‘ನಾವು ಹೋಗಲು ಬಿಡಲ್ಲ’: ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು

‘ನಾವು ಹೋಗಲು ಬಿಡಲ್ಲ’: ಶಾಲೆ ಗೇಟ್​ ಬಂದ್​ ಮಾಡಿ ಶಿಕ್ಷಕರನ್ನ ತಡೆದು ಕಣ್ಣೀರಿಟ್ಟ ಮಕ್ಕಳು


ಕೊಪ್ಪಳ, ಜ.3: ಕೊಪ್ಪಳ ತಾಲೂಕಿನ ಬಹದ್ದೂರ ಬಂಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ವರ್ಗಾವಣೆ ವಿರೋಧಿಸಿ ವಿದ್ಯಾರ್ಥಿಗಳು ಮತ್ತು ಮಕ್ಕಳ ಶಾಲಾ ಗೇಟ್ ಬಂದ್ ಮಾಡಿ ಭಾವುಕರಾಗಿ ಪ್ರತಿಭಟನೆ. ತಮ್ಮ ನೆಚ್ಚಿನ ಶಿಕ್ಷಕರಾದ ವೀರಪ್ಪ ಅವರ ಶಾಲೆಯಿಂದ ಹೊರಗೆ ಹೋಗದಂತೆ ಕಣ್ಣೀರು ಹಾಕಿದ್ದಾರೆ. “ನಾವು ಹೋಗಲ್ಲ, ಸರ್ ಬರಬೇಕು,” ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೋಷಕ ಮಾತನಾಡಿದ್ದಾರೆ. ವೀರಪ್ಪ ಸರ್ ಅವರು ನಮ್ಮ ಮಕ್ಕಳಿಗಿಂತ ಹೆಚ್ಚಾಗಿ ನೋಡ್ಕೊಂಡಿದ್ದಾರೆ. ನಮ್ಮ ಮಕ್ಕಳು ಅವರ ಪ್ರೀತಿಗೆ ಸೋತಿದ್ದಾರೆ. ಜೊತೆಗೆ ನಮ್ಮ ಮಕ್ಕಳು ಉದ್ದಾರ ಆಗಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮಕ್ಕಳ ಕಣ್ಣೀರು ನೋಡಿ ಶಿಕ್ಷಕರು ನಾಳೆ ಶಾಲೆಗೆ ಬರುವುದಾಗಿ ಭರವಸೆ ನೀಡಿದ್ದಾರೆ. ನಾಳೆ ನಿಮಗೆ ಶಾಲೆಗೆ ಬರದಿದ್ದರೆ ನಾವು ಕೂಡ ನಾಳೆ ಶಾಲೆಗೆ ಬರುವುದಿಲ್ಲ ಎಂದು ಹೇಳಿದ್ದಾರೆ .

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *