ಕನ್ನಡ ಮಾತನಾಡದಂತೆ ಹಾಸ್ಟೆಲ್ ವಾರ್ಡನ್ ಧಮ್ಕಿ: ಬೆಂಗಳೂರಿನ ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ

ಕನ್ನಡ ಮಾತನಾಡದಂತೆ ಹಾಸ್ಟೆಲ್ ವಾರ್ಡನ್ ಧಮ್ಕಿ: ಬೆಂಗಳೂರಿನ ಕಾಲೇಜು ಮುಂಭಾಗ ಭಾರಿ ಪ್ರತಿಭಟನೆ


ಬೆಂಗಳೂರು, ಜನವರಿ 5: ಕನ್ನಡ ಹಾಸ್ಟೆಲ್ ವಾರ್ಡನ್ ಧಮ್ಕಿ ಹಾಕಿರುವುದನ್ನು ಖಂಡಿಸಿ ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಬನ್ನೇಘಟ್ಟ ರಸ್ತೆಯ ಕಲ್ಕೆರೆ ಸಮೀಪದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಕನ್ನಡಪರ ಸಂಘಟನೆಗಳು ಸೋಮವಾರ ಭಾರಿ ಪ್ರತಿಭಟನೆ ನಡೆಸಿದವು. ಪರಿಣಾಮವಾಗಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಇಂದು ನಡೆಯಬೇಕಿದ್ದ ಇಂಟರ್ನಲ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಆಡಳಿತವೇ ಎಚ್ಚೆತ್ತುಕೊಂಡಿರುವ ಕಾಲೇಜು ಮಂಡಳಿ, ಹಾಸ್ಟೆಲ್ ವಾರ್ಡನ್ ಸುರೇಶ್ ಎಂಬವರ ಕೆಲಸದಿಂದ ವಜಾಗೊಳಿಸಲಾಗಿದೆ.

ಕನ್ನಡ ಮಾತನಾಡಿದ ವಾರ್ಡನ್ ಡಬ್ಬಾಳಿಕೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಾಲೇಜು ಮುಂಭಾಗ ಪ್ರತಿಭಟನೆ. ‘ಕರ್ನಾಟಕದ ಖಾಸಗಿ ಕಾಲೇಜುಗಳಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ನಿಲ್ಲಬೇಕು. ಉಪನ್ಯಾಸಕರ ಮೇಲಿನ ದಬ್ಬಾಳಿಕೆ ನಿಲ್ಲಬೇಕು’ ಎಂದು ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಇದನ್ನೂ ಓದಿ: ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್

ಕರ್ನಾಟಕದ ಹೆಚ್ಚಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *