Bigg Boss Suraj Singh: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಭಾಗವಹಿಸಿದ್ದ ಸೂರಜ್ ಸಿಂಗ್ ಅವರು ಈಗ ಹೊರಗಡೆ ಬಂದಿದ್ದಾರೆ. ಹತ್ತು ವಾರಗಳ ಕಾಲ ದೊಡ್ಮನೆಯಲ್ಲಿದ್ದ ಸೂರಜ್ ಸಿಂಗ್ ಅವರಿಗೆ ಈಗ ಲಾಟರಿ ಸಿಕ್ಕಿದೆ.

ಹ್ಯಾಂಡ್ಸಮ್ ಹಂಕ್ ಸೂರಜ್ ಸಿಂಗ್ ಅವರು ಈ ಹಿಂದೆ ಎಚ್‌ಪಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಜಿಮ್ ಟ್ರೇನರ್ ಕೂಡ ಆಗಿದ್ದರು. ಒಟ್ಟಿನಲ್ಲಿ ಅವರು ಎರಡು ಉದ್ಯೋಗ ಮಾಡುತ್ತಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಮಾಡೆಲಿಂಗ್ ಫೋಟೋ, ವಿಡಿಯೋಗಳನ್ನು ಸೂರಜ್ ಸಿಂಗ್ ಅವರು ಹಂಚಿಕೊಳ್ಳುತ್ತಿದ್ದರು. ಈ ಜನಪ್ರಿಯತೆಯಿಂದಲೇ ಅವರು ದೊಡ್ಮನೆಗೆ ಹೋಗುವ ಅವಕಾಶ ಸಿಕ್ಕಿದೆ.

ಸೂರಜ್ ಸಿಂಗ್ ಅವರು ಈಗ ದೊಡ್ಮನೆಯಿಂದ ಹೊರಬಂದಿದ್ದು, ಮುಂದೆ ಜಿಮ್ ಟ್ರೇನರ್ ಆಗಿಯೂ ಕೆಲಸ ಮಾಡ್ತೀನಿ, ಅವಕಾಶ ಸಿಕ್ಕರೆ ಚಿತ್ರರಂಗಕ್ಕೆ ಬರ್ತೀನಿ ಎಂದು ಹೇಳಿದ್ದರು. ಇಂದು ಸೂರಜ್ ಎಲ್ಲೇ ಹೋದರೂ ಕೂಡ ನೂರಾರು ಜನರು ಸೇರುತ್ತಾರೆ, ಸೆಲ್ಫಿ ತಗೋತಾರಂತೆ. ಇದು ಅವರಿಗ ಮುಜುಗರ ತರುತ್ತಲಿದೆಯಂತೆ.

ಅಂದಹಾಗೆ ಸೋಶಿಯಲ್ ಮೀಡಿಯಾದಲ್ಲಿ ಸೂರಜ್ ಅವರಿಗೆ ಮದುವೆ ಪ್ರಪೋಸಲ್‌ಗಳು ಬರುತ್ತಿವೆಯಂತೆ. ದಾವಣಗೆರೆ ಕುಟುಂಬವೊಂದು ಮೈಸೂರಿನ ಮನೆಗೆ ಹುಡುಕಿಕೊಂಡು ಬಂದಿತ್ತಂತೆ. ಒಟ್ಟಿನಲ್ಲಿ ಸೂರಜ್ ಅವರು ಫುಲ್ ಡಿಮ್ಯಾಂಡ್‌ನಲ್ಲಿದ್ದಾರೆ.

ಸೂರಜ್ ಸಿಂಗ್ ಅವರಿಗೆ ಈಗ ಖಾಸಗಿ ವಾಹಿನಿಯಲ್ಲಿ ನಟಿಸುವ ಚಾನ್ಸ್ ಸಿಕ್ಕಿದೆ ಎನ್ನಲಾಗಿದೆ. ಧಾರಾವಾಹಿಯೊಂದಕ್ಕೆ ಅವರು ಹೀರೋ ಆಗಿದ್ದಾರಂತೆ. ಈ ಬಗ್ಗೆ ಸೂರಜ್ ಆಗಲೀ, ವಾಹಿನಿಯಾಗಲೀ ಪ್ರತಿಕ್ರಿಯೆ ನೀಡಿಲ್ಲ. ಸೂರಜ್ ಸಿಂಗ್ ಅವರು ಹೇಗೆ ನಟಿಸ್ತಾರೆ ಎಂದು ಕಾದು ನೋಡಬೇಕಿದೆ.

ಕಲರ್ಸ್ ಕನ್ನಡ ವಾಹಿನಿಯು ಸಾಮಾನ್ಯವಾಗಿ ಒಂದು ವರ್ಷಗಳ ಕಾಲ ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಒಪ್ಪಂದ ಮಾಡಿಕೊಳ್ಳುವುದು, ಆ ಒಪ್ಪಂದದ ಪ್ರಕಾರ ಅವರು ಬೇರೆ ವಾಹಿನಿಯಲ್ಲಿ ಕಾಣಿಸಿಕೊಳ್ಳುವಂತಿಲ್ಲ. ಹೀಗಾಗಿ ಸೂರಜ್ ಅವರು ಕಲರ್ಸ್‌ನಲ್ಲಿ ಸೀರಿಯಲ್ ಮಾಡಿದರೂ ಆಶ್ಚರ್ಯವಿಲ್ಲ. ಸೀರಿಯಲ್‌ನಲ್ಲಿ ನಟಿಸುತ್ತಿರುವ ಬಗ್ಗೆ ಸೂರಜ್ ಇನ್ನೂ ಏನೂ ಹೇಳಿಲ್ಲ.

Source link
Bigg Boss ಶೋನಿಂದ ಹೊರಬೀಳ್ತಿದ್ದಂತೆ ಲಾಟರಿ ಹೊಡೆದ ಸೂರಜ್ ಸಿಂಗ್; ಬಯಸದ ಭಾಗ್ಯದ ಬಾಗಿಲು ಒಪನ್ ಆಯ್ತು!