Bigg Boss ಮನೆಯಲ್ಲಿ ಗಿಲ್ಲಿ ನಟ ಎಂಥ ಕಿಲಾಡಿ ಎನ್ನೋದಿಕ್ಕೆ ಬಲವಾದ ಸಾಕ್ಷಿಗಳಿವು! ಎಲ್ರಿಗೂ ಕಾಣಿಸಿಲ್ಲ!

Bigg Boss ಮನೆಯಲ್ಲಿ ಗಿಲ್ಲಿ ನಟ ಎಂಥ ಕಿಲಾಡಿ ಎನ್ನೋದಿಕ್ಕೆ ಬಲವಾದ ಸಾಕ್ಷಿಗಳಿವು! ಎಲ್ರಿಗೂ ಕಾಣಿಸಿಲ್ಲ!

Bigg Boss ಮನೆಯಲ್ಲಿ ಗಿಲ್ಲಿ ನಟ ಎಂಥ ಕಿಲಾಡಿ ಎನ್ನೋದಿಕ್ಕೆ ಬಲವಾದ ಸಾಕ್ಷಿಗಳಿವು! ಎಲ್ರಿಗೂ ಕಾಣಿಸಿಲ್ಲ!

BBK 12 Gilli Nata: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿರುವ ಗಿಲ್ಲಿ ನಟ ಈಗಾಗಲೇ ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದಾರೆ. ಅವರು ಈ ಶೋನಲ್ಲಿ ಕಾಮಿಡಿ ಮಾಡಿ, ತಕ್ಷಣ ಪ್ರತಿಕ್ರಿಯೆ ನೀಡಿ ಹೆಸರು ಗಳಿಸಿದ್ದಾರೆ. ಆಟದ ವಿಚಾರದಲ್ಲಿ ಕೂಡ ಅವರು ಬುದ್ಧಿವಂತಿಕೆ ತೋರಿಸಿದ್ದರು.

ಬಿಗ್‌ ಬಾಸ್‌ ಶೋನಲ್ಲಿ ಟಾಸ್ಕ್‌ ವಿಚಾರದಲ್ಲಿ ಅಥವಾ ಇನ್ಯಾವುದೋ ವಿಚಾರದಲ್ಲಿ ಗಿಲ್ಲಿ ನಟ ಅವರು ಮಾತನಾಡಿ ಹೈಲೆಟ್‌ ಆಗುತ್ತಿರುತ್ತಾರೆ. ಯಾರ ಜೊತೆ ಮಾತನಾಡಿದರೆ ನನಗೆ ಕಂಟೆಂಟ್‌ ಸಿಗುತ್ತದೆ, ನಾನು ಹೈಲೈಟ್‌ ಆಗ್ತೀನಿ ಎನ್ನೋದು ಗಿಲ್ಲಿಗೆ ಚೆನ್ನಾಗಿ ಗೊತ್ತಿದೆ ಎಂದು ಮಾಳು ನಿಪನಾಳ, ಜಾಹ್ನವಿ ಕೂಡ ಹೇಳಿದ್ದುಂಟು. ಇನ್ನು ಕೆಲ ಕಡೆ ಗಿಲ್ಲಿ ನಟನ ಬುದ್ಧಿವಂತಿಕೆ ಪ್ರದರ್ಶನ ಆಗಿದೆ.

ನಾಮಿನೇಶನ್‌ ಟಾಸ್ಕ್‌ವೊಂದರಲ್ಲಿ ಯಾರು, ಯಾರು ನಮ್ಮನ್ನು ನಾಮಿನೇಟ್‌ ಮಾಡ್ತಾರೆ ಎಂದು ಹೇಳಬೇಕಿತ್ತು. ಅಲ್ಲಿ ತಪ್ಪಾಗಿ ಹೆಸರು ಹೇಳಿದರೆ ಅವರು ನಾಮಿನೇಟ್‌ ಆಗ್ತಾರೆ. ರಾಶಿಕಾ ಶೆಟ್ಟಿಗೂ, ಗಿಲ್ಲಿ ನಟನಿಗೂ ಆಗೋದೇ ಇಲ್ಲ. ರಾಶಿಕಾ ಶೆಟ್ಟಿ ಅವರು ಗಿಲ್ಲಿ ನಟ ನನ್ನನ್ನು ನಾಮಿನೇಟ್‌ ಮಾಡ್ತಾರೆ ಎಂದು ಹೇಳಿದರು. ಆದರೆ ಗಿಲ್ಲಿ ಅಂದು ಹೆಸರು ಹೇಳಲೇ ಇಲ್ಲ. ಆಗ ರಾಶಿಕಾ ನಾಮಿನೇಟ್‌ ಆದರು.

ಧ್ರುವಂತ್‌ ಹಾಗೂ ರಕ್ಷಿತಾ ಶೆಟ್ಟಿ ಅವರು ಸೀಕ್ರೇಟ್‌ ರೂಮ್‌ಗೆ ಹೋಗಿರಬಹುದು ಎಂದು ಗಿಲ್ಲಿ ನಟ ಅವರು ಮೊದಲೇ ಊಹಿಸಿದ್ದರು. ಇದನ್ನು ಅವರು ಹೇಳಿದ್ದುಂಟು.

ರಕ್ಷಿತಾ ಶೆಟ್ಟಿಗೆ ಹೀಯಾಳಿಸೋದು, ನಾಗವಲ್ಲಿ ಥರ ರಾತ್ರಿ ಡ್ಯಾನ್ಸ್‌ ಮಾಡ್ತಾಳೆ ಎಂದು ಹೇಳೋದು ತಪ್ಪು ಎಂದು ಗಿಲ್ಲಿ ನಟ ಒತ್ತಿ ಒತ್ತಿ ಹೇಳಿದ್ದರು. ಇಡೀ ಮನೆಯಲ್ಲಿ ಅಶ್ವಿನಿ ಗೌಡ, ಜಾಹ್ನವಿಗೆ ಗಿಲ್ಲಿ ಎಚ್ಚರಿಕೆ ಕೊಟ್ಟಿದ್ದರು. ಗೆಜ್ಜೆ ಸೌಂಡ್‌ ಮಾಡಿದ್ದು ಜಾನು ಎಂದು ಗಿಲ್ಲಿಗೆ ಮೊದಲೇ ಗೊತ್ತಿತ್ತು. ಇದರ ಬಗ್ಗೆ ಮಾತನಾಡಿ ಗಿಲ್ಲಿ ನಟ ಅವರು ಕಿಚ್ಚನ ಚಪ್ಪಾಳೆ ಪಡೆದರು.

ಆರಂಭದಲ್ಲಿ ಲೆಟರ್‌ ಟಾಸ್ಕ್‌ ಬಂದಾಗಲೂ ಕೂಡ ಕಾವ್ಯ ಶೈವ ಅವರಿಗೆ ಗಿಲ್ಲಿ ಲೆಟರ್‌ ಕೊಟ್ಟರು, ಆದರೆ ಕಾವ್ಯ ಗಿಲ್ಲಿಗೆ ಅವರ ಮನೆಯ ಲೆಟರ್‌ ಕೊಡಲಿಲ್ಲ. ವೀಕ್ಷಕರ ಕಣ್ಣಲ್ಲಿ ಗಿಲ್ಲಿ ಹೀರೋ ಆದರು.

ಕಾವ್ಯ ನಾಮಿನೇಟ್‌ ಮಾಡಿದರೂ ಕೂಡ ಒಮ್ಮೆಯೂ ಗಿಲ್ಲಿ ಕಾವ್ಯ ಅವರನ್ನು ನಾಮಿನೇಟ್‌ ಮಾಡಲೇ ಇಲ್ಲ.

ಈಗ ಕ್ಯಾಪ್ಟನ್‌ ಆದಾಗಲೂ ಕೂಡ ಕಾವ್ಯ ಶೈವ ಅವರನ್ನು ಗಿಲ್ಲಿ ನಾಮಿನೇಟ್‌ ಮಾಡಲೇ ಇಲ್ಲ.

ಎಷ್ಟೇ ಹೇಳಿದರೂ ಕೂಡ ಗಿಲ್ಲಿ ನಟ ಅವರು ಮನೆ ಕೆಲಸ ಮಾಡೋದಿಲ್ಲ. ಬಾತ್‌ರೂಮ್‌ಗೆ ಹೋಗಿ ಎರಡು ಸ್ಪ್ರೇ ಹೊಡೆದು, ಕ್ಲೀನ್‌ ಆಯ್ತು ಎಂದು ಹೇಳುವುದು. ಲೈಟ್‌ ಆಫ್‌ ಆದ್ಮೇಲೆ ಕೆಲಸ ಮಾಡೋಣ ಎಂದು ಮೊದಲು ಹೇಳಿ, ಲೈಟ್‌ ಆಫ್‌ ಆದ್ಮೇಲೆ, ರಾತ್ರಿಯಾಯ್ತು, ಮಲಗೋಣ ಎಂದು ಹೇಳುತ್ತಿದ್ದರಂತೆ. ಇದನ್ನು ಸೂರಜ್‌ ಅವರೇ ಹೇಳಿದ್ದಾರೆ.

ಯಾರ ಜೊತೆ ಮಾತನಾಡಿದರೆ, ಅವರು ಟ್ರಿಗರ್‌ ಆಗ್ತಾರೋ ಇಲ್ಲವೋ ಎಂದು ಮೊದಲು ಗಿಲ್ಲಿ ನಟ ಪರೀಕ್ಷೆ ಮಾಡ್ತಾರೆ. ಆಮೇಲೆ ಅವರ ಮೇಲೆ ಕಾಮಿಡಿ ಮಾಡಿ, ಕಂಟೆಂಟ್‌ ಕ್ರಿಯೇಟ್‌ ಮಾಡ್ತಾರೆ ಎಂದು ಮಾಳು ನಿಪನಾಳ ಅವರು ನಮ್ಮ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಗಿಲ್ಲಿ ನಟ ಅವರು ರಿಷಾ ಗೌಡ ಹೋದ್ಮೇಲೆ ಯಾರೂ ಸಿಕ್ಕಿರಲಿಲ್ಲ, ಚೈತ್ರಾ ಕುಂದಾಪುರ ಸಿಕ್ಕಿದಳು, ಇನ್ನು ಬಿಡೋದಿಲ್ಲ, ಮನೆ ಸೈಲೆಂಟ್‌ ಆಗಿ ಇರಬಾರದು, ಕಿಲ ಕಿಲ ಎನ್ನುತ್ತಿರಬೇಕು ಎಂದು ಹೇಳಿದ್ದಾರೆ. ಅಶ್ವಿನಿ ಗೌಡ, ಧ್ರುವಂತ್‌ ಜೊತೆಗಿನ ಮಾತುಕತೆ ವೇಳೆ ಕೂಡ ಅವರು ಕೀ ಕೊಡ್ತೀನಿ ಎಂದಿದ್ದರು.

Source link

Leave a Reply

Your email address will not be published. Required fields are marked *