Cervical Cancer Warning Signs: ಗರ್ಭಕಂಠದ ಕ್ಯಾನ್ಸರ್ ಗರ್ಭಾಶಯದ ಕೆಳಭಾಗದಲ್ಲಿ ಉಂಟಾಗುತ್ತದೆ. ಇದು ಹೆಚ್ಚಾಗಿ ಹ್ಯೂಮನ್ ಪ್ಯಾಪಿಲೋಮವೈರಸ್ (HPV) ಸೋಂಕಿನಿಂದ ಉಂಟಾಗುತ್ತದೆ. ಇದು ಅಸಹಜ ಕೋಶಗಳ ಬೆಳವಣಿಗೆಗೆ ಕಾರಣವಾಗುತ್ತದೆ. ನಂತರ ಕಾಲಕ್ರಮೇಣ ಕ್ಯಾನ್ಸರ್ ಆಗಿ ಬದಲಾಗುತ್ತದೆ.

ಜನವರಿ ಗರ್ಭಕಂಠದ ಕ್ಯಾನ್ಸರ್ ಜಾಗೃತಿ ತಿಂಗಳು. ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ, ಸ್ಕ್ರೀನಿಂಗ್‌ಗಳ (ಪ್ಯಾಪ್ ಟೆಸ್ಟ್‌ಗಳು, HPV ಲಸಿಕೆಗಳು) ಮೂಲಕ ಆರಂಭಿಕ ಪತ್ತೆ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ತಿಂಗಳನ್ನು ಆಚರಿಸಲಾಗುತ್ತದೆ.

ಮಹಿಳೆಯರಲ್ಲಿ ಕ್ಯಾನ್ಸರ್ ಸಂಬಂಧಿತ ಸಾವುಗಳಿಗೆ ಇದು ಎರಡನೇ ಪ್ರಮುಖ ಕಾರಣ. 2022 ರಲ್ಲಿ, 79,906 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ. ಬದುಕುಳಿಯುವ ಪ್ರಮಾಣವು ಆರಂಭಿಕ ರೋಗನಿರ್ಣಯವನ್ನು ಅವಲಂಬಿಸಿದೆ.

ಗರ್ಭಕಂಠದ ಕ್ಯಾನ್ಸರ್ ಗರ್ಭಾಶಯದ ಕೆಳಭಾಗದಲ್ಲಿ ಉಂಟಾಗುತ್ತದೆ. ಇದು ಹೆಚ್ಚಾಗಿ HPV ಸೋಂಕಿನಿಂದ ಉಂಟಾಗುತ್ತದೆ. HPV ಲಸಿಕೆ ಮತ್ತು ನಿಯಮಿತ ಸ್ಕ್ರೀನಿಂಗ್‌ಗಳ (ಪ್ಯಾಪ್ ಟೆಸ್ಟ್, HPV ಟೆಸ್ಟ್) ಮೂಲಕ ಇದನ್ನು ತಡೆಯಬಹುದು.

ಆರಂಭದಲ್ಲಿ ಪತ್ತೆಯಾದರೆ, ಶಸ್ತ್ರಚಿಕಿತ್ಸೆ, ವಿಕಿರಣ ಅಥವಾ ಕೀಮೋಥೆರಪಿ ಮೂಲಕ ಸುಲಭವಾಗಿ ಚಿಕಿತ್ಸೆ ನೀಡಬಹುದು. ಮುಟ್ಟಿನ ನಡುವೆ ಮತ್ತು ಲೈಂಗಿಕ ಕ್ರಿಯೆಯ ನಂತರ ಯೋನಿ ರಕ್ತಸ್ರಾವ ಇದರ ಲಕ್ಷಣ. ಇದಕ್ಕೆ HPV ಸಾಮಾನ್ಯ ಕಾರಣ.

ಹೆಚ್ಚು ಲೈಂಗಿಕ ಸಂಗಾತಿಗಳನ್ನು ಹೊಂದಿದ್ದರೆ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚು. ಏಕೆಂದರೆ HPV ಇದರ ಪ್ರಮುಖ ಕಾರಣ. ಲೈಂಗಿಕವಾಗಿ ಹರಡುವ ಸೋಂಕುಗಳು (STI) HPV ಅಪಾಯವನ್ನು ಹೆಚ್ಚಿಸಿ ಕ್ಯಾನ್ಸರ್‌ಗೆ ಕಾರಣವಾಗಬಹುದು.

ಹರ್ಪಿಸ್, ಸಿಫಿಲಿಸ್, ಕ್ಲಮೈಡಿಯ, ಗೊನೊರಿಯಾ, ಮತ್ತು HIV/AIDS ನಂತಹ STIಗಳು ಅಪಾಯವನ್ನು ಹೆಚ್ಚಿಸುತ್ತವೆ. ದೀರ್ಘಕಾಲದವರೆಗೆ ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ಗರ್ಭಕಂಠದ ಕ್ಯಾನ್ಸರ್ ಅಪಾಯ ಹೆಚ್ಚಾಗಬಹುದು.

ಯೋನಿ ಸ್ರಾವ, ಲೈಂಗಿಕ ಕ್ರಿಯೆಯ ವೇಳೆ ನೋವು, ಪೆಲ್ವಿಕ್ ಪರೀಕ್ಷೆಯ ನಂತರ ರಕ್ತಸ್ರಾವ, ಮುಟ್ಟು ನಿಂತ ನಂತರ ರಕ್ತಸ್ರಾವ, ಪೆಲ್ವಿಕ್ ಭಾಗದಲ್ಲಿ ನೋವು ಮತ್ತು ಮೂತ್ರ ವಿಸರ್ಜನೆ ವೇಳೆ ನೋವು ಇದರ ಪ್ರಮುಖ ಲಕ್ಷಣಗಳು.

Source link
ಗರ್ಭಕಂಠದ ಕ್ಯಾನ್ಸರ್ ಬಂದಾಗ ದೇಹವು ತೋರಿಸುವ ಏಳು ಲಕ್ಷಣಗಳಿವು