ಶಿಲಾನ್ಯಾಸ ಕಆರ್ಯಕ್ರಮದ ವೇಳೆ ಕುರ್ಚಿ ತೂರಾಟ
ಕೊಪ್ಪಳ, ಜನವರಿ 05: ತಾಲೂಕಿನ ಹಿಟ್ನಾಳ ಗ್ರಾಮದಲ್ಲಿ ಮೇಲ್ಸೇತುವೆ ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮದ ವೇಳೆ ಭಾರಿ ಹೈಡ್ರಾಮವೇ ನಡೆದಿದೆ. ಶಿಷ್ಟಾಚಾರ ಪಾಲಿಸಿಲ್ಲ ಎಂದು ಆರೋಪಿಸಿ ಕೇಂದ್ರ ಸಚಿವ ಸೋಮಣ್ಣ ಎದುರೇ ಕಾಂಗ್ರೆಸ್ ಕಾರ್ಯಕರ್ತರು ರೋಷಾವೇಷ ಪ್ರದರ್ಶಿಸಿದ್ದಾರೆ. ಕಾರ್ಯಕ್ರಮದ ಪತ್ರಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಸಂಸದರ ಹೆಸರಿಲ್ಲದಿದ್ದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಕುರ್ಚಿ ಎಸೆದು ರಂಪಾಟ ಪ್ರದರ್ಶಿಸಿದ್ದಾರೆ. ಈ ಕೇವಲ ಹಿನ್ನೆಲೆ 5 ನಿಮಿಷಗಳ ಕಾಲ ಸ್ಥಳದಲ್ಲಿದ್ದು, ಬಳಿಕ ವಿ. ಸೋಮಣ್ಣ ತೆರಳಿದ್ದಾರೆ.
ಸೋಮಣ್ಣ ಮೇಲೂ ಕುರ್ಚಿ ತೂರಾಟ
ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸಚಿವ ಸೋಮಣ್ಣ ಅವರತ್ತಲೂ ಕುರ್ಚಿ ತೂರಿದ್ದಾರೆ. ಶಂಕು ಸ್ಥಾಪನೆ ಮುಗಿಸಿ ಅವರು ಹೊರಡುತ್ತಿದ್ದ ವೇಳೆ ಘಟನೆ ನಡೆದಿದ್ದು, ಈ ವೇಳೆ ಅಂಗರಕ್ಷಕರು ಸೋಮಣ್ಣರತ್ತ ಬರುತ್ತಿದ್ದ ಕುರ್ಚಿಗಳನ್ನು ತಡೆದಿದ್ದಾರೆ. ಇದರಿಂದ ಸಂಭವನೀಯ ಅನಾಹುತ ತಪ್ಪಿದೆ.
ಇದನ್ನೂ ಓದಿ: ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
ಘಟನೆಯ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ಸೋಮಣ್ಣ, ಯಾವುದೇ ಶಿಷ್ಟಾಚಾರ ಉಲ್ಲಂಘನೆ ಆಗಿಲ್ಲ. ಆದರೂ ಕಾರ್ಯಕರ್ತರು ಗಲಾಟೆ ಮಾಡಿದ್ದಾರೆ. ಸುಮಾರು 27 ಕೋಟಿ. ರೂಪಾಯಿಯ ಹಿಟ್ನಾಳ್, ಮುನಿರಾಬಾದ್, ಗಿಣಗೇರಾ ಮೇಲ್ಸೇತುವೆ ಕಾಮಗಾರಿ ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಹಣದಲ್ಲಿ ಅಂತ್ಯಗೊಂಡಿತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ರಂದು ಪ್ರಕಟಿಸಲಾಗಿದೆ – 2:49 pm, ಸೋಮ, 5 ಜನವರಿ 26