ಜೈಲಲ್ಲಿದ್ದ ಉಗ್ರನಿಗೆ ಹಣ, ಮೊಬೈಲ್, ವಾಕಿಟಾಕಿ ಕೊಡ್ತಿದ್ದ ಪೊಲೀಸ್-ಮನೋವೈದ್ಯ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ

ಜೈಲಲ್ಲಿದ್ದ ಉಗ್ರನಿಗೆ ಹಣ, ಮೊಬೈಲ್, ವಾಕಿಟಾಕಿ ಕೊಡ್ತಿದ್ದ ಪೊಲೀಸ್-ಮನೋವೈದ್ಯ: ಎನ್​ಐಎ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಅಂಶ


ಕಾನ್ ಟೇಬಲ್ ಚಾನ್ ಪಾಷಾ, ಅನೀಸ್ ಫಾತಿಮಾ (ಸಂಗ್ರಹ ಚಿತ್ರ)

ಬೆಂಗಳೂರು, ಜನವರಿ 3: ಅದು ಪೊಲೀಸ್ ಇಲಾಖೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣ. ಸಜಾಬಂಧಿ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ (ಪರಪ್ಪನ ಅಗ್ರಹಾರ ಜೈಲು) ಲಷ್ಕರ್ ಎ ತೊಯ್ಬಾ ಉಗ್ರ ಟಿ. ನಸೀರ್ ಗೆ ನೆರವು ನೀಡಿದ್ದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಮನೋವೈದ್ಯರಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಪ್ರಕರಣದ ತನಿಖೆ ಕೈಗೊಂಡ ಎನ್ಐಎ (NIA) ಮೂವರು ಆರೋಪಿಗಳ ವಿರುದ್ಧ ಎನ್‌ಐಎ ಸ್ಪೆಷಲ್ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಜೈಲಿನಲ್ಲಿದ್ದ ಉಗ್ರನಿಗಾಗಿ ಸಿದ್ಧವಾಗ್ತಿತ್ತು ಹ್ಯಾಂಡ್ ಗ್ರೆನೇಡ್!

ಉಗ್ರನಿಗೆ ನೆರವು ನೀಡಿದ ಪ್ರಕರಣದಲ್ಲಿ ಎನ್‌ಐಎ ಅಧಿಕಾರಿಗಳು ಸಿಎಆರ್ ಕಾನ್ ಟೇಬಲ್ ಚಾನ್ ಪಾಷಾ, ಜೈಲಿನ ಮನೋವೈದ್ಯ ನಾಗರಾಜ್ ಮತ್ತು ನಾಪತ್ತೆಯಾಗಿರುವ ಶಂಕಿತ ಉಗ್ರ ಜುನೈದ್ ಅಹಮದ್ ತಾಯಿ ಅನೀಸ್ ಫಾತೀಮಾಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ವೇಳೆ, ಆರೋಪಿಗಳ ಸಂಚು ಹಾಗೂ ಅಪರಾಧ ಕೃತ್ಯಗಳು ಬೆಳಕಿಗೆ ಬಂದಿವೆ. ಪ್ರಮುಖ ಆರೋಪಿ ಅನೀಸ್ ಫಾತಿಮಾ, ತಲೆಮರೆಸಿಕೊಂಡಿರುವ ಜುನೈದ್ ಅಹಮದ್ ತಾಯಿ, ಎಲ್ಇಟಿ ಉಗ್ರ ಟಿ. ನಸೀರ್ ಗೆ ಹಣಕಾಸಿನ ವ್ಯವಸ್ಥೆ ಮಾಡುತ್ತಿದೆ. ಮಗನ ಸೂಚನೆಯಂತೆ ಹ್ಯಾಂಡ್ ಗ್ರೆನೆಡ್, ವಾಕಿಟಾಕಿ ವ್ಯವಸ್ಥೆ ಮಾಡಿ ಆರೋಪಿಗಳ ನಡುವೆ ಸಂವಹನಕ್ಕೆ ದಾರಿಯಾಗಿರುವುದು ಗೊತ್ತಾಗಿದೆ.

ಅದೇ ರೀತಿ ಸಿಎಆರ್ ಎಸ್ಐ ಆಗಿದ್ದ ಆರೋಪಿ ಚಾನ್ ಪಾಷಾ ಉಗ್ರ ಟಿ. ನಸೀರ್ ನ ಮಾಹಿತಿಯನ್ನು ಹೊರಗೆ ರವಾನಿಸುತ್ತಿದ್ದವು. ನಸೀರ್‌ಗೆ ಒದಗಿಸುವ ಬೆಂಗಾವಲು ಪಡೆ ವಿವರಗಳನ್ನು ಹಣದಾಸೆಗಾಗಿ ಸಲ್ಮಾನ್ ಖಾನ್ ಎಂಬಾತನಿಗೆ ನೀಡುತ್ತಿದ್ದ. ಇನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿದ್ದ ಡಾ. ನಾಗರಾಜ್, ಕಾನೂನು ಬಾಹಿರವಾಗಿ ಜೈಲಿಗೆ ಮೊಬೈಲ್ ಫೋನ್‌ಗಳು ಸಾಗಾಟ ನಡೆಸುತ್ತಿವೆ. ಖೈದಿಗಳಿಂದ ಹಣ ಪಡೆದು ಮೊಬೈಲ್ ಮಾರಾಟ ಮಾಡುತ್ತಿದ್ದಾರೆ. ಅದೇ ರೀತಿ ಟಿ. ನಸೀರ್‌ಗೂ ಕೂಡ ಮೊಬೈಲ್ ಮಾರಾಟ ಮಾಡಿದ್ದು, ಇದೇ ಮೊಬೈಲ್ ಮೂಲಕ ನಸೀರ್ ಭಯೋತ್ಪಾದನಾ ಸಂಚು ರೂಪಿಸುತ್ತಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ತನಿಖೆ ನಡೆಸಿದ ಎನ್‌ಐಎ ತಂಡದ ಮೂವರು ಆರೋಪಿಗಳ ವಿರುದ್ಧ ಐಎ ಸ್ಪೆಷಲ್ ಕೋರ್ಟ್‌ಗೆ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಇದನ್ನೂ ಓದಿ: ಉಗ್ರ ನಾಸೀರ್ ಜೈಲಿನಿಂದ ತಪ್ಪಿಸಿಕೊಳ್ಳಲು ನಡೆದಿತ್ತು ಸಿನಿಮಾದ ರೀತಿ ಸಂಚು! ಎನ್ಐಎ ತನಿಖೆಯಲ್ಲಿ ಸ್ಫೋಟಕ ಅಂಶ ಬಯಲು

ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನ ಮನೋವೈದ್ಯ ಡಾ.ನಾಗರಾಜ್, ಪರಪ್ಪನ ಅಗ್ರಹಾರ ಜೈಲಿನ ಎಸ್ಸೈ ಚಾನ್ ಪಾಷಾ ಹಾಗೂ ಶಂಕಿತ ಉಗ್ರನ ತಾಯಿ ಅನೀಸ್ ಫಾತೀಮಾರನ್ನು 2025ರ ಜುಲೈ 8ರಂದು ರಾತ್ರಿ ಎನ್ಐಎ ಅಧಿಕಾರಿಗಳು ಬಂಧಿಸಿದ್ದರು.

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *