Breaking: ಅಮೆರಿಕದ ವಾರ್ನಿಂಗ್‌ ಬೆನ್ನಲ್ಲೇ ವೆನುಜುವೇಲ ರಾಜಧಾನಿ Caracas ಬಳಿ ಸಾಲು ಸಾಲು ಸ್ಫೋಟ | Explosion Rock Venezuela Capital Caracas After Us Drug Trafficking Warning San

ಅಮೆರಿಕದ ಡ್ರಗ್ ರಾಕೆಟ್ ಎಚ್ಚರಿಕೆಯ ನಂತರ, ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಶನಿವಾರ ಬೆಳಿಗ್ಗೆ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಈ ಘಟನೆಯಿಂದ ಜನರು ಭಯಭೀತರಾಗಿದ್ದು, ಯುದ್ಧವಿಮಾನಗಳ ಹಾರಾಟವೂ ಕೇಳಿಬಂದಿದೆ, ಆದರೆ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ನವದೆಹಲಿ (ಜ.3): ಡ್ರಗ್‌ ರಾಕೆಟ್‌ ಬಗ್ಗೆ ಅಮೆರಿಕದ ವಾರ್ನಿಂಗ್‌ ಬೆನ್ನಲ್ಲೇ ಶನಿವಾರ ಬೆಳಿಗ್ಗೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಮೊದಲ ಸ್ಫೋಟ ಸ್ಥಳೀಯ ಸಮಯ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದೆ. ಇದಲ್ಲದೆ, ರಾಜಧಾನಿಯ ವಾಯುಪ್ರದೇಶದ ಮೇಲೆ ಕಡಿಮೆ ಎತ್ತರದಲ್ಲಿ ಯುದ್ಧವಿಮಾನಗಳು ಹಾರುವ ಶಬ್ದವೂ ಕೇಳಿಬಂದಿದೆ. ಸ್ಪೋಟಗಳ ಶಬ್ದ ಕೇಳಿ ನಗರದ ವಿವಿಧ ಪ್ರದೇಶಗಳಲ್ಲಿನ ಜನರು ಭಯಭೀತರಾಗಿ ಬೀದಿಗೆ ಇಳಿದಿದ್ದಾರೆ. ಕ್ಯಾರಕಾಸ್‌ನ ಕೆಲವು ಭಾಗಗಳಲ್ಲಿ ಜನರು ಹೊರಗೆ ನಿಂತಿರುವುದು ಕಂಡು ಬಂದಿದೆ. ಆದರೆ, ರಾಜಧಾನಿ ಮೇಲೆ ಆದ ದಾಳಿಯ ಬಗ್ಗೆ ವೆನುಜುವೇಲ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ನಗರದ ವಿವಿಧ ಭಾಗಗಳಲ್ಲಿ ದೊಡ್ಡ ಶಬ್ದಗಳು ಕೇಳಿಬಂದವು ಎಂದು ರಾಯಿಟರ್ಸ್ ವರದಿ ಮಾಡಿದೆ. ನಗರದ ದಕ್ಷಿಣ ಭಾಗದಲ್ಲಿ, ಪ್ರಮುಖ ಮಿಲಿಟರಿ ನೆಲೆಯ ಬಳಿ ವಿದ್ಯುತ್ ಕಡಿತಗೊಳಿಸಲಾಗಿದೆ. ಸಿಎನ್‌ಎನ್ ವರದಿಗಾರ ಒಸಾಮರಿ “ಒಂದು ಸ್ಫೋಟವು ತುಂಬಾ ಶಕ್ತಿಶಾಲಿಯಾಗಿದ್ದು ಅದು ಕಿಟಕಿಗಳನ್ನು ಅಲುಗಾಡಿಸಿತು” ಎಂದು ಹೇಳಿದ್ದಾರೆ.

Scroll to load tweet…

Source link

Leave a Reply

Your email address will not be published. Required fields are marked *