ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು

ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸರ್ಕಾರದ ಸ್ಪಷ್ಟನೆ ಇದು


ಜನವರಿ 4: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 500 ರೂ ನೋಟುಗಳ ಚಲಾವಣೆ ಕಡಿಮೆ ಮಾಡುತ್ತದೆ. ಮುಂಬರುವ ದಿನಗಳಲ್ಲಿ ಎಟಿಎಂಗಳಲ್ಲಿ 500 ರೂ ನೋಟುಗಳು ಸಿಕ್ಕೋದಿಲ್ಲ ಎಂದು ತಿಳಿಸುತ್ತಿರುವ ಕೆಲವು ಪೋಸ್ಟ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸರ್ಕಾರ 500 ರೂ ನೋಟುಗಳ ಮುದ್ರಣವನ್ನು ನಿಲ್ಲಿಸಿ, 100 ರೂ ನೋಟುಗಳ ಚಲಾವಣೆ ಮಾತ್ರ ಮುಂದುವರಿಸಬಹುದು ಎಂಬಂತಹ ಸುದ್ದಿಗಳು ಕೆಲವು ತಿಂಗಳ ಹಿಂದೆ ಹರಿದಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿಗಳು ಸರ್ಕಾರಗಳಲ್ಲಿದೆ. ಇವು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದೆ.

ಸರ್ಕಾರದ ಪಿಐಬಿ ಇಲಾಖೆಯ ಫ್ಯಾಕ್ಟ್ ಚೆಕಿಂಗ್ ಘಟಕವು ಎಕ್ಸ್‌ನಲ್ಲಿ ಈ ಬಗ್ಗೆ ಟ್ವೀಟ್ ಮಾಡಿದೆ. ಎಟಿಎಂಗಳಲ್ಲಿ 500 ರೂ ನೋಟುಗಳ ವಿತರಣೆ ನಿಲ್ಲಿಸಲು ಎನ್ನುವುದೆಲ್ಲಾ ಸುಳ್ಳು. ಆರ್ ಬಿಐ ಇಂಥ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಿಐಬಿ ಫ್ಯಾಕ್ಟ್ ಚೆಕ್ ತಂಡದ ಟ್ವೀಟ್

ಇದನ್ನೂ ಓದಿ: ಫೆಬ್ರುವರಿ 1, ಭಾನುವಾರ; ಅಂದೆ ಕೇಂದ್ರ ಬಜೆಟ್ ಮಂಡನೆ ಆಗುತ್ತಾ?

‘500 ರೂ ನೋಟುಗಳು ಚಲಾವಣೆಯಲ್ಲಿ ಮುಂದುವರಿಯುತ್ತವೆ. ಎಲ್ಲಾ ರೀತಿಯ ವಹಿವಾಟುಗಳಲ್ಲಿ ಅದನ್ನು ಮುಕ್ತವಾಗಿ ಬಳಸಬಹುದು. ಇಂತಹ ಸುದ್ದಿಗಳನ್ನು ನಂಬುವ ಮುನ್ನ ಆ ಮಾಹಿತಿ ಅಧಿಕೃತ ಮೂಲಗಳಿಂದ ಬಂದಿದೆಯಾ ಎಂದು ಪಿಐಬಿ ತನ್ನ ಟ್ವೀಟ್ ನಲ್ಲಿ ಜನರನ್ನು ಪ್ರಕಟಿಸಿದೆ.

ಕೆಲ ತಿಂಗಳ 500 ರೂ ನೋಟುಗಳನ್ನು ಅಮಾನ್ಯ ಮಾಡುವುದಾಗಿದೆ ಎಂಬ ಸುದ್ದಿಯೂ ಇತ್ತು. ಆಗಲೂ ಕೂಡ ಸರ್ಕಾರದ ವತಿಯಿಂದ ಹಲವು ಬಾರಿ ಸ್ಪಷ್ಟನೆ ನೀಡಿ, ಅದು ಸುಳ್ಳು ಸುದ್ದಿ ಎಂದು ತಿಳಿಸಲಾಯಿತು. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಕೂಡ ಕೆಲ ತಿಂಗಳ ಹಿಂದೆ ಸಂಸತ್‌ನಲ್ಲಿ ಈ ವಿಚಾರವಾಗಿ ಮಾತನಾಡಿ, 500 ರೂ ನೋಟುಗಳನ್ನು ಅಮಾನ್ಯ ಮಾಡಲಾಗಲಿಲ್ಲ. ಎಟಿಎಂಗಳಲ್ಲಿ 100 ರೂ, 200 ರೂಗಳಂತೆ 500 ರೂ ನೋಟುಗಳನ್ನು ವಿತರಿಸಲಾಗುವುದು ಎಂದಿದ್ದರು.

ಇದನ್ನೂ ಓದಿ: ಆಧಾರ್ ಜೊತೆ ಪಾನ್ ಲಿಂಕ್ ಮಾಡಲು ಡೆಡ್ಲೈನ್ ​​ಮುಗೀತು? ಮತ್ತೆ ಲಿಂಕ್ ಮಾಡಬಹುದಾ? ಮುಂದೇನಾಗಬಹುದೇ?

ದರೂ ಕೂಡ ಕೆಲ ಕಿಡಿಕೇಡಿಗಳು ಸೋಶಿಯಲ್ ಮೀಡಿಯಾದಲ್ಲಿ ಇಂತಹ ಪೋಸ್ಟ್‌ಗಳನ್ನು ಹಾಕುವುದು ಮುಂದುವರಿದಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ





Source link

Leave a Reply

Your email address will not be published. Required fields are marked *