಿ ಗುಜರಾತ್ನ ಅಮೂಲ್ ಸಂಸ್ಥೆ ಆರ್ಸಿಬಿಗೆ ಪ್ರಾಯೋಜಕತ್ವ ನೀಡಿತ್ತು. ಈ ವರ್ಷ ಅಮುಲ್ ಜೊತೆ ಕೆಎಂಎಫ್ ಪೈಪೋಟಿಗೆ ಇಳಿಯುವ ಸಾಧ್ಯತೆ ಇದೆ.

ಆರ್ಸಿಬಿಗೆ ಪ್ರಾಯೋಜಕರಾಗಲು ಪ್ರಯತ್ನಿಸುತ್ತಿರುವ ಕೆಎಂಎಫ್, ಒಪ್ಪಂದಕ್ಕೆ ಸಹಿ ಹಾಕಲು ಅಗತ್ಯವಿರುವ ಪ್ರಕ್ರಿಯೆಗಳನ್ನು ನಿರ್ವಹಿಸಲು ಏಜೆನ್ಸಿವೊಂದರ ಸಹಾಯ ಪಡೆಯಲು ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ ಇತ್ತೀಚೆಗೆ ಟೆಂಡರ್ ಸಹ ಕರೆದಿದೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ, ‘ಆರ್ಸಿಬಿ, ಐಪಿಎಲ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡ. ಜೊತೆಗೆ ಸಾಮಾಜಿಕ ತಾಣದಲ್ಲಿ ಬೃಹತ್ ಸಂಖ್ಯೆಯಲ್ಲಿ ಹಿಂಬಾಲಕರನ್ನು ಹೊಂದಿದೆ ಎಂದು ಹೇಳಿದ್ದಾರೆ.

ನಾವು ವಿರಾಟ್ ಕೊಹ್ಲಿ ಹಾಗೂ ಇನ್ನಿಬ್ಬರು ಆಟಗಾರರನ್ನು ಬಳಿಸಿಕೊಂಡು ನಮ್ಮ ನಂದಿನಿ ಉತ್ಪನ್ನಗಳ ಪ್ರಚಾರ ಕಾರ್ಯ ನಡೆಸಲು ಯೋಜಿಸಿದ್ದೇವೆ. ಇದು ದೆಹಲಿ, ಮುಂಬೈ, ಉತ್ತರ ಪ್ರದೇಶಗಳಲ್ಲಿ ನಂದಿನಿ ಮಾರುಕಟ್ಟೆಯನ್ನು ವಿಸ್ತರಿಸಲು ಸಹಕಾರಿಯಾಗಲಿದೆ’ ಎಂದಿದ್ದಾರೆ.

ಜೊತೆಗೆ ಪ್ರಸ್ತಾವಿತ ಒಪ್ಪಂದದಲ್ಲಿ, ನಂದಿನಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಕೊಹ್ಲಿ ಹಾಗೂ ಇನ್ನಿಬ್ಬರು ಆಟಗಾರರ ಭಾವಚಿತ್ರಗಳನ್ನು ಬಳಸಿಕೊಳ್ಳುವ ಬಗ್ಗೆಯೂ ಉಲ್ಲೇಖಿಸಲಾಗಿದೆ.

ಅಮುಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಯೆನ್ ಮೆಹ್ತಾ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ‘ಕಳೆದ ವರ್ಷ ನಾವು 9 ತಂಡಗಳಿಗೆ ಪ್ರಾಯೋಜಕತ್ವ ನೀಡಿದ್ದೆವು. ಈ ವರ್ಷ ಪ್ರಾಯೋಜಕತ್ವ ಬಗ್ಗೆ ಸದ್ಯದಲ್ಲೇ ಘೋಷಣೆ ಮಾಡಲಿದ್ದೇವೆ’ ಎಂದಿದ್ದಾರೆ.

Source link
ಆರ್ಸಿಬಿ ಅಂಗಳದಲ್ಲಿ ಕರುನಾಡಿನ ನಂದಿನಿ ಎಂಟ್ರಿ? ಕೆಎಂಎಫ್ನ ಹೊಸ ಲೆಕ್ಕಾಚಾರ ಏನು?