ಖ್ಯಾತ ನಟ ಆಶಿಶ್ ವಿದ್ಯಾರ್ಥಿ (ಆಶಿಶ್ ವಿದ್ಯಾರ್ಥಿ) ಅವರ ಅಭಿಮಾನಿಗಳಿಗೆ ಆತಂಕ ಆಗುವಂತಹ ಸುದ್ದಿ ಇತ್ತೀಚೆಗೆ ಕೇಳಿಬಂತು. ರಸ್ತೆ ದಾಟುವಾಗ ಆಶಿಷ್ ವಿದ್ಯಾರ್ಥಿ ಮತ್ತು ಅವರ ಪತ್ನಿ ರೂಪಾಲಿ ಅವರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಆ ಸುದ್ದಿ ಕೇಳಿದ ನಂತರ ಆಪ್ತರು ಮತ್ತು ಅಭಿಮಾನಿಗಳಿಗೆ ಬೇಸರವಾಗಿದೆ. ಬಳಿಕ ಆಶಿಶ್ ವಿದ್ಯಾರ್ಥಿ ಅವರು ಈ ರಸ್ತೆ ಅಪಘಾತದ (ರಸ್ತೆ ಅಪಘಾತ) ಬಗ್ಗೆ ಮಾಹಿತಿ. ತಮ್ಮಿಬ್ಬರ ಪರಿಸ್ಥಿತಿ ಹೇಗಿದೆ ಎಂದು ಅವರು ವಿವರಿಸಿದ್ದಾರೆ. ಇನ್ಸ್ಟಾಗ್ರಾಮ್ ಲೈವ್ ಮೂಲಕ ಅವರು ಸ್ಪಷ್ಟನೆ ನೀಡಿದ್ದಾರೆ. ಆಶಿಶ್ ವಿದ್ಯಾರ್ಥಿ ಪತ್ನಿ ರೂಪಾಲಿ (ರೂಪಾಲಿ) ಅವರಿಗೆ ಈಗ ಬಂದಿದೆ.
ಗುಹವಾಟಿಯಲ್ಲಿ ಈ ಅಪಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಡಿಕ್ಕಿ ಹೊಡೆದ ಬೈಕ್ ಸವಾರನಿಗೂ ಪೆಟ್ಟಾಗಿದ್ದರೆ, ಆತನನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಈ ಅಪಘಾತದಲ್ಲಿ ಯಾರಿಗೂ ಗಂಭೀರ ಗಾಯಗಳು ಆಗಿಲ್ಲ ಎಂದು ಆಶಿಶ್ ವಿದ್ಯಾರ್ಥಿ ಅವರು ಸ್ಪಷ್ಟಪಡಿಸಿದ್ದಾರೆ.
‘ನಾನು ಒಂದು ವಿಚಿತ್ರ ಸಂದರ್ಭದಲ್ಲಿ ಈ ಲೈವ್ ವಿಡಿಯೋ ಮಾಡುತ್ತಿದ್ದೇನೆ. ಅನೇಕ ನ್ಯೂಸ್ ಚಾನೆಲ್ಗಳಲ್ಲಿ ಏನೇನೋ ಬರುತ್ತಿದೆ. ಅದನ್ನು ನಾನು ನೋಡುತ್ತಿದ್ದೇನೆ. ನಾನು ಮತ್ತು ರೂಪಾಲಿ ನಿನ್ನೆ ರಸ್ತೆ ದಾಟುವಾಗ ಬೈಕ್ ಬಂದು ಡಿಕ್ಕಿ ಹೊಡೆಯಿತು. ಆದರೆ ನಾವೀಗ ಆರಾಮಾಗಿದ್ದೇವೆ. ರೂಪಾಲಿ ಅವರನ್ನು ನೋಡಿಕೊಳ್ಳಲಾಗುತ್ತಿದೆ. ಎಲ್ಲವೂ ಸರಿಯಾಗಿದೆ. ನಾನು ಕೂಡ ಕ್ಷೇಮವಾಗಿದ್ದೇನೆ. ಚಿಕ್ಕ ಗಾಯ ಅಷ್ಟೇ’ ಎಂದು ಆಶಿಷ್ ವಿದ್ಯಾರ್ಥಿ ಹೇಳಿದ್ದಾರೆ.
‘ನಮಗೆ ಅಪಘಾತ ಆಗಿದ್ದು ನಿಜ. ಆದರೆ ಅದನ್ನು ವೈಭವೀಕರಿಸುವ ಅಗತ್ಯ ಇಲ್ಲ. ಬೈಕ್ ಓಡಿಸುತ್ತಿದ್ದವನ ಬಗ್ಗೆಯೂ ನಾನು ಪೊಲೀಸರಿಂದ ಮಾಹಿತಿ ಪಡೆದಿದ್ದೇನೆ. ಆತನಿಗೂ ಈಗ ಬಂದಿದೆ. ಎಲ್ಲರಿಗೂ ಒಳ್ಳೆಯದಾಗಲಿ. ಎಲ್ಲವೂ ಸರಿಯಾಗಿರಲಿ. ನಿಮಗೆಲ್ಲ ಇದನ್ನೇ ಹೇಳುತ್ತೇನೆ. ನಾನು ಕಾಳಜಿ ವಹಿಸಿದೆ’ ಆಶಿಶ್ ವಿದ್ಯಾರ್ಥಿ.
ಇದನ್ನೂ ಓದಿ: ಖುಷಿ ಇಲ್ಲದೇ ಸಾಯಬೇಕಾ? 57ನೇ ವಯಸ್ಸಿನಲ್ಲಿ ಮದುವೆ ಆಗಿದ್ದಕ್ಕೆ ಟ್ರೋಲ್ ಮಾಡಿದವರಿಗೆ ಆಶಿಷ್ ವಿದ್ಯಾರ್ಥಿ ಪ್ರಶ್ನೆ
ಆಶಿಶ್ ವಿದ್ಯಾರ್ಥಿ ಅವರು ಬಹುಭಾಷಾ ನಟ. ಬಾಲಿವುಡ್ ಮತ್ತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳನ್ನು ಒಪ್ಪಿಕೊಳ್ಳುವುದು ಕಡಿಮೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ನಿತ್ಯವೂ ಸುತ್ತುತ್ತ, ಎಲ್ಲ ಕಡೆ ಆಹಾರ ಸವಿಯುತ್ತಾ ಬದುಕನ್ನು ಅವರು ಎಂಜಾಯ್ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.