ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?, ಇಂಡಿಗೋ ವಿಮಾನಾನ ಸಂಸ್ಥೆ ಮಹತ್ವದ ಘೋಷಣೆ. ಯಾರಿಗೆಲ್ಲಾ 10,000 ರೂಪಾಯಿ ಪರಿಹಾರ ವೋಚರ್ ಯಾರಿಗೆಲ್ಲಾ ಸಿಗಲಿದೆ?

ಇಂಡಿಗೋ ಇದೀಗ ಪ್ರಯಾಣಿಕರ ಬೆಂಬಲಕ್ಕೆ ವಿಶೇಷ ಆಫರ್ ಘೋಷಿಸಿದೆ. ಬರೋಬ್ಬರಿ 10,000 ರೂಪಾಯಿ ವೋಚರ್ ಆಫರ್ ನೀಡುತ್ತಿದೆ. ಹೌದು, ಪ್ರಯಾಣಿಕರಿಗೆ ಆದ ಅನಾನೂನುೂಕಲಕ್ಕಾಗಿ ಪರಿಹಾರ ರೂಪದಲ್ಲಿ ಈ ಆಫರ್ ಘೋಷಿಸಿದೆ. ಇತ್ತೀಚೆಗೆ ಪೈಲೆಟ್ ಕೊರತೆ ಸೇರಿದಂತೆ ಕೆಲ ಕಾರಣಗಳಿಂದ ಇಂಡಿಗೋ ವಿಮಾನಗಳು ಹಾರಾಟ ರದ್ದುಗೊಳಿಸಿ ದೇಶದಲ್ಲೆ ಭಾರಿ ಕೋಲಾಹಲ ಸೃಷ್ಟಿಸಿತ್ತು.

ಇತ್ತೀಚೆಗೆ ಇಂಡಿಗೋದ ಬಹುತೇಕ ವಿಮಾನಗಳು ಹಾರಾಟ ಸ್ಥಗಿತಗೊಳಿಸಿ ಕೋಲಾಹಲ ಸೃಷ್ಟಿಸಿತ್ತು. ಈ ವೇಳೆ ವಿಮಾನ ಪ್ರಯಾಣ ರದ್ದಾಗಿ, ವಿಳಂಬವಾಗಿ ಸಮಸ್ಯೆ ಎದುರಿಸಿದ ಪ್ರಯಾಣಿಕರಿಗೆ ಈ 10,000 ರೂಪಾಯಿ ವೋಚರ್ ಆಫರ್ ಸಿಗಲಿದೆ. ಇಂಡಿಗೋದಿಂದ ಸಮಸ್ಯೆ ಎದುರಿಸಿದ ಗ್ರಾಹಕರ ಬೆಂಬಲಕ್ಕಾಗಿ ಈ ವೋಚರ್ ನೀಡಲಾಗುತ್ತಿದೆ.

ಡಿಸೆಂಬರ್ 3 ರಿಂದ 5ವರರೆಗೆ ಇಂಡಿಗೋ ದೇಶಾದ್ಯಂತ ವಿಮಾನ ಪ್ರಯಾಣ ವಿಳಂಬ, ರದ್ದು ಸಮಸ್ಯೆಯಿಂದ ಪ್ರಯಾಣಿಕರು ಹೈರಾಗಿದ್ದರು. ಈ ಸಮಯದಲ್ಲಿ ಬುಕಿಂಗ್ ಮಾಡಿ ಪ್ರಯಾಣ ಅನಾನೂಕೂಲ ಎದುರಿಸಿದವರಿಗೆ ಈ ವೋಚರ್ ನೀಡಲಾಗುತ್ತಿದೆ.

ಸಮಸ್ಯೆ ಎದುರಿಸಿದ ಇಂಡಿಗೋ ಗ್ರಾಹಕರಿಗೆ 10,000 ರೂಪಾಯಿ ಆಫರ್‌ನ್ನು ಎರಡು ಕಂತುಗಳು ಮೂಲಕ ನೀಡಲಾಗುತ್ತದೆ. 5,000 ರೂಪಾಯಿಯ ಎರಡು ವೋಚರ್ ನೀಡಲಾಗುತ್ತದೆ.

ವೋಚರ್ ಪಡೆದ ಪ್ರಯಾಣಿಕರು ಇಂಡಿಗೋ ಮೂಲಕ ವಿಮಾನ ಟಿಕೆಟ್ ಬುಕಿಂಗ್ ವೇಳೆ ಬಳಸಿಕೊಳ್ಳಬಹುದು. ಟಿಕೆಟ್ ಬುಕಿಂಗ್, ಪ್ರಯಾಣದ ವೇಳೆಯ ಆಹಾರ, ಪಾನಿಯ, ಹೆಚ್ಚುವರಿ ಲಗೇಜ್‌ಗಳಿಗೆ ಈ ವೋಚರ್ ಬಳಸಲು ಅವಕಾಶವಿದೆ. ಯಾರ ಹೆಸರಿನಲ್ಲಿ ವೋಚರ್ ನೀಡಲಾಗುತ್ತದೋ ಅವರು ಮಾತ್ರ ಬಳಕೆಗೆ ಅರ್ಹ, ಟ್ರಾನ್ಸ್‌ಫರ್ ಮಾಡುವಂತಿಲ್ಲ.

ಕ್ಲೈಮ್ ಮಾಡುವುದು ಹೇಗೆ?

ಇಂಡಿಗೋ ಪ್ರಯಾಣಿಕರಿಗೆ ನೀಡುವ 10 ಸಾವಿರ ರೂಪಾಯಿ ವೋಚರ್‌ಗೆ 12 ತಿಂಗಳ ವ್ಯಾಲಿಟಿಡಿ ನೀಡಿದೆ. ಈ ಅವಧಿಯಲ್ಲಿ ವೋಚರ್ ಬಳಸಲು ಸಾಧ್ಯವಿದೆ. ಇನ್ನು ಯಾವುದೇ ಕ್ಲಾಸ್ ಟಿಕೆಟ್ ಬುಕಿಂಗ್ ವೇಳೆ ಈ ವೋಚರ್ ಬಳಸಲು ಅವಕಾಶ ನೀಡಲಾಗಿದೆ.

Source link
ಇಂಡಿಗೋ ಪ್ರಯಾಣಿಕರಿಗೆ 10 ಸಾವಿರ ರೂ ವೋಚರ್ ಆಫರ್, ಕ್ಲೈಮ್ ಮಾಡುವುದು ಹೇಗೆ?