ಕೊಪ್ಪಳ, ಜನವರಿ 04: ಕೊಪ್ಪಳದ ಮುಸ್ಲಿಂ ವ್ಯಕ್ತಿಯ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಪೂಜೆ ನೆರವೇರಿಸಿದ್ದಾರೆ. ಕನಕಗಿರಿ ನಗರದ ಐದನೇ ವಾರ್ಡ್ ನಿವಾಸಿ ಶ್ಯಾಮೀದ್ ಸಾಬ್ ಗುರಿಕಾರ್, ತಮ್ಮ ನೂತನ ಮನೆ ನಿರ್ಮಿಸಿದ ನಂತರ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಬೇಕೆಂಬುದು ಶ್ಯಾಮೀದ್ ಅವರ ಬಹುದಿನಗಳ ಆಸೆಯಾಗಿತ್ತು. ಜನವರಿ ಒಂದರಂದು ತಮ್ಮ ಮನೆಯ ಗೃಹಪ್ರವೇಶ ನೆರವೇರಿಸಿದ ಬಳಿಕ, ಜನವರಿ ಮೂರರಂದು ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಅಯ್ಯಪ್ಪ ಸ್ವಾಮಿ ಸೇವೆ ಸಲ್ಲಿಸುವ ತಮ್ಮ ಹಂಬಲ ಇರುವುದಕ್ಕೆ ಶ್ಯಾಮೀದ್ ಸಾಬ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಇವರ ಈ ಕಾರ್ಯ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.
ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.