ಬೆಂಗಳೂರು, ಜ.5: ಬೆಂಗಳೂರಿಗರಿಗೆ ಮತ್ತೊಂದು ಶಾಕ್ (ಬೆಂಗಳೂರು ಪಾರ್ಕಿಂಗ್ ಶುಲ್ಕ) ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ, ಸಿಕ್ಕ ಸಿಕ್ಕ ಕಡೆ ವಾಹನ ನಿಲುಗಡೆ ಮಾಡುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಬೇಕು. ಗ್ರೇಟರ್ ಬೆಂಗಳೂರು ಅಧಿಕಾರಿಗಳಿಗೆ ಶುಲ್ಕ ವಿಧಿಸುವ ಮೂಲಕ ಬೆಂಗಳೂರು ಜನರಿಗೆ ಪಾರ್ಕಿಂಗ್ ರೂಲ್ಸ್ ಮಾಡುವ ನಿಯಮವನ್ನು ಹೇಳಿಕೊಡುವ ಕೆಲಸವನ್ನು ಮಾಡಬೇಕಾಗಿದೆ. ಇನ್ಮುಂದೆ ಸಿಬಿಡಿ, ಹೆಬ್ಬಾಳ ಮತ್ತು ಯಲಹಂಕದಂತಹ ಪ್ರದೇಶಗಳಲ್ಲಿನ ಬೀದಿಗಳಲ್ಲಿ ವಾಹನಗಳ ಪಾರ್ಕಿಂಗ್ ಶುಲ್ಕವನ್ನು ವಿಧಿಸಲು ಪ್ರಾರಂಭಿಸಲಾಗಿದೆ. ವಿವಿಧ ವಾಹನಗಳ ಪಾರ್ಕಿಂಗ್ ಶುಲ್ಕಗಳನ್ನು ನಿಗದಿಪಡಿಸಲಾಗಿದೆ. ಈ ಕೆಳಂಗಿನಂತಿದೆ.
ನಾಲ್ಕು ವಾಹನಗಳ ಪಾರ್ಕಿಂಗ್ ಚಕ್ರ ಗಂಟೆಗೆ 30 ರೂ. ಶುಲ್ಕ ವಿಧಿಸಲಾಗಿದೆ. ದ್ವಿಚಕ್ರ ವಾಹನ ಗಂಟೆಗೆ 15 ರೂ. ಸಿಕ್ಕಿತು. ದೈನಂದಿನ ಪಾಸ್‌ಗೂ ಅರ್ಜಿ ಸಲ್ಲಿಸಬಹುದು, ಇದು ನಾಲ್ಕು ಚಕ್ರದ ವಾಹನಗಳು ಮತ್ತು ದ್ವಿಚಕ್ರ ವಾಹನಗಳಿಗೆ 150 ಮತ್ತು 75 ರೂ. ಎಂದು ನಿಗದಿ ಮಾಡಿದೆ. ಮಾಸಿಕ ಪಾಸ್‌ಗಳಿಗೆ, ನಾಲ್ಕು ಚಕ್ರಗಳ ವಾಹನ ನಿಲುಗಡೆಗೆ 3,000 ರೂ. ಮತ್ತು ದ್ವಿಚಕ್ರ ವಾಹನಗಳಿಗೆ 1,500 ರೂ. ಸಿಕ್ಕಿತು.
ಇದನ್ನೂ ಓದಿ: ಇನ್ಸ್ಟಾಗ್ರಾಮ್ನಲ್ಲಿ 2,000 ಫಾಲೋವರ್ಸ್ ಗಳಿಸಿದ ಮಹಿಳೆ: ಕೇಕ್ ಕಟ್ ಮಾಡಿ ಸಂಭ್ರಮಿಸಿದ ಬಾಸ್
ಎಕ್ಸ್ ವೈರಲ್ ಪೋಸ್ಟ್ ಇಲ್ಲಿದೆ ನೋಡಿ:
ಬೆಂಗಳೂರು ಶೀಘ್ರದಲ್ಲೇ ಸಿಬಿಡಿ, ಹೆಬ್ಬಾಳ ಮತ್ತು ಯಲಹಂಕ ಸೇರಿದಂತೆ ಆಯ್ದ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಲು ಪ್ರಾರಂಭಿಸುತ್ತದೆ.
ಪಾರ್ಕಿಂಗ್ ಶುಲ್ಕ: ನಾಲ್ಕು ಚಕ್ರದ ವಾಹನಗಳಿಗೆ ಗಂಟೆಗೆ ₹30 ಮತ್ತು ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹15. ದೈನಂದಿನ ಪಾಸ್ಗಳು ₹150 ಮತ್ತು ₹75 ಮತ್ತು ಮಾಸಿಕ ಪಾಸ್ಗಳು ಕ್ರಮವಾಗಿ ₹3,000 ಮತ್ತು ₹1,500… pic.twitter.com/bCnGa6ALWE
— ChristinMathewPhilip (@ChristinMP_) ಜನವರಿ 3, 2026
ಪಾರ್ಕಿಂಗ್ ಶುಲ್ಕ ಸಂಗ್ರಹ ಮಾಡುವ ಪ್ರದೇಶಗಳು:
ಹೆಬ್ಬಾಳ ವಿಭಾಗದ ಟ್ಯಾಂಕ್ ಬಂಡ್ ರಸ್ತೆ, ತರಳಬಾಳು ರಸ್ತೆ ಮತ್ತು ಭೂಪಸಂದ್ರ ಮುಖ್ಯ ರಸ್ತೆ. ಯಲಹಂಕ ಹೊಸ ಪಟ್ಟಣದ ವಾರ್ಡ್ ಸಂಖ್ಯೆ 05 ರಲ್ಲಿ 1 ನೇ ಎ, 13 ನೇ ಮುಖ್ಯ ರಸ್ತೆಗಳು ಮತ್ತು 3 ನೇ ಬಿ, 16 ನೇ ಬಿ, 15 ನೇ ಎ ಅಡ್ಡ ರಸ್ತೆಗಳು ಮತ್ತು ಸಂದೀಪ್ ಉನ್ನಿಕೃಷ್ಣ ರಸ್ತೆ ಮತ್ತು ಇತರ ಪ್ರದೇಶಗಳಿಗೆ ಇದನ್ನು ಮುಂದುವರಿಸಲಾಗಿದೆ. ಈ ಮೂಲಕ ಸಿಕ್ಕ ಸಿಕ್ಕ ಕಡೆ ಬೇಕಾಬಿಟ್ಟಿ ವಾಹನ ನಿಲುಗಡೆ ಮಾಡುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಜನರು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಕಿರುವ ತೆರಿಗೆ ಹೈರಾಣಾಗಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ