ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ

ವಾರಕ್ಕೆ ಎರಡು ರಜೆಗೆ ಆಗ್ರಹ: ಬ್ಯಾಂಕ್ ಉದ್ಯೋಗಿಗಳಿಂದ ಜ. 27ರಂದು ರಾಷ್ಟ್ರವ್ಯಾಪಿ ಮುಷ್ಕರ


ಜನವರಿ 5: ವಾರದ ಕಾರ್ಯದಿನಗಳನ್ನು ಐದಕ್ಕೆ ಮಿತಿಗೊಳಿಸುವುದು (5 ದಿನ ಕೆಲಸ ವಾರ) ಎಂದು ಬ್ಯಾಂಕ್ ಉದ್ಯೋಗಿಗಳು ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳ ವಿವಿಧ ಒಕ್ಕೂಟಗಳ ವೇದಿಕೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ ಬಿಯು) ಜನವರಿ 27 ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುತ್ತಿದೆ ಎಂದು ಪ್ರಕಟಿಸಲಾಗಿದೆ. ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳು ಮಹಾಒಕ್ಕೂಟ (ಎಐಬಿಒಸಿ) ಈ ನಿರ್ಧಾರವನ್ನು ತಿಳಿಸಿ ಜನವರಿ 4 ರಂದು ಸುತ್ತೋಲೆ ಹೊರಡಿಸಲಾಗಿದೆ.

ಬ್ಯಾಂಕುಗಳಲ್ಲಿ ಈಗ ಭಾನುವಾರದ ಜೊತೆಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರದ ರಜೆಗಳಿವೆ. ಆದರೆ, ವಾರದ ಅಷ್ಟೂ ಶನಿವಾರ ಮತ್ತು ಭಾನುವಾರದಂದು ವಾರದ ರಜೆಯಾಗಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಸಂಘಟನೆಗಳು ಆಗ್ರಹವಾಗಿದೆ.

ಬಹಳ ದಿನಗಳಿಂದಲೂ ಈ ಬೇಡಿಕೆ ಇದೆ. 2024ರ ಮಾರ್ಚ್‌ನಲ್ಲಿ ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಸಂಬಂಧ ಬ್ಯಾಂಕ್ ಉದ್ಯೋಗಿಗಳ ಯೂನಿಯನ್‌ಗಳು ಹಾಗೂ ಭಾರತೀಯ ಬ್ಯಾಂಕುಗಳ ಸಂಘಟನೆಯಾದ ಐಬಿಎ ನಡುವೆ ನಡೆದ ರಾಜಿಯ ವೇಳೆ ವಾರದ ರಜೆ ವಿಚಾರದ ಬಗ್ಗೆ ಸಮ್ಮತಿ ಕೊಡಲಾಗಿದೆ. ಆದರೆ, ಸರ್ಕಾರದಿಂದ ಇನ್ನೂ ತೀರ್ಮಾನ ಬಂದಿಲ್ಲ ಎಂದು ಬ್ಯಾಂಕ್ ಉದ್ಯೋಗಿಗಳ ಆಕ್ರೋಶವಾಗಿದೆ.

ಇದನ್ನೂ ಓದಿ: 2025ರಲ್ಲಿ 22,830 ಕೋಟಿ ಯುಪಿಐ ಟ್ರಾನ್ಸಾಕ್ಷನ್; ಡಿಸೆಂಬರ್ ನಲ್ಲಿ 2,160 ಕೋಟಿ ವಹಿವಾಟು

‘ಬ್ಯಾಂಕ್ ಯೂನಿಯನ್‌ಗಳ ಮನವಿಗೆ ಸರ್ಕಾರ ಕಿವಿಗೊಡದ ದಿನಾಂಕ 2026 ರ ಜನವರಿ 27 ರಂದು ಎಲ್ಲಾ ಬ್ಯಾಂಕುಗಳ ದೇಶವ್ಯಾಪಿ ಮುಷ್ಕರಕ್ಕೆ ಕರೆ ಕೊಡಲು ನಿರ್ಧರಿಸಲಾಗಿದೆ. ಈ ಮುಷ್ಕರವನ್ನು ಯಶಸ್ವಿಗೊಳಿಸಿ’ ಎಂದು ಸುತ್ತೋಲೆಯಲ್ಲಿ ಮನವಿ ಮಾಡಿದರು.

ದಿನಕ್ಕೆ ಹೆಚ್ಚು ಹೊತ್ತು ಕೆಲಸ ಮಾಡಲು ಸಿದ್ಧ

ಈ ಹಿಂದೆ ನಡೆದ ಸಂಧಾನದ ವೇಳೆ ಬ್ಯಾಂಕ್ ಉದ್ಯೋಗಿಗಳಿಗೆ ವಾರಕ್ಕೆ ಎರಡು ದಿನ ವೀಕಾಫ್ ಕೊಡುವುದಕ್ಕೆ ಬದಲಾಗಿ, ಉದ್ಯೋಗಿಗಳು ದಿನದಲ್ಲಿ 40 ನಿಮಿಷಗಳಷ್ಟು ಹೆಚ್ಚು ಅವಧಿ ಕೆಲಸ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಅದಕ್ಕೆ ಯೂನಿಯನ್‌ಗಳೂ ಒಪ್ಪಿದವು. ಬ್ಯಾಂಕ್ ಉದ್ಯೋಗಿಗಳ ವಾರದ ಕೆಲಸದಲ್ಲಿ ಕಡಿಮೆ ಆಗದ ರೀತಿಯಲ್ಲಿ ರಜೆ ಸಂಖ್ಯೆ ಹೆಚ್ಚಿಸುವ ಸೂತ್ರ ಅದಾಗಿತ್ತು.

ಇದನ್ನೂ ಓದಿ: ಎಟಿಎಂಗಳಲ್ಲಿ ಮಾರ್ಚ್ ನಂತರ 500 ರೂ ನೋಟು ಸಿಗಲ್ವಾ? ಸ್ಪಷ್ಟನೆ ಇದು

ವಿವಿಧ ಸರ್ಕಾರಿ ಕಚೇರಿಗಳಲ್ಲಿ ವಾರಕ್ಕೆ ಎರಡು ದಿನ ರಜೆ ಇದೆ. ಆರ್ಬಿಐ, ಎಲ್ ಐಸಿ, ಷೇರು ವಿನಿಮಯ ಕೇಂದ್ರ ಹೀಗೆ ಅನೇಕ ಕಡೆ ವಾರಕ್ಕೆ ಎರಡು ವೀಕಾಫ್‌ಗಳಿವೆ. ಅದರಂತೆ ತಮಗೂ ಎರಡು ದಿನ ರಜೆ ಕೊಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ.

ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *