Headlines

ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು

ಎರಡೂ ಏರಿಯಾ ಮಧ್ಯೆ ಗೋಡೆ ನಿರ್ಮಿಸಿ: ಅನ್ಯಕೋಮಿನವರ ಕಿರುಕುಳಕ್ಕೆ ರೋಸಿ ಹೋದ ಹಿಂದೂಗಳು


ಬೆಂಗಳೂರು, (ಜನವರಿ 04): ಹಿಂದೂ ದೇವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡದ ಘಟನೆ ಬೆಂಗಳೂರಿನ ಜೆ ಜೆ ಆರ್ ನಗರದ ವಿಎಸ್ ಗಾರ್ಡನ್ ನ ಓಮ್ ಶಕ್ತಿ ದೇವಸ್ಥಾನದ ಬಳಿ ನಡೆದಿದೆ. ಓಮ್ ಶಕ್ತಿ ಮಾಲಾಧಾರಿಗಳು ದೇವಿಯ ತೇರು ಎಳೆಯತ್ತಿರುವ ವೇಳೆ ಕಲ್ಲೆಸತ ನಡೆದಿದೆ. ತೇರಿಗೆ ಅನ್ಯಕೋಮಿನವರು ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಲ್ಲೇಟಿಗೆ ಶಕ್ತಿ ಮಾಲಾಧಾರಿ ಮಗು ತೊಂದರೆಗೆ ಒಳಗಾಗಿದ್ದಾರೆ. ಹಿಂದೂ ದೇವರ ಉತ್ಸವದ ವೇಳೆ ಕಲ್ಲೆಸೆತಕ್ಕೆ ಹಿಂದೂ ಸಂಘಟನೆಗಳು ಕೆರಳಿದ್ದು, ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿವೆ. ಈ ಸಂಬಂಧ ಸ್ಥಳೀಯರು ಹೇಳಿದ್ದಾರೆ, ಸ್ಥಳೀಯ ಅನ್ಯಮಿನ ಜನರ ಕಾಟಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ: ಒಮ್ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

ನಮ್ಮ ಏರಿಯಾದಲ್ಲಿ ಪ್ರತಿದಿನವೂ ಇಂತಹ ಸಮಸ್ಯೆ ಎದುರಿಸುತ್ತಿದ್ದೇವೆ. ದಿನ ಪ್ರತಿ ಭಯದಲ್ಲೇ ಜೀವನ ನಡೆಸುತ್ತಿದ್ದರು. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು. ನಮ್ಮ ಹೆಣ್ಣುಮಕ್ಕಳು ರಸ್ತೆಯಲ್ಲಿ ಕಷ್ಟಕರವಾಗಿದ್ದು, ರಸ್ತೆಯಲ್ಲಿ ಮಹಿಳೆಯರು, ಮಕ್ಕಳ ಮೈಮೇಲೆಯೇ ಬೀಳುತ್ತಾರೆ. ಪ್ರತಿರೋಧ ವ್ಯಕ್ತಪಡಿಸಿದವರನ್ನು ಗುರಿಯಾಗಿಸಿ ತೊಂದರೆ ಕೊಡುತ್ತಾರೆ. ನಾವು ಇಲ್ಲಿ ನೆಮ್ಮದಿಯಾಗಿ ಇರಲು ಸರ್ಕಾರ ರಕ್ಷಣೆ ನೀಡಲಿ ಎಂದು ಜೆ.ಜೆ.ನಗರ ಪೊಲೀಸ್ ಠಾಣೆ ಎದುರು ಸ್ಥಳೀಯ ನಿವಾಸಿಗಳ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *