ಬೆಂಗಳೂರು, ಜ.5: ಬೆಂಗಳೂರಿನಲ್ಲಿ ಸಂಚಾರ ಉಲ್ಲಂಘನೆಗೆ ಹಲವು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕಿಗೆ ಬರುತ್ತಿವೆ. ಪ್ರತಿದಿನ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್ ಇಲಾಖೆ ಒಂದಲ್ಲ ಒಂದು ರೀತಿಯಲ್ಲಿ ಎಚ್ಚರಿಕೆ ನೀಡುತ್ತಿದ್ದರೂ ಅದನ್ನು ಲೆಕ್ಕಿಸದೆ ಜನ ಪೊಲೀಸರ ಕಣ್ತಪ್ಪಿಸಿ ಸಂಚಾರ ಉಲ್ಲಂಘನೆ ಮಾಡುತ್ತಾರೆ. ಆದರೆ ಇನ್ಮುಂದೆ ಇದು ಸಾಧ್ಯವಿಲ್ಲ, ಹೊಸ ತಂತ್ರಜ್ಞಾನವೊಂದು ಪರಿಚಯಿಸಲಾಗಿದೆ. ಸ್ಥಳೀಯ ಸಂಚಾರ ಶಿಸ್ತಿನ ಕಳಪೆ ಸ್ಥಿತಿಯಿಂದ ಬೇಸತ್ತ ಬೆಂಗಳೂರು ಮೂಲದ ತಂತ್ರಜ್ಞರು ಕೃತಕ ಬುದ್ಧಿಮತ್ತೆ ಮೂಲಕ ಹೆಲ್ಮೆಟ್ (AI ಹೆಲ್ಮೆಟ್) ಟ್ರಾಫಿಕ್ ಪೊಲೀಸ್ ಸಾಮಾಜಿಕ ಸಾಧನವಾಗಿ ಪರಿವರ್ತನೆ ಎಂಬ ಜಾಲತಾಣದಲ್ಲಿ ವೈರಲ್ ಆಗಿದೆ.
ನಾನು ಪ್ರತಿದಿನ ಜನ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಮಾಡುವುದನ್ನು ನೋಡಿದ್ದೇನೆ. ಇದನ್ನು ನೋಡಿ ನೋಡಿ ಸಾಕಾಗಿದೆ. ಅದಕ್ಕಾಗಿ ನನ್ನ ಹೆಲ್ಮೆಟ್ ಅನ್ನು ಐ ಸಾಧನವಾಗಿ ಪರಿವರ್ತಿಸಿ, ಈ ಮೂಲಕ ಪೊಲೀಸರಿಗೆ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಮಾಹಿತಿ ನೀಡಿ ಎಂದು ಪಂಕಜ್ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಐ ತಂತ್ರಜ್ಞಾನವು ನೈಜ ಸಮಯದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದವರ ವಾಹನ ಮತ್ತು ಮುಖವನ್ನು ಸೆರೆಹಿಡಿಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಕಳೆದ ವರ್ಷಕ್ಕಿಂತ ಈ ವರ್ಷ ಕುಸಿಯಲಿದೆ ಬೆಂಗಳೂರಿನ ಏರ್ ಕ್ವಾಲಿಟಿ?
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ನಾನು ರಸ್ತೆಯಲ್ಲಿ ಮೂರ್ಖ ಜನರಿಂದ ಬೇಸತ್ತಿದ್ದೇನೆ ಆದ್ದರಿಂದ ನಾನು ನನ್ನ ಹೆಲ್ಮೆಟ್ ಅನ್ನು ಟ್ರಾಫಿಕ್ ಪೊಲೀಸ್ ಸಾಧನಕ್ಕೆ ಹ್ಯಾಕ್ ಮಾಡಿದೆ 🚨
ನಾನು ಸವಾರಿ ಮಾಡುವಾಗ, AI ಏಜೆಂಟ್ ನೈಜ ಸಮಯದಲ್ಲಿ ಓಡುತ್ತಾನೆ, ಉಲ್ಲಂಘನೆಗಳನ್ನು ಫ್ಲ್ಯಾಗ್ ಮಾಡುತ್ತಾನೆ ಮತ್ತು ಸ್ಥಳದೊಂದಿಗೆ ಪುರಾವೆ ಮತ್ತು ಯಾವುದೇ ಪ್ಲೇಟ್ ನೇರವಾಗಿ ಪೊಲೀಸರಿಗೆ ಹೋಗುವುದಿಲ್ಲ.
blr ಜನರು – ಆದ್ದರಿಂದ ಈಗ ಸುರಕ್ಷಿತವಾಗಿ ಸವಾರಿ ಮಾಡಿ … ಅಥವಾ ವಿಷಾದಿಸಿ. pic.twitter.com/lWaRO01Jaq
– ಪಂಕಜ್ (@the2ndfloorguy) ಜನವರಿ 3, 2026
ಈ ಸಾಧನವೂ ಸ್ಥಳ ಮತ್ತು ನಂಬರ್ ಪ್ಲೇಟ್‌ನೊಂದಿಗೆ ನೇರವಾಗಿ ಪೊಲೀಸರಿಗೆ ಸಂಪರ್ಕವನ್ನು ಸಾಧಿಸುತ್ತದೆ. ಬೆಂಗಳೂರಿನ ಜನರೇ, ಈಗ ಸುರಕ್ಷಿತವಾಗಿ ಸವಾರಿ ಮಾಡಿ ಎಂದು ಈ ಪೋಸ್ಟ್‌ನಲ್ಲಿ ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವವರ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಕಮೆಂಟ್ ಮಾಡಿದ್ದಾರೆ. ಈ ಪೋಸ್ಟ್ 1.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಹೊಂದಿದೆ. ಇದೊಂದು ಉತ್ತಮ ತಂತ್ರಜ್ಞಾನ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇಂತಹ ತಂತ್ರಜ್ಞಾನಗಳು ಬರಬೇಕು. ಇದನ್ನು ಸರ್ಕಾರ ಸಂಚಾರ ನಿಮಯದ ಉಲ್ಲಂಘನೆ ಆಗದಂತೆ ನೋಡಿಕೊಳ್ಳಬೇಕು ಎಂದು ಮತ್ತೊಬ್ಬರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ