Horoscope Today 05 January: ಇಂದು ಈ ರಾಶಿಯವರಿಗೆ ಹಳೆಯ ನೆನಪುಗಳು ಕಾಡುವುದು

Horoscope Today 05 January: ಇಂದು ಈ ರಾಶಿಯವರಿಗೆ ಹಳೆಯ ನೆನಪುಗಳು ಕಾಡುವುದು


ಮೇಷ ರಾಶಿ:

ಇಂದು ನೀವು ಎಲ್ಲರ ಮಾತಿನಿಂದ ಗೆಲ್ಲಿರಿ. ನಿಮ್ಮ ನೌಕರರು ಹೋಗುತ್ತಾರೆ. ಎದರುರಾಗು ಅಡ್ಡಿ, ಆತಂಕಗಳನ್ನು ನೀವು ಅನಾಯಾಸವಾಗಿ ದೂರ ಸರಿಸಿರಿ. ನಿಮ್ಮ ಇಂದಿನ ಶ್ರಮಕ್ಕೆ ತಕ್ಕುದಾದ ಫಲವು ಸಿಗಬಹುದು. ಭೂಮಿಯ ವ್ಯಾಪಾರದಲ್ಲಿ ಜಯ ಪ್ರದರ್ಶನ. ಇಂದು ಸರ್ಕಾರಿ ಕೆಲಸಕ್ಕೆ ಓಡಾಟ ಮಾಡುವಿರಿ. ಕುಲದೇವರ ಆರಾಧನೆಯನ್ನು ನೀವು ಮಾಡುವಿರಿ. ನಿಮಗೆ ಕೆಲಸದಲ್ಲಿ ಅನೇಕ ಗೊಂದಲಗಳು ಇರಬಹುದು. ಕುಟುಂಬದ ಹೊಣೆಗಾರಿಕೆಯನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಅಕ್ರಮ ಕೆಲಸಗಳು ಎಲ್ಲರಿಗೂ ತಿಳಿಯಬಹುದು. ಹಳೆಯ ನೆನಪುಗಳು ನಿಮ್ಮನ್ನು ಕಾಡುವುದು. ಅದೃಷ್ಟವನ್ನು ಮಾತ್ರ ನಂಬಿ ಕೆಲಸವನ್ನು ಮಾಡಬೇಡಿ. ವಿಪತ್ತು ಬಂದಾಗ ಸ್ನೇಹಿತರು ದೂರವಾಗಬಹುದು.

ವೃಷಭ ರಾಶಿ:

ನಿಮ್ಮ ಇಂದಿನ ವರ್ತನೆಯನ್ನು ಕುಟುಂಬವು ಸಹಿಸುವುದು ಕಷ್ಟವಾಗಬಹುದು. ಅಮೂಲ್ಯ ವಸ್ತುವಿನ ಲಾಭದಿಂದ ಸಂತಸ ವಸ್ತು. ಅಪರಿಚಿತರ ಜೊತೆ ವೃಥಾ ಕಲಹವಾಗಬಹುದು. ಮಕ್ಕಳ ವಿದ್ಯಾಭ್ಯಾಸದ ಚಿಂತೆ ಇರಲಿದೆ. ವಾಹನದ ಖರೀದಿಗೆ ಬೆಂಬಲ ಸಿಗಬಹುದು. ನಿಮ್ಮ ಕೆಲಸಕ್ಕೆ ಅಧಿಕಾರಿಗಳು ಪ್ರಶಂಸಿಸುತ್ತಾರೆ. ಬಹಳ ದಿನಗಳಿಂದ ನಡೆಯುತ್ತಿದ್ದ ನ್ಯಾಯಾಲಯದ ವ್ಯವಹಾರವನ್ನು ಮುಕ್ತಾಯ ಮಾಡಿಕೊಳ್ಳುವಿರಿ. ಮಿತ್ರರೆಂದು ಹೇಳಿಕೊಂಡು ಯಾರಾದರೂ ಬರಬಹುದು. ನಿಮ್ಮ ಜಾಗರೂಕತೆಯಲ್ಲಿ ನೀವಿರಿ. ಕುಟುಂಬದ ಸ್ಥಿರಾಸ್ತಿಯನ್ನು ಪಡೆಯಲು ಪ್ರೇರಣೆ ಪಡೆಯಿರಿ. ಪರೋಪಕಾರಕ್ಕೆ ಸಮಯವನ್ನು ಕೊಡುವಿರಿ. ಅತಿಯಾದ ವೇಗದಲ್ಲಿ ವಾಹನ ಚಾಲನೆ ಬೇಡ.

ಮಿಥುನ ರಾಶಿ:

ಇಂದಿನ ಕಾರ್ಯಗಳಲ್ಲಿ ತೊಂದರೆಗಳು ಎದ್ದು ಕಾಣುವುದು. ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ತೀರ್ಥಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ನಿಮ್ಮ ಅಭಿಪ್ರಾಯವನ್ನು ಹೇಳಬೇಕಾದ ರೀತಿಯಲ್ಲಿ ಹೇಳಿ. ಸಾಹಸ ಕಾರ್ಯಗಳನ್ನು ಮಾಡಲು ನಿಮಗೆ ಉತ್ಸಾಹವು ಬರಬಹುದು. ನೀವು ಮಾಡಲು ಹೊರಟ ಕೆಲಸಕ್ಕೆ ಶುಭಸೂಚನೆಯು ಸಿಗುವುದು. ನಿಮ್ಮ ಆಲೋಚನೆಯ ದಿಕ್ಕು ಬದಲಾಗಬಹುದು. ದ್ವೇಷವನ್ನು ಮುಂದುವರಿಸಿ ಮನಸ್ಸನ್ನು ಹಾಳು ಮಾಡಿಕೊಳ್ಳಬೇಕಾದೀತು. ಅಪರೂಪದ ಬಂಧುಗಳ ಆಗಮನವು ನಿಮಗೆ ಕಷ್ಟವಾದೀತು. ಆದ್ಯತೆಗಳು ಬದಲಾಗಬಹುದು. ಗೊಂದಲವನ್ನು ಇತರರ ಬಳಿ ಹೇಳಿ.

ಕರ್ಕಾಟಕ ರಾಶಿ:

ನಿಮ್ಮವರು ನೀವಿಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವರು. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯವು ಅರಿವಿಗೆ ಬರಬಹುದು. ಬೇಡದ ಆಲೋಚನೆಯನ್ನು ದೂರಮಾಡಿಕೊಳ್ಳಿ. ಪ್ರೇಮಕ್ಕಾಗಿ ಹೆಚ್ಚು ಖರ್ಚನ್ನು ಮಾಡಬೇಕಾದೀತು. ಹಿತಶತ್ರುಗಳ ಬಗ್ಗೆ ನಿಮ್ಮ ಊಹೆಯು ಸುಳ್ಳಾಗಬಹುದು. ಆರೋಗ್ಯವು ಬಡವಂತೆ ತೋರುವುದು. ಉದ್ಯೋಗವನ್ನು ಬಿಡುವ ಸಂದರ್ಭವೂ ಬರಬಹುದು. ಮನೋ ವ್ಯಥೆಯನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸೋಲಬೇಕಾಗುವುದು. ಸೋಲನ್ನು ಒಪ್ಪಿಕೊಳ್ಳುವ ಮಾನಸಿಕ ಸ್ಥಿತಿಯು ಇಂದು ಇಲ್ಲವಾಗುವುದು. ಇಂದು ನಿಮಗೆ ಭಯವು ಕಾಡಬಹುದು.

ಸಿಂಹ ರಾಶಿ:

ಇಂದಿನ ನಿಮ್ಮ ಕೆಲಸಗಳು ಬಹಳ ವಿಳಂಬವಾಗುತ್ತಿವೆ. ನೀವು ಹೇಳಿದ ಕೆಲಸವೂ ವೇಗವಾಗಿ ಮುಗಿಯದು. ಸಂತೋಷ ಬೇಸರವಾಗಬಾರದೆಂದು ಅವರ ಜೊತೆ ಸಮಸ್ಯೆ ಕಳೆಯುವಿರಿ. ನಿಮ್ಮ ಪಕ್ಷಪಾತವು ನೌಕರರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದಾಂಪತ್ಯದಲ್ಲಿನ ವೈಮನಸ್ಯವು ನಿಮ್ಮ ಮಾತಿನಿಂದ ಸಡಿಲವಾದೀತು. ನಿಮಗೆ ಅಧಿಕಾರಿಗಳು ತೊಂದರೆ ಕೊಡಬಹುದು. ನಿಮ್ಮ ಬಳಿ ಇರುವ ವಸ್ತುಗಳನ್ನು ನಿಮ್ಮ ಕಾರ್ಯವನ್ನು ಪೂರೈಸಿಕೊಳ್ಳಿ. ಹೊಸ ವಸ್ತುವಿಗೆ ಧನವನ್ನು ವ್ಯಯಮಾಡುವುದು ಬೇಡ. ಸ್ನೇಹಸಂಧಾನವು ವಿಫಲವಾಗಿದೆ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು.

ಕನ್ಯಾ ರಾಶಿ:

ಬೇಡದ ವಸ್ತುಗಳನ್ನು ನೀವು ಇತರರಿಗೆ ದಾನವಾಗಿ ಕೊಡುವಿರಿ. ರಾಜಕೀಯ ಮುಖಂಡರ ಜೊತೆ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ದುರ್ಜನರ ಸಹವಾಸದಿಂದ ನಿಮಗೆ ಅಪವಾದವು ಬರಬಹುದು. ಕೆಲಸಗಳಲ್ಲಿ ನೀವು ಜಯವನ್ನು ಸಾಧಿಸಬಹುದು. ಸಂಗಾತಿಯ ಮೇಲೆ ಯಾರದೋ ಕಾರಣಕ್ಕೆ ಮುನಿಸಿಕೊಳ್ಳುವಿರಿ. ಪೋಷಕರ ಜೊತೆ ನಿಮ್ಮ ವರ್ತನೆಯು ಆಪ್ತವಾಗಿ ಇರಲಿದೆ. ಆರಂಭಗಳಿಗೆ ಸ್ನೇಹಿತರ ಜೊತೆ ಭೇಟಿ ಕೊಡುವಿರಿ. ವಿರೋಧಿಗಳಿಗೆ ನಿಮ್ಮ ಬಲವನ್ನು ತೋರಿಸುತ್ತದೆ. ನಿಮ್ಮದಲ್ಲದ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುವಿರಿ. ಸ್ನೇಹಿತರಿಂದ ಉದ್ಯೋಗವನ್ನು ನೀವು ನಿರೀಕ್ಷಿಸುವಿರಿ. ಸ್ತ್ರೀಯರ ಮಾತಿನ ಮೇಲೆ ನಿಮಗೆ ನಂಬಿಕರ ಹೋಗಬಹುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆ ಸಿಗುತ್ತದೆ.

ತುಲಾ ರಾಶಿ:

ಅಧ್ಯಯನಕ್ಕೆ ಉತ್ತಮ ಸ್ಥಾನವು ಸಿಗಲಿದೆ. ನಿಮ್ಮ ಬಗ್ಗೆ ಪ್ರೀತಿಯುಳ್ಳವರು ನಿಮ್ಮನ್ನು ಹರಸುವರು. ಹಣಕಾಸಿನ ವಿಚಾರಕ್ಕೆ ಅಪವಾದ ಬರಬಹುದು. ಸಂಗಾತಿಯ ಮಾತಿಗೆ ನೀವು ಉತ್ತರಿಸಲಾರಿರಿ. ನಿಮ್ಮ ಲಾಭಾಂಶದ ಭಾಗವನ್ನು ನೀವು ದಾನ ಮಾಡುತ್ತೀರಿ. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ಆರ್ಥಿಕತೆಯು ನಿಮಗೆ ನೆಮ್ಮದಿಯನ್ನು ಕೊಟ್ಟಿತು. ನಿಮ್ಮ ಒಳಗುಟ್ಟನ್ನು ಯಾರ ಮುಂದೂ ಬಿಚ್ಚಿಡುವುದು ಬೇಡ. ನಿಮ್ಮ ಮಾತಿನಿಂದ ನೀವು ಹಗುರಾಗುವಿರಿ. ದಿನದ ಕೆಲವು ಸಮಯದಲ್ಲಿ ನಿಮಗೆ ಉತ್ತಮ ಜೀವನದ ಸೂಚನೆ ಸಿಗಲಿದೆ.

ವೃಶ್ಚಿಕ ರಾಶಿ:

ನಿಮಗೆ ಗೌರವಕ್ಕೆ ತೊಂದರೆ ಆಗಬಹುದು. ಇದರಿಂದ ಸಿಟ್ಟುಗೊಳ್ಳುವಿರಿ. ಆರೋಗ್ಯವು ಕೆಡಲಿದೆ ಹತ್ತಾರು ಆಲೋಚನೆಗಳು ಬರಬಹುದು. ನಿಮ್ಮನ್ನು ಭಾವನಾತ್ಮಕವಾಗಿ ಕಟ್ಟಿಹಾಕಬಹುದು. ದೂರದಲ್ಲಿರುವ ನಿಮ್ಮ ಮಕ್ಕಳ ಬಗ್ಗೆ ಚಿಂತೆ ಮಾಡುವುದು. ನೀವು ಇಂದು ವಿದ್ಯುತ್ ಉಪಕರಣದ ಮಾರಟಗಾರರಾಯಿದ್ದರೆ ಅಧಿಕ ಲಾಭವು ಸಿಗುತ್ತದೆ. ಸಾರ್ವಜನಿಕವಾಗಿ ಹೆಚ್ಚು ಪ್ರಭಾವ ಉಳ್ಳವರಾಗಿದ್ದರೆ ಗೌರವವು ಸಿಗಲಿದೆ. ಸಹೋದ್ಯೋಗಿಗಳು ನಿಮ್ಮ ಮೇಲಿನ ಒತ್ತಡವನ್ನು ಹೇಳಬಹುದು. ಬೇಡವೆಂದ ಕಾರ್ಯವನ್ನು ಹಠದಿಂದ ಮಾಡುವಿರಿ. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ. ನಾಯಕರಾಗುವ ಸಾಧ್ಯತೆ ಇದೆ.

ಧನು ರಾಶಿ:

ಗೆಳತಿಯ ಜೊತೆ ಆತ್ಮೀಯ ಒಡನಾಟವನ್ನು ಇಟ್ಟುಕೊಳ್ಳುವಿರಿ. ಮನೆಯಲ್ಲಿ ಆಸ್ತಿಯ ವಿಚಾರವಾಗಿ ಸಣ್ಣ ಬಿರುಸಿನ ಮಾತುಗಳು ಕೇಳಿಬರಬಹುದು. ಮೇಲಧಿಕಾರಿಗಳು ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ಮೇಲೆ ಪಿತೂರಿ ಮಾಡಿದ ಅನುಮಾನ ಇರಲಿದೆ. ಮನಸ್ಸಿನ ದುಗುಡವನ್ನು ಶಾಂತಗೊಳಿಸಿಕೊಳ್ಳಿ. ನಿಮ್ಮ ವಿಚಾರವನ್ನು ನೀವು ಗುಪ್ತವಾಗಿ ತಿಳಿದುಕೊಳ್ಳಿ. ನಿಮ್ಮ ಕಾರ್ಯದಲ್ಲಿ ಉದ್ದೇಶವು ಸ್ಪಷ್ಟವಾಗಿ ಇರಲಿ. ಕೆಲಸವು ಪೂರ್ಣವಾಗದೇ ಒದ್ದಾಡಿಕೊಂಡು ಇಂದಿನ ಕೆಲಸವನ್ನು ಮಾಡುತ್ತೀರಿ. ಸಂಗಾತಿಯ ಕೋಪವನ್ನು ನೀವು ಕಡಿಮೆ ಮಾಡುತ್ತೀರಿ. ಉಪಕರಿಸಿದವರ ಮೇಲೆ ನಿಮಗೆ ಸ್ಮರಣೆ ಇರಲಿ. ಮನೆಯ ಕೆಲಸವನ್ನು ಮಾಡಲು ಉತ್ಸಾಹವೇ ಇರದು. ಸಣ್ಣ ಪಾಲು ಕೈತಪ್ಪಬಹುದು. ಬೆಲೆಬಾಳುವ ವಸ್ತುಗಳನ್ನು ಖರೀದಿಸಿ.

ಮಕರ ರಾಶಿ:

ಆಕಸ್ಮಿಕ ಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಕಾದಷ್ಟು ಮಾತ್ರ ಮಾತುಗಳನ್ನಾಡಿ. ಅತಿಥಿಗಳ ಆಗಮನದಿಂದ ಸಂತೋಷವಾಗುವುದು. ಸಂಗಾತಿಯ ಜೊತೆ ಆರ್ಥಿಕ ವಿಚಾರಕ್ಕೆ ಕಲಹ ಮಾಡಿಕೊಳ್ಳುವಿರಿ. ನಿಮ್ಮ ಚಂಚಲವಾದ ಸ್ವಭಾವವನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಕಷ್ಟವಾದೀತು. ತಪ್ಪು ಮಾಡದಿರುವ ವಿಚಾರಕ್ಕೆ ಕ್ಷಮೆ ಕೇಳಬೇಕಾದೀತು. ಹಿರಿಯರ ಮಾತಿಗೆ ಬೆಲೆ ಇರಲಿ. ಸ್ನೇಹದಿಂದ ಪ್ರೇಮವು ಉಂಟಾಗಲಿದೆ. ಆದಾಯಕ್ಕೆ ಹೊಸ ಯೋಜನೆ ರೂಪಿಸಿ. ಕಷ್ಟವೆಂದುಕೊಂಡ ಕಾರ್ಯವು ಗೊತ್ತಾಗದೇ ಮುಗಿದುಹೋದೀತು. ಬೇಕಾದಷ್ಟು ಕೆಲಸಗಳಿದ್ದರೂ ನೀವು ಯಾರ ಬಳಿಯೂ ಹೇಳಿಕೊಳ್ಳುವುದಿಲ್ಲ.

ಕುಂಭ ರಾಶಿ:

ಕಾಸು ಇದ್ದಷ್ಟು ಕಾಲು ಚಾಚು. ಇಂದು ಕುಟುಂಬದಲ್ಲಿ ಆತಂಕವು ಇರಲಿದೆ ದೈವದ ಮೊರೆ ಹೋಗುವಿರಿ. ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ಸಿಗುವುದು. ನೀವು ಇಂದು ಮಾನಸಿಕವಾಗಿ ಕುಗ್ಗುವಿರಿ. ಯಾರ ಸಮಾಧಾನವೂ ನಿಮಗೆ ಸಾಂತ್ವನವನ್ನು ನೀಡದು. ನಿಮ್ಮ ಇಂದಿನ ಕಾರ್ಯದಲ್ಲಿ ಸಾವಧಾನತೆ ಇರಲಿದೆ. ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನ ಮಾಡುವಿರಿ. ನಿಜವಾದ ಯಶಸ್ಸಿಗೆ ಅಡ್ಡದಾರಿಯನ್ನು ಹುಡುಕಿ ಪ್ರಯೋಜನವಾಗದು. ಹಣಕಾಸಿನ ವಿಚಾರದಲ್ಲಿ ಬಹಳ ತೊಂದರೆಯಲ್ಲಿ ಸಿಕ್ಕಿಕೊಂಡಿರಿ. ವಿನಾಕಾರಣ ಕಾಲಹರಣ ಮಾಡಲಿದೆ ಕಛೇರಿಯ ಕೆಲಸದ ಬಗ್ಗೆಯೇ ಚಿಂತೆ ಇರದು. ಮಾರಾಟದ ವಿಚಾರವಾಗಿ ನೀವು ಬೇರೆಯವರಿಗೆ ಹೋಗಬೇಕಾಗಬಹುದು.

ಮೀನ ರಾಶಿ:

ಕೃಷಿಗೆ ಸಂಬಂಧಿಸಿದ ಚಟುವಟಿಕೆ ಬಹಳ ವೇಗದ ರೂಪದಲ್ಲಿ ನಡೆಯಬಹುದು. ನಿಮ್ಮ ಮಾತುಗಳಿಗೆ ತೂಕವು ಕಡಿಮೆ ಆಗಬಹುದು. ಸ್ಥಾನಕ್ಕಾಗಿ ನೀವು ಎದುರುನೋಡುತ್ತಿದ್ದರೆ ನಿಮಗೆ ಅದು ಸಿಗಬಹುದು. ಇಂದು ನಿಮ್ಮಲ್ಲಿ ಕ್ರೀಡಾ ಮನೋಭಾವವು ಇರುತ್ತದೆ. ವಾಹನ ಚಾಲನೆಯನ್ನು ಎಚ್ಚರಿಕೆಯಿಂದ ಮಾಡಿ. ಆತ್ಮವಿಶ್ವಾಸವನ್ನು ಕಳೆದುಕೊಳ್ಳದೇ ಮುಂದಡಿ ಇಡುವಿರಿ. ನಿಮ್ಮ ಇಷ್ಟಪಟ್ಟವರ ಜೊತೆ ಸಮಯ ಕಳೆಯುವಿರಿ. ನಿಮ್ಮ ನಿರ್ಧಾರವನ್ನು ಮಕ್ಕಳು ಒಪ್ಪದೇ ಇರುವುದು ನಿಮಗೆ ಕೋಪ ಬರಬಹುದು. ಸೌಂದರ್ಯದ ವಿಚಾರದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ. ನೀವು ಇಂದು ಪ್ರೀತಿಯನ್ನು ಹೇಳಿಕೊಳ್ಳಿ. ಯಾವುದನ್ನಾದರೂ ಪೂರ್ಣ ಮನಸ್ಸಿನಿಂದ ಮಾಡಿ. ಬಹಳ ದಿನಗಳ ಅನಂತರ ಕುಟುಂಬದ ಜೊತೆ ದೂರ ಪ್ರಯಾಣ.

ಜನವರಿ 05, 2026ರ ಪಂಚಾಂಗ:

ಶಾಲಿವಾಹನ ಶಕೆ 1448 ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಕಾರ್ಯಕ್ರಮ : ಹೇಮಂತ, ಚಾಂದ್ರ ಮಾಸ : ಪೌಷ, ಸೌರ ಮಾಸ : ಧನು, ಮಹಾನಕ್ಷತ್ರ : ಶ್ರವಣ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಪ್ರತಿಪತ್ ನಿತ್ಯನಕ್ಷತ್ರ : ಪುನರ್ವಸು ಯೋಗ : ಸೌಭಾಗ್ಯ, ಕರಣ : ಕೌಲವ, ೬೦ – ೮ – ಸೂರ್ಯ ೫ – ೮ – ಸೂರ್ಯ. pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 08-16 – 09:41, ಯಮಗಂಡ ಕಾಲ 11:05 – 12:30, ಗುಳಿಕ ಕಾಲ 13:54 – 15:19

-ಲೋಹಿತ ಹೆಬ್ಬಾರ್ – 8762924271 (What’s app ಮಾತ್ರ)



Source link

Leave a Reply

Your email address will not be published. Required fields are marked *