ಹಾವೇರಿ, ಜನವರಿ 03: ಏಕಾಏಕಿ ಜೋರಾಗಿ ಬೀಸಿದ ಸುಂಟರಗಾಳಿಗೆ ಪೆಂಡಾಲ್ ಕುಸಿದಿದ್ದು, ಸಚಿವ ಸತೀಶ್ ಜಾರಕಿಹೊಳಿ ಕೂಡಲೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾದಂತಹ ಘಟನೆ ಜಿಲ್ಲೆಯ ರಾಣೆಬೆಟ್ಟಕ್ಕೆ ನಡೆದಿದೆ. ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಹಿನ್ನೆಲೆ ಪೆಂಡಾಲ್ ಹಾಕಲಾಯಿತು. ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಮುಗಿಸಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಿದ್ದರು. ಈ ವೇಳೆ ಬೀಸಿದ ಸುಂಟರಗಾಳಿಗೆ ಸತೀಶ್ ಜಾರಕಿಹೊಳಿ ಹಿಂದೆ ಇದ್ದ ಪೆಂಡಾಲ್ ಹಾರಿ ಬಿದ್ದಿದೆ. ಕೂಡಲೆ ಅಂತರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದರೆ, ಜಾರಕಿಹೊಳಿ ಸೇರಿದಂತೆ ಕ್ಷಣ ಕಾಲ ಎಲ್ಲರೂ ವಿಚಲಿತಗೊಂಡರು.
ವರದಿ: ಅಣ್ಣಪ್ಪ ಬಾರ್ಕಿ
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.