ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ಅವರು ಹೊಂದಿರುವ ಮಲ್ಟಿಪ್ಲೆಕ್ಸ್ ಚೈನ್. ‘ಅಲ್ಲು ಸಿನಿಮಾಸ್’ ಅನ್ನೋದು ಇದರ ಹೆಸರು. ಹೈದರಾಬಾದ್ನಲ್ಲಿ ಇದು ತನ್ನ ಶಾಖೆಯನ್ನು ಹೊಂದಿದೆ. ಅರ್ಜುನ್ ಈ ಮಲ್ಟಿಪ್ಲೆಕ್ಸ್ ಚೈನ್ ಅನ್ನು ವಿಸ್ತರಿಸುವ ಪ್ರಯತ್ನದಲ್ಲಿ ಅಲ್ಲ. ಈಗ ಅವರು ಹೈದರಾಬಾದ್ ಹೊರವಲಯದಲ್ಲಿರುವ ಕೋಕಾಪೇಟ್ನಲ್ಲಿ ಹೊಸ ಥಿಯೇಟರ್ ಕಟ್ಟಿದ್ದಾರೆ. ಸಂಕ್ರಾಂತಿಯಂದು ಇದು ಆರಂಭ ಆಗಲಿದೆ. ಇದರಲ್ಲಿ ಇಬ್ಬರು ಕನ್ನಡದ ನಿರ್ದೇಶಕರ ಫೋಟೋ ಇದೆ.
ಇತ್ತೀಚೆಗೆ ನಿರ್ಮಾಣ ಆಗುತ್ತಿರುವ ಮಲ್ಟಿಪ್ಲೆಕ್ಸ್ ಅನ್ನು ಅಂದಗಾಣಿಸಲು ನಾನಾ ತಂತ್ರಗಳನ್ನು ಬಳಸಲಾಗುತ್ತಿದೆ. ಐಕಾನಿಕ್ ಸಿನಿಮಾದ ಹೆಸರುಗಳನ್ನು ಬರೆಯೋದು, ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ತೆಗೆದ ಅಪರೂಪದ ಫೋಟೋಗಳನ್ನು ಫ್ರೇಮ್ ಹಾಕೋದು ಅಥವಾ ಖ್ಯಾತ ನಿರ್ದೇಶಕರು/ನಟರ ಫೋಟೋಗಳನ್ನು ಹಾಕೋದನ್ನ ಮಾಡುತ್ತಿದ್ದಾರೆ. ಈಗ ಅಲ್ಲು ಅರ್ಜುನ್ ಕೂಡ ಇದನ್ನೇ ಮಾಡಿದ್ದಾರೆ.
ಕೋಕಾಪೇಟ್ನಲ್ಲಿ ನಿರ್ಮಾಣ ಆಗಿರುವ ‘ಅಲ್ಲು ಸಿನಿಮಾಸ್’ ಒಳದ ಗೋಡೆಯ ಮೇಲೆ ಹಲವು ನಿರ್ದೇಶಕರ ಫೋಟೋಗಳಿವೆ. ಇದರಲ್ಲಿ ಕನ್ನಡದ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಫೋಟೋ ಕೂಡ ಇದೆ. ತೆಲುಗು ನಿರ್ದೇಶಕರಾದ ರಾಜಮೌಳಿ, ಸುಕುಮಾರ್, ತ್ರಿವಿಕ್ರಂ ಶ್ರೀನಿವಾಸ್ ಫೋಟೋಗಳಿವೆ. ತಮಿಳಿನ ಮಣಿರತ್ನಂ, ವೆಟ್ರಿಮಾರನ್, ಅಟ್ಲೀ ಭಾವಚಿತ್ರ ಹಾಕಲಾಗಿದೆ. ಹಿಂದಿಯ ರಾಜ್ಕುಮಾರ್ ಹಿರಾನಿ, ಸಂದೀಪ್ ರೆಡ್ಡಿ ವಂಗ ಸೇರಿದಂತೆ ಇನ್ನೂ ಕೆಲವು ನಿರ್ದೇಶಕರ ಫೋಟೋಗಳು ಇವೆ. ಈ ವಿಡಿಯೋ ವೈರಲ್ ಆಗುತ್ತಿದೆ. ಕನ್ನಡಿಗರಿಂದ ಇದಕ್ಕೆ ಮೆಚ್ಚುಗೆ ಸಿಕ್ಕಿದೆ.
ಕೋಕಾಪೇಟ್ನಲ್ಲಿ ಅಲ್ಲು ಚಿತ್ರಮಂದಿರಗಳು ಈ ಸಂಕ್ರಾಂತಿಯಂದು (ಜನವರಿ 14/15) ತೆರೆಯುವ ಸಾಧ್ಯತೆಯಿದೆ👌 ತೆಲುಗು ರಾಜ್ಯಗಳಲ್ಲಿ ಮೊದಲ ಡಾಲ್ಬಿ ಸಿನಿಮಾ (ಡಾಲ್ಬಿ ವಿಷನ್ + ಡಾಲ್ಬಿ ಅಟ್ಮಾಸ್ + ಸೀಟಿಂಗ್ ಡಿಸೈನ್) ಮತ್ತು 75 ಅಡಿ ಅಗಲದ ಪರದೆಯೊಂದಿಗೆ ಭಾರತದ ಅತಿದೊಡ್ಡ ಡಾಲ್ಬಿ ಪರದೆ. ಈ ಮಲ್ಟಿಪ್ಲೆಕ್ಸ್ ಪ್ರೀಮಿಯಂ ಕೋಕಾಪೆಟ್ ಜೀವನಶೈಲಿಗೆ ಹೆಚ್ಚಿನದನ್ನು ಸೇರಿಸುತ್ತದೆ. https://t.co/s5dfLX76HJ
— ಹೈದರಾಬಾದ್ ರಿಯಲ್ ಎಸ್ಟೇಟ್ ಮತ್ತು ಇನ್ಫ್ರಾ (@HydREGuide) ಜನವರಿ 3, 2026
ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಹೆಸರು ತೆಲುಗು ಜನರಿಗೆ. ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ಸರಣಿ ಸಿನಿಮಾ ನಿರ್ದೇಶಿಸಿ ಫೇಮಸ್ ಆದವರು. ತೆಲುಗಿನಲ್ಲೂ ಸಿನಿಮಾ ಮಾಡುತ್ತಿದ್ದಾರೆ. ರಿಷಬ್ ಅವರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ನಿರ್ದೇಶನದ ‘ಕಾಂತಾರ: ಅಧ್ಯಾಯ 1’ ತೆಲುಗು ರಾಜ್ಯಗಳಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಕಾರಣದಿಂದ ಇವರ ಫೋಟೋಗಳನ್ನು ಹಾಕಬಹುದು ಎನ್ನಬಹುದು.
ಇದನ್ನೂ ಓದಿ: ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಕೆ; ಅಲ್ಲು ಅರ್ಜುನ್ ಎಷ್ಟನೇ ಆರೋಪಿ?
ಅಲ್ಲು ಸಿನಿಮಾ ಸಂಕ್ರಾಂತಿಗೆ ಶುರುವಾಗುವ ಸಾಧ್ಯತೆ ಇದೆ. 75 ಅಡಿಯ ಪರದೆ ಇದೆ ಒಳ್ಳೆಯ ಅನುಭವ ಪಡೆಯಲು ಮಲ್ಟಿಪ್ಲೆಕ್ಸ್ ಸಹಕಾರಿ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.
ರಂದು ಪ್ರಕಟಿಸಲಾಗಿದೆ – 7:35 am, ಸೋಮ, 5 ಜನವರಿ 26